ಈ ರಾಶಿಯವರಿಗೆ ಶುಭವೊಂದು ಎದುರಾಗುತ್ತಿದೆ

ಮೇಷ
ಇಡೀ ದಿನ ನೀವೂ ಸಂತೋಷವಾಗಿರಲಿದ್ದೀರಿ,
ನಿಮ್ಮ ಸುತ್ತಮುತ್ತಲಿನವರನ್ನೂ ಸಂತೋಷ
ವಾಗಿಡಲಿದ್ದೀರಿ. ಒಳ್ಳೆಯ ಅವಕಾಶಗಳಿವೆ.

ವೃಷಭ
ಹಣ ಸಂಪಾದನೆಯೇ ಮುಖ್ಯ ಗುರಿಯಾಗ
ದಿರಲಿ, ಮಾನವೀಯತೆಗೂ ಬೆಲೆ ನೀಡಿ.
ನೋವುಗಳೇ ನಿಮ್ಮನ್ನು ಗಟ್ಟಿಗೊಳಿಸಲಿವೆ.

ಮಿಥುನ
ದೊಡ್ಡವರು ಮಾಡಿದ ತಪ್ಪಿನಿಂದಾಗಿ ನಿಮಗೆ
ಶಿಕ್ಷೆಯಾಗಲಿದೆ. ವಾಸ್ತವವನ್ನು ಅರಿತು
ಮುಂದೆ ಸಾಗಿ. ಧನಾಗಮನವಾಗಲಿದೆ.

ಕಟಕ
ಹಿಂದೆ ಅಂದುಕೊಂಡಿದ್ದ ಕಾರ್ಯವನ್ನು
ಮಾಡಲು ಇದು ಸಕಾಲ. ಆರೋಗ್ಯದಲ್ಲಿ
ಚೇತರಿಕೆ ಕಾಣಲಿದೆ. ಅನುಮಾನ ಬೇಡ.

ಸಿಂಹ
ಬೇರೆಯವರ ಸಾಧನೆ ನಿಮ್ಮಲ್ಲಿ ಸ್ಫೂರ್ತಿ
ತುಂಬಲಿದೆ. ಕೈಗೆ ಎಟುಕದ ವಸ್ತುಗಳ ಬಗ್ಗೆ
ಹೆಚ್ಚು ಚಿಂತೆ ಮಾಡುವುದು ಬೇಡ. 

ಕನ್ಯಾ
ನಿರ್ಲಕ್ಷ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ
ಬರದೇ ಉಳಿಯುತ್ತದೆ. ಸಂಬಂಧಗಳ ಬಗ್ಗೆ
ಹೆಚ್ಚು ಗಮನ ಕೇಂದ್ರೀಕರಿಸಿ. ಶುಭ ಫಲ.

ತುಲಾ 
ಅನಗತ್ಯವಾಗಿ ಕಾಲಹರಣ ಮಾಡುವುದು
ಬೇಡ. ನಿಗದಿತ ಸಮಯಕ್ಕೆ ಅಂದುಕೊಂಡ
ಕಾರ್ಯ ಮಾಡಿ ಮುಗಿಸಲಿದ್ದೀರಿ.

ವೃಶ್ಚಿಕ
ನಿಮಗೇ ಗೊತ್ತಿಲ್ಲದೇ ಶುಭ ಕಾರ್ಯವೊಂದಕ್ಕೆ
ಅಣಿಯಾಗುವಿರಿ. ಸರಕಾರಿ ಅಧಿಕಾರಿಗಳನ್ನು
ಭೇಟಿ ಮಾಡಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಲಿದೆ. 

ಧನುಸ್ಸು
ದೊಡ್ಡ ಮಟ್ಟದ ಕಾರ್ಯಗಳಿಗೆ ಇಂದಿ
ನಿಂದಲೇ ಸಣ್ಣ ಪ್ರಯತ್ನ ಮಾಡಲಿದ್ದೀರಿ.
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮಕರ
ಹಿಡಿದ ಕಾರ್ಯವನ್ನು ಸಂಜೆಯೊಳಗೆ ಮಾಡಿ
ಮುಗಿಸಲಿದ್ದೀರಿ. ಅನ್ಯ ಕಾರ್ಯನಿಮಿತ್ತ
ದೂರದ ಪ್ರಯಾಣ ಸಾಧ್ಯತೆ. ಶುಭ ಫಲ.

ಕುಂಭ
ಶುಭ ಸಮಾರಂಭಗಳಿಗೆ ಸಾಕ್ಷಿಯಾಗಲಿದ್ದೀರಿ.
ಮನಸ್ಸು ಗಟ್ಟಿಯಾಗಲಿದೆ. ಆರೋಗ್ಯದಲ್ಲಿ
ಚೇತರಿಕೆ ಕಂಡು ಬರಲಿದೆ. ಎಚ್ಚರ ಇರಲಿ.

ಮೀನ 
ನಿಮ್ಮ ನಿರೀಕ್ಷೆಗೆ ತಕ್ಕಂತೆ ಎಲ್ಲಾ ಕಾರ್ಯಗಳೂ
ನಡೆಯಲಿವೆ. ಮಾಡುವ ಕೆಲಸದ ಮೇಲೆ
ಆಸಕ್ತಿ ಇರಲಿ. ಸ್ನೇಹಿತರಿಂದ ನೆರವು ಸಿಗಲಿದೆ.