ಈ ರಾಶಿಯವರು ನೀವಂದುಕೊಂಡದ್ದಕ್ಕಿಂತ ಹೆಚ್ಚಿನ ಲಾಭ ಗಳಿಸಲಿದ್ದೀರಿ

ಮೇಷ
ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭ
ಲಭಿಸಲಿದೆ. ವ್ಯವಹಾರದಲ್ಲಿ ನಿಪುಣತೆ
ಸಾಧಿಸಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ.

ವೃಷಭ
ನಿಮ್ಮಲ್ಲಿರುವ ಹೊಸ ಐಡಿಯಾಗಳನ್ನು ಇತರರ
ಮುಂದೆ ಹಂಚಿಕೊಳ್ಳಲಿದ್ದೀರಿ. ಮಾನಸಿಕ
ನೋವಿನಿಂದ ಹೊರಗೆ ಬರಲಿದ್ದೀರಿ.

ಮಿಥುನ
ಕಾರ್ಯವಾಸಿ ಕತ್ತೆ ಕಾಲು ಎನ್ನುವಂತೆ ಇಂದು
ನಿಮ್ಮ ಕೆಲಸ ಮಾಡಿಸಿಕೊಳ್ಳಲು ಅಲೆದಾಡ
ಲಿದ್ದೀರಿ. ಸೂಕ್ತ ಫಲ ದೊರೆಯಲಿದೆ.

ಕಟಕ
ನಿಮ್ಮ ಕನಸು ಮತ್ತು ನಿಮ್ಮ ಪರಿಶ್ರಮಕ್ಕೆ ತಾಳೆ
ಇರುವುದಿಲ್ಲ. ಆಸೆಗೆ ತಕ್ಕಂತೆ ಕಠಿಣ
ಶ್ರಮವನ್ನೂ ಹಾಕಿ. ಆರೋಗ್ಯದಲ್ಲಿ ಚೇತರಿಕೆ.

ಸಿಂಹ
ಮನೆಯಲ್ಲಿ ಹೆಂಡತಿ, ಮಕ್ಕಳೊಂದಿಗೆ ಹೆಚ್ಚಿನ
ಸಮಯ ಕಳೆಯಲಿದ್ದೀರಿ. ನಿಮ್ಮ ಪಾಡಿಗೆ
ನೀವು ಇದ್ದರೆ ಯಾವುದೇ ತೊಂದರೆ ಇಲ

ಕನ್ಯಾ
ಒಂದು ದಿನದಲ್ಲಿ ಮುಗಿಯುವ
ಕಾರ್ಯವನ್ನು ಅರ್ಧ ದಿನದಲ್ಲಿಯೇ ಮಾಡಿ
ಮುಗಿಸಲಿದ್ದೀರಿ. ಹೆಚ್ಚು ಆದಾಯ ಸಿಗಲಿದೆ.

ತುಲಾ
ತಂದೆಯ ಆರೋಗ್ಯಕ್ಕಾಗಿ ಹಿಂದಿನ
ಉಳಿತಾಯದ ಹಣ ವಿನಿಯೋಗವಾಗಲಿದೆ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯೋಚನೆ ಮಾಡಿ.

ವೃಶ್ಚಿಕ
ಜೊತೆಯೇ ಇದ್ದು ನಿಮಗೆ ತೊಂದರೆ ನೀಡುವ
ಸ್ನೇಹಿತರ ಅಸಲಿ ಮುಖ ಇಂದು ತಿಳಿಯಲಿದೆ.
ಮನೆಯಲ್ಲಿ ಸಣ್ಣ ಅಸಮಾಧಾನ ಏರ್ಪಡಲಿದೆ. 

ಧನುಸ್ಸು
ಅಪರಿಚಿತರ ಮುಂದೆ ನಿಮ್ಮ ದೌರ್ಬಲ್ಯಗಳ
ಅನಾವರಣವಾಗಲಿದೆ. ಯಾರನ್ನೂ
ಮೆಚ್ಚಿಸುವ ಪ್ರಯತ್ನ ಬೇಡ. ಶುಭ ಫಲ.

ಮಕರ
ಇಷ್ಟದ ವ್ಯಕ್ತಿಯೊಂದಿಗೆ ಇಡೀ ದಿನ ಕಳೆಯಲಿ
ದ್ದೀರಿ. ನಿಮ್ಮ ತಪ್ಪಿನಿಂದ ಮನೆಯವರು ತಲೆ
ತಗ್ಗಿಸಬೇಕಾದೀತು. ಎಚ್ಚರಿಕೆ ಇರಲಿ.

ಕುಂಭ
ರಾಜಕೀಯ ವೈಷಮ್ಯಕ್ಕೆ ಸ್ನೇಹವನ್ನು ಬಲಿ
ಕೊಡಬೇಕಾದ ಸಂದರ್ಭವಿದೆ. ಇಂದು
ಯಾರೊಂದಿಗೂ ಹಣಕಾಸಿನ ವ್ಯವಹಾರ ಬೇಡ.

ಮೀನ 
ನನ್ನ ಮಾತೇ ನಡೆಯಬೇಕು ಎಂದು ಹಠ
ಮಾಡಿಕೊಂಡು ಕೂರುವುದು ಬೇಡ.
ವಿಚಾರದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಿ.