ಈ ರಾಶಿಗೆ ಮಾಡಿದ ಕೆಲಸದಲ್ಲಿ ಕೈ ತುಂಬ ಲಾಭ

ಮೇಷ
ನೀವು ಮಾಡಿದ ಯಡವಟ್ಟಿನಿಂದ ಮನೆ
ಯವರು ಇಡೀ ದಿನ ಪರಿತಪಿಸಬೇಕಾದೀತು.
ನಿಮ್ಮ ಮಾತುಗಳೇ ನಿಮಗೆ ವರವಾಗಲಿವೆ.

ವೃಷಭ
ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತು.
ತಂದೆಯ ಪ್ರೋತ್ಸಾಹದ ಫಲವಾಗಿ ಹೊಸ
ಕಾರ್ಯ ಕೈಗೂಡುತ್ತದೆ. ಲಾಭದಲ್ಲಿ ಹೆಚ್ಚಳ.

ಮಿಥುನ
ನೀವು ವಾಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ
ಇಟ್ಟುಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಇದು ಶುಭ
ದಿನ. ಅಂದುಕೊಂಡ ಕಾರ್ಯ ಆಗಲಿದೆ.

ಕಟಕ
ಗೆಲ್ಲುತ್ತೇನೆ ಎಂದು ಹೊರಟಾಗ ಸೋಲು
ವುದಕ್ಕೂ ಸಿದ್ಧವಿರಬೇಕು. ಅನಗತ್ಯವಾದ
ವಿಚಾರಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.

ಸಿಂಹ
ತಂದೆಯ ನಿರೀಕ್ಷೆಯಂತೆ ಕೆಲಸ ಮಾಡಲಿದ್ದೀರಿ.
ಬಂಧುಗಳೊಂದಿಗೆ ಸಣ್ಣ ಮನಸ್ತಾಪ ಉಂಟಾ
ಗಲಿದೆ. ವಾಹನ ಚಾಲನೆ ವೇಳೆ ಎಚ್ಚರವಿರಲಿ. 

ಕನ್ಯಾ
ವಿದ್ಯಾರ್ಥಿಗಳ ಪಾಲಿಗೆ ಇದು ಶುಭ ದಿನ.
ನಿನ್ನೆಯ ಆತಂಕಗಳೆಲ್ಲಾ ದೂರಾಗಲಿವೆ.
ಆತುರಕ್ಕೆ ಬಿದ್ದು ನಿರ್ಧಾರ ಮಾಡದಿರಿ.

ತುಲಾ 
ಹೊಸ ವಿಚಾರಗಳ ಬಗ್ಗೆ ಚಿಂತನೆ ಮಾಡಲಿ
ದ್ದೀರಿ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ
ದೊರೆಯಲಿದೆ. ಆರೋಗ್ಯದಲ್ಲಿ ವೃದ್ಧಿ.

ವೃಶ್ಚಿಕ
ದೂರದ ಪ್ರಯಾಣ ಸದ್ಯಕ್ಕೆ ಬೇಡ. ಮಿತ
ವ್ಯಯಕ್ಕೆ ಆದ್ಯತೆ ನೀಡುವಿರಿ. ನಿಮ್ಮ ಶಕ್ತಿಗೆ
ತಕ್ಕಂತಹ ಅವಕಾಶಗಳು ಬರಲಿವೆ. 

ಧನುಸ್ಸು
ಕಂಡದ್ದನ್ನು ಕಂಡ ಹಾಗೆ ಹೇಳುವಿರಿ. ಹೊಸ
ಕೆಲಸ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ
ಕೊಳ್ಳಲಿದ್ದೀರಿ. ಅಧಿಕಾರದ ಆಸೆ ಬೇಡ.

ಮಕರ
ದಿನದ ಆರಂಭದಲ್ಲಿಯೇ ಶುಭ ಸುದ್ದಿ
ಕೇಳಲಿದ್ದೀರಿ. ಸಾಧ್ಯವಾದರೆ ಸಂತೋಷ ಹಂಚಿ.
ದುಃಖವನ್ನಲ್ಲ. ಗೆಲುವಿಗೆ ಶ್ರಮ ಬೇಕು.

ಕುಂಭ
ನಡೆಯಬೇಕಾದ ದಾರಿ ಕಠಿಣ ಎಂದು ಸುಮ್ಮನೆ
ಕೂರುವುದು ಬೇಡ. ತಾರತಮ್ಯ ಎಣಿಸು
ವುದು ಬೇಡ. ಕಾರ್ಯ ಸಿದ್ಧಿಯಾಗಲಿದೆ.

ಮೀನ 
ಇಡೀ ದಿನ ಆತ್ಮೀಯರೊಂದಿಗೆ ಕಳೆಯ
ಲಿದ್ದೀರಿ. ನಿಮ್ಮ ಸ್ವಭಾವಕ್ಕೆ ಹೊಂದುವ ಹೊಸ
ಸ್ನೇಹಿತರು ದೊರೆಯಲಿದ್ದಾರೆ. ಶುಭಫಲ.