ಈ ರಾಶಿಗೆ ಇಂದಿನ ದಿನ ಶುಭಕರ : ಉಳಿದ ರಾಶಿ ಹೇಗಿದೆ..?


ಮೇಷ : ದಾಂಪತ್ಯ ಕಲಹ ನಿವಾರಣೆಯಾಗಲಿದೆ. ಹೆಚ್ಚು ಮಾತು ಒಳ್ಳೆಯದಲ್ಲ. ಅಂದುಕೊಂಡ ಕಾರ್ಯ ಮುಗಿಯಲಿದೆ. 

ವೃಷಭ : ಸಂಬಂಧಗಳಲ್ಲಿ ಹುಳಿ ಹಿಂಡುವ ಕಾರ್ಯ ಮಾಡದಿರಿ. ಸೂಕ್ತವಾದ ಚಿಂತನೆಗಳು ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ. 

ಮಿಥುನ : ವೃತ್ತಿಯಲ್ಲಿ ಪ್ರಗತಿ ಕಾಣಲಿದ್ದೀರಿ. ಅಸೂಯೆ ಒಳ್ಳೆಯದಲ್ಲ. ,ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲಿದ್ದೀರಿ.  ಸುತ್ತಾಟ ಹೆಚ್ಚಲಿದೆ. 

ಕಟಕ : ಬೆಳ್ಳಗೆ ಇರುವುದಿಲ್ಲ ಹಾಲಲ್ಲ.  ದೊಡ್ಡ ವ್ಯಕ್ತಿಗಳ ಜೊತೆಗೆ ಸಂಪರ್ಕ ಬೆಳೆಯಲಿದೆ. ಒಳ್ಳೆಯ ಲಾಭವಾಗಲಿದೆ. 

ಸಿಂಹ : ಮಾಡಿದ್ದುಣ್ಣೊ ಮಹರಾಯ ಎನ್ನುವಂತೆ ನೀವು ಮಾಡಿದ ಒಳ್ಳೆ ಕಾರ್ಯಗಳು ನಿಮ್ಮ ಕೈ ಹಿಡಿಯಲಿವೆ. ಸ್ನೇಹಿತರು ಹೆಚ್ಚಾಗಲಿದ್ದಾರೆ. 

ಕನ್ಯಾ : ಹೊಸ ಉತ್ಸಾಹದಿಂದ ಹಿಡಿಯ ಕಾರ್ಯ ಮಾಡಲಿದ್ದೀರಿ. ಹಿಂದಿನ ಶ್ರಮಕ್ಕೆ ಇಂದು ಸೂಕ್ತವಾದ ಪ್ರತಿಫಲ

ತುಲಾ : ಮತ್ತೊಬ್ಬರು ಮಾಡಿದ ಕೆಲಸವನ್ನು ಇಟ್ಟುಕೊಂಡು ನೀವು ಕ್ರೆಡಿಟ್ ತೆಗೆದುಕೊಳ್ಳುವುದು ಬೇಡ. ರಾಜಕಾರಣದಲ್ಲಿ ಆಸಕ್ತಿ ಹೆಚ್ಚಾಗಲಿದೆ. 

ವೃಶ್ಚಿಕ : ಮನೆಯಲ್ಲಿ ಹಬ್ಬದ ವಾತಾವರಣ. ಸ್ನೇಹಿತರೊಂದಿಗೆ ಕಿರು ಪ್ರವಾಸ ಹೊರಡಲಿದ್ದೀರಿ. ಸ್ವಾರ್ಥಿಗಳಿಂದ ದೂರವಿರಿ. 

ಧನಸ್ಸು : ಆರೋಗ್ಯದ ಬಗ್ಗೆ ಹೆಚ್ಚು  ನಿಗಾ ವಹಿಸಿ.  ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯಲೊದೆ. ಚಿನ್ನಾಭರಣ ಕೊಳ್ಳಲಿದ್ದೀರಿ. 

ಮಕರ : ಶುಭ ಮುಹೂರ್ತಕ್ಕಾಗಿ  ಕಾದು ಒಳ್ಳೆಯ ಕಾರ್ಯವನ್ನು ಕೈಗೊಳ್ಳಿ ಅತಿಯಾದ ಆಸೆಗಳನ್ನು ಇಟ್ಟುಕೊಳ್ಳುವುದು ಬೇಡ

ಕುಂಭ : ನೀವು ಇರುವ ಸ್ಥಳ, ಅದರ ಮಹತ್ವ ತಿಳಿದುಕೊಂಡು ಪ್ರತಿಕ್ರಿಯೆ ನೀಡಿ. ಮತ್ತೊಬ್ಬರ ಸೋಲಿಗೆ ಶ್ರಮಿಸಬೇಡಿ

ಮೀನ : ನಿಮ್ಮ ಇಂದಿನ ದಿನ ಶುಭಕರ. ಹಿಡಿದ ಕೆಲಸಗಳು ಸಂಪೂರ್ಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರ