ಶುಭ ಕಾರ್ಯದೊಂದಿಗೆ ಈ ರಾಶಿಗೆ ಶುಭ ಒಲಿಯಲಿದೆ

ಮೇಷ
ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.
ಹಳೆಯ ಸಂಬಂಧಗಳು ಮತ್ತಷ್ಟು ಗಟ್ಟಿ
ಯಾಗಲಿವೆ. ಕೆಲಸದಲ್ಲಿ ಪ್ರಗತಿಯಾಗಲಿದೆ.

ವೃಷಭ
ಹಿಂದಿನ ಮಧುರ ಕ್ಷಣಗಳು ನಿಮ್ಮ
ಸಂತೋಷವನ್ನು ಹೆಚ್ಚಿಸಲಿವೆ. ಸಾಮಾಜಿಕ
ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದೀರಿ.

ಮಿಥುನ
ಸಣ್ಣ ತಪ್ಪಿಗೂ ದೊಡ್ಡ ಅನಾಹುತ ಮಾಡುವ
ಶಕ್ತಿ ಇರುತ್ತದೆ. ಎಚ್ಚರಿಕೆಯಿಂದ ಮುಂದೆ
ನಡೆಯಿರಿ. ಅತಿ ಲಾಭದ ಆಸೆ ಬೇಡ.

ಕಟಕ
ಖರ್ಚಿನ ಮೇಲೆ ಹಿಡಿತವಿರಲಿ. ಮೋಜು,
ಮಜಾ ಮಸ್ತಿಗೆ ಬ್ರೇಕ್ ಹಾಕಿ. ಹೊಸ ವ್ಯಕ್ತಿಗಳ
ಪರಿಚಯವಾಗಲಿದೆ. ಕೆಲಸದಲ್ಲಿ ಪ್ರಗತಿ.

ಸಿಂಹ
ಪರರ ಹಿತವನ್ನು ಬಯಸಿದಷ್ಟೂ ನಿಮ್ಮ ಹಿತ
ಸಾಧ್ಯವಾಗಲಿದೆ. ವಿವಿಧ ಕಾರ್ಯಕ್ರಮಗಳಲ್ಲಿ
ತೊಡಗಿಸಿಕೊಳ್ಳಲಿದ್ದೀರಿ. ಶುಭ ಫಲ.

ಕನ್ಯಾ
ನಾನು ನಾನು ಎಂದು ಅಹಂ ಪಡದೇ
ಎಲ್ಲರೊಂದಿಗೂ ಒಂದಾಗಿ ಬಾಳುವೆ ಮಾಡಿ.
ಸಣ್ಣ ಸಮಸ್ಯೆಗೆ ಹೆದರಿ ಕೂರುವುದು ಬೇಡ.

ತುಲಾ 
ಆಲೋಚನೆ ಮಾಡುತ್ತಾ ಕುಳಿತರೆ ಸಾಲದು,
ಅದನ್ನು ಕಾರ್ಯರೂಪಕ್ಕೆ ಇಳಿಸುವ ಕೆಲಸ
ಮಾಡಬೇಕು. ಆತ್ಮವಿಶ್ವಾಸ ಹೆಚ್ಚಾಗಲಿದೆ.

ವೃಶ್ಚಿಕ
ಸಮಸ್ಯೆಗಳು ಯಾವಾಗಲೂ ಇರುತ್ತವೆ.
ಅವುಗಳಿಗೆ ಮಾನ್ಯತೆ ನೀಡದೇ ಇರುವ
ಸಂತೋಷವನ್ನು ನೆನೆದು ಮುಂದೆ ಸಾಗಿ. 

ಧನುಸ್ಸು
ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಲಿ
ದ್ದೀರಿ. ಆದಾಯದಲ್ಲಿ ಏರಿಕೆಯಾಗಲಿದೆ.
ಬಂಧುಗಳೊಂದಿಗೆ ವ್ಯವಹಾರ ಬೇಡ.

ಮಕರ
ನಾಳೆಯನ್ನು ನೆನೆಯುತ್ತಾ ಈ ದಿನವನ್ನು
ಹಾಳು ಮಾಡಿಕೊಳ್ಳಬೇಡಿ. ಬಹುದಿನಗಳ
ಗೊಂದಲಕ್ಕೆ ಇಂದು ತೆರೆ ಬೀಳಲಿದೆ.

ಕುಂಭ
ನಿಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು
ಕೂರುವುದು ಬೇಡ. ಕೆಲವು ವೇಳೆ ಅನಿವಾರ್ಯ
ವಾಗಿ ಸೋಲಬೇಕಾಗಿ ಬರಬಹುದು.

ಮೀನ 
ಆರೋಗ್ಯದಲ್ಲಿ ತುಸು ಏರುಪೇರು
ಉಂಟಾಗಲಿದೆ. ಆತ್ಮೀಯರಿಂದ ನಿಮಗೆ
ಆರ್ಥಿಕ ಸಹಕಾರ ದೊರೆಯಲಿದೆ.