ಈ ರಾಶಿಗೆ ಈ ದಿನ ಅತ್ಯಂತ ಸಂತೋಷದಾಯಕ

ಮೇಷ
ಸಗಣಿಯೊಂದಿಗೆ ಸರಸಕ್ಕಿಂತ ಗಂಧದ ಜೊತೆ
ಗುದ್ದಾಡುವುದು ಲೇಸು. ಎಲ್ಲದರಲ್ಲಿಯೂ
ತಪ್ಪನ್ನು ಹುಡುಕುವುದು ತರವಲ್ಲ.

ವೃಷಭ
ನಿಮ್ಮಷ್ಟಕ್ಕೆ ನೀವು ಇಡೀ ದಿನ ಇದ್ದು ಬಿಡಲಿ
ದ್ದೀರಿ. ಹಳೆಯ ಸಾಲಗಳಿಂದ ಮುಕ್ತರಾಗಲಿ
ದ್ದೀರಿ. ಮಕ್ಕಳಿಂದ ಸಂತೋಷ ಲಭ್ಯವಾಗಲಿದೆ.

ಮಿಥುನ
ಹೊಸ ಕೆಲಸ ಶುರು ಮಾಡಿದಾಗ ಮೊದಲಿಗೆ
ಇದ್ದಷ್ಟೇ ಉತ್ಸಾಹವನ್ನು ಕಡೆಯವರೆಗೂ
ಕಾಯ್ದುಕೊಳ್ಳಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕಟಕ
ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ
ಎಚ್ಚರ ಇರಲಿ. ಲಾಭದ ಆಸೆಗೆ ಬಿದ್ದು ಮೋಸ
ಹೋಗದಿರಿ. ಸಮಯಕ್ಕೆ ಸರಿಯಾಗಿ ವರ್ತಿಸಿ.

ಸಿಂಹ
ಹಣ್ಣು ತಿಂದವರು ಯಾರೋ, ಆದರೆ
ಅಪವಾದ ನಿಮ್ಮ ಮೇಲೆ ಬರಲಿದೆ.
ಧೈರ್ಯವಾಗಿ ಬಂದದ್ದನ್ನು ಎದುರಿಸಿ ನಿಲ್ಲಿ.

ಕನ್ಯಾ
ನೀವು ಮತ್ತೊಬ್ಬರ ಕಡೆಗೆ ಒಂದು ಬೆರಳು
ತೋರಿದರೆ ಮಿಕ್ಕ ನಾಲ್ಕು ಬೆರಳುಗಳು ನಿಮ್ಮ
ಕಡೆಯೇ ತೋರುತ್ತಿರುತ್ತವೆ. ಎಚ್ಚರ ಇರಲಿ.

ತುಲಾ 
ಇಂದು ಮಾಡುವ ಸಣ್ಣ ತಪ್ಪು ಮುಂದೆ ದೊಡ್ಡ
ಅನಾಹುತವನ್ನೇ ಮಾಡೀತು. ಅದಕ್ಕೆ ಅವಕಾಶ
ಮಾಡಿಕೊಡಿದಿರಿ. ಲಾಭ ಹೆಚ್ಚಾಗಲಿದೆ.

ವೃಶ್ಚಿಕ
ನಿಮ್ಮದೇ ಹಣ ಇಂದು ನಿಮಗೆ ಶತ್ರುವಾಗ
ಲಿದೆ. ಮನಸ್ಸನ್ನು ತಿಳಿಯಾಗಿ ಇಟ್ಟುಕೊಳ್ಳಿ.
ಸಂಕಟ ಬಂದಾಗ ವೆಂಕಟರಮಣ. 

ಧನುಸ್ಸು
ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ
ಕಂಡುಬರಲಿದೆ. ಎಲ್ಲರೊಂದಿಗೂ ಆತ್ಮೀಯ
ವಾಗಿ ವರ್ತಿಸುವಿರಿ. ಸಂತೋಷ ಹಂಚುವಿರಿ.

ಮಕರ
ಸಮಯ ನೋಡಿಕೊಂಡು ದಾಳ ಉರುಳಿಸಿ.
ಖಾಲಿ ಜೇಬಿನಲ್ಲಿಯೂ ಏನನ್ನಾದರೂ
ಮಾಡುವೆ ಎನ್ನುವ ಉತ್ಸಾಹ ನಿಮ್ಮದು.

ಕುಂಭ
ಕೋಪಗೊಂಡ ವೇಳೆಯಲ್ಲಿ ಯಾವುದೇ
ನಿರ್ಧಾರ ಮಾಡುವುದಕ್ಕೆ ಹೋಗದಿರಿ. ಸಾಧ್ಯ
ವಾದರೆ ಒಳಿತು ಮಾಡಿ, ಇಲ್ಲ ಸುಮ್ಮನಿರಿ.

ಮೀನ 
ಕಣ್ಣು ಬಯಸಿದ್ದೆಲ್ಲವನ್ನೂ ಪೂರೈಸಿಕೊಳ್ಳಲು
ಮುಂದಾಗದಿರಿ. ಹುಚ್ಚು ಆಸೆಗಳಿಗೆ ಅಣೆಕಟ್ಟೆ
ಕಟ್ಟಿ ಮುಂದೆ ಸಾಗುತ್ತಿರಿ. ಶುಭ ಫಲ