ಈ ರಾಶಿಯವರು ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದೀರಿ

ಮೇಷ
ಹೊಸ ವಸ್ತುಗಳನ್ನು ಕೊಂಡುಕೊಳ್ಳುವ
ಸಾಧ್ಯತೆ ಇದೆ. ಮತ್ತೊಬ್ಬರ ಕಷ್ಟಗಳಿಗೆ ನೀವು
ಕಣ್ಣೀರು ಹಾಕುವುದರಲ್ಲಿ ಅರ್ಥವಿಲ್ಲ.

ವೃಷಭ
ಸೂಕ್ತ ಸಂದರ್ಭ ನೋಡಿಕೊಂಡು ಒಳ್ಳೆಯ
ಕಾರ್ಯ ಮಾಡಲು ಮುಂದಾಗಿ. ನಿಮ್ಮ
ಗೆಲುವು ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ.

ಮಿಥುನ
ಗುಟ್ಟುಗಳನ್ನು ಕಾಪಾಡಿಕೊಳ್ಳಿ. ಸಂಸಾರದಲ್ಲಿ
ಸಣ್ಣ ಪುಟ್ಟ ಗೊಂದಲ ಸಹಜ. ಎಲ್ಲವನ್ನೂ
ಸರಿಯಾಗಿ ನಿಭಾಯಿಸಿಕೊಂಡು ಹೋಗಿ.

ಕಟಕ
ಹೊಸ ಸ್ನೇಹ ಬೆಳೆಯಲಿದೆ. ಹಳೆ ಸ್ನೇಹಕ್ಕೂ
ಬೆಲೆ ಕೊಡುವುದನ್ನು ಮರೆಯಬೇಡಿ.
ಹಣಕಾಸಿನ ವಿಚಾರದಲ್ಲಿ ಹಿಡಿತ ಸಾಧಿಸಿ.

ಸಿಂಹ
ನೊಂದವರಿಗೆ ದನಿಯಾಗಿ ನಿಲ್ಲಲಿದ್ದೀರಿ.
ಯಾವುದಕ್ಕೂ ಅಂಜದೇ ಮುಂದೆ ಸಾಗುತ್ತಿರಿ.
ದೊಡ್ಡ ಯಶಸ್ಸಿನತ್ತ ಕಾಲಿಡಲಿದ್ದೀರಿ.

ಕನ್ಯಾ
ನಿಮ್ಮ ಗುಣಕ್ಕೆ ಹೊಂದುವಂತಹ ಕೆಲಸವೇ
ಇಂದು ದೊರೆಯಲಿದೆ. ಸಹಾಯ ಮಾಡಿದವ
ರಿಗೆ ಕೃತಜ್ಞತೆಯಿಂದ ನಡೆದುಕೊಳ್ಳಿ.

ತುಲಾ 
ಕೋಪ ಅತಿಯಾದರೆ ಅದರಿಂದ ಅನಾ
ಹುತವೇ ಹೆಚ್ಚು. ಗಡಿಬಿಡಿಯಲ್ಲಿ ಯಾವುದೇ
ಕೆಲಸವನ್ನು ಮಾಡಬೇಡಿ. ತಾಳ್ಮೆ ಇರಲಿ.

ವೃಶ್ಚಿಕ
ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ
ನೋಡಿಕೊಳ್ಳಿ. ಒಳ್ಳೆಯ ಗುಣಕ್ಕೆ ಬೆಲೆ ಇದ್ದೇ
ಇರುತ್ತದೆ. ನೆಮ್ಮದಿಯಾಗಿ ಇರಲಿದ್ದೀರಿ. 

ಧನುಸ್ಸು
ಮತ್ತ್ಯಾರದ್ದೋ ಕೈಗೊಂಬೆ ರೀತಿ
ವರ್ತಿಸಬೇಕಾದ ಸಂದರ್ಭ ಬರಲಿದೆ.
ಸತ್ಯವಾದ ದಾರಿಯಲ್ಲಿ ನಿಮ್ಮ ನಡೆ ಇರಲಿ.

ಮಕರ
ಅತಿ ಅವಸರ ಬೇಡ. ವಾಹನ ಚಾಲನೆ
ಮಾಡುವಾಗ ಎಚ್ಚರ ಇರಲಿ. ನಿಮಗೆ ಗೊತ್ತಿ
ಲ್ಲದೇ ಇದ್ದ ವಿಚಾರಗಳು ಇಂದು ತಿಳಿಯಲಿವೆ.

ಕುಂಭ
ವ್ಯವಹಾರದಲ್ಲಿ ಲಾಭ ಸಿಗಲಿದೆ. ಎಲ್ಲವೂ
ನೀವು ಅಂದುಕೊಂಡಂತೆಯೇ ನಡೆಯಲಿದ್ದು,
ಮನೆಯಲ್ಲಿ ಸಂತಸ ನೆಲೆಗೊಳ್ಳಲಿದೆ.

ಮೀನ 
ವ್ಯಕ್ತಿಗಳೊಂದಿಗೆ ಸ್ನೇಹ ಮಾಡುವಾಗ
ಸರಿಯಾಗಿ ಅಳೆದು ತೂಗಿ ನಿರ್ಧಾರ ಮಾಡಿ.
ಇಡೀ ದಿನ ಕೆಲಸದಲ್ಲಿ ನಿರತರಾಗಲಿದ್ದೀರಿ.