Asianet Suvarna News Asianet Suvarna News

ಈ ರಾಶಿಗೆ ಏಳಿಗೆಯೊಂದಿಗೆ ಸಂತೋಷ : ಉಳಿದ ರಾಶಿ ?

ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ ? 

Daily Bhavishya 27 August 2019
Author
Bengaluru, First Published Aug 27, 2019, 7:07 AM IST
  • Facebook
  • Twitter
  • Whatsapp

ಈ ರಾಶಿಗೆ ಏಳಿಗೆಯೊಂದಿಗೆ ಸಂತೋಷ  : ಉಳಿದ ರಾಶಿ ? 

ಮೇಷ
ಬಂಧುಗಳ ಆಗಮನವಾಗಲಿದೆ. ಹಣಕಾಸಿನ
ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿಕೊಳ್ಳ
ಬೇಕು. ವಾಹನ ಚಾಲನೆ ವೇಳೆ ಎಚ್ಚರವಿರಲಿ.

ವೃಷಭ
ಮತ್ತೊಬ್ಬರನ್ನು ನಿಂದಿಸಿ ಫಲವಿಲ್ಲ. ನೀವು
ಮಾಡುವ ಕೆಲಸದಲ್ಲಿ ನಿಯತ್ತು ಇರಲಿ. ಬೆಲೆ
ಬಾಳುವ ವಸ್ತು ಕೊಳ್ಳಲಿದ್ದೀರಿ. ಶುಭ ಫಲ.

ಮಿಥುನ
ಆತ್ಮೀಯರೊಂದಿಗೆ ವಿರಸ ಏರ್ಪಡಲಿದೆ.
ಅತಿಯಾದ ಉತ್ಸಾಹದಿಂದ ಮುಂದೆ
ಸಾಗುವುದು ಇಂದು ಒಳಿತಲ್ಲ. ಶುಭ ಫಲ.

ಕಟಕ
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಬಂಧುಗಳ ಏಳಿಗೆ
ಯಿಂದ ನಿಮಗೆ ಸಂತೋಷ. ಶುಭಫಲ.

ಸಿಂಹ
ಹಳೆಯ ಸಾಲಗಳು ವಾಪಸ್ ಬರಲಿವೆ. ನೆಮ್ಮ
ದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ನಡೆಸಲಿದ್ದೀರಿ. ಕಣ್ಣಿನ ಆರೋಗ್ಯ ವೃದ್ಧಿ

ಕನ್ಯಾ
ಸೇವಾ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ
ಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ನಿಂದನೆಗೆ ಒಳಗಾಗಲಿದ್ದೀರಿ.

ತುಲಾ 
ದಿನವಿಡೀ ಸಂತೋಷದಿಂದ ಇರಲಿದ್ದೀರಿ.
ಆತ್ಮೀಯರ ಸಂಖ್ಯೆ ಹೆಚ್ಚಾಗಲಿದೆ. ಮತ್ತೊಬ್ಬರ
ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.

ವೃಶ್ಚಿಕ
ನಿಮ್ಮ ಕನಸುಗಳು ಇಂದು ಕಾರ್ಯರೂಪಕ್ಕೆ
ಬರಲಿವೆ. ಹೆಚ್ಚು ಮಾತನಾಡುವುದಕ್ಕೆ
ಬದಲಾಗಿ ಕೆಲಸ ಮಾಡಿ ತೋರಿಸಲಿದ್ದೀರಿ. 

ಧನುಸ್ಸು
ನಿಮ್ಮನ್ನು ಹೊಗಳಿ ಮಾತನಾಡುವವರು
ಹಿಂದಿನಿಂದ ತೊಂದರೆ ಉಂಟುಮಾಡುವ
ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದಿರಿ.

ಮಕರ
ಬೆಳಿಗ್ಗೆಯೇ ಶುಭ ಸುದ್ದಿ ಕೇಳಲಿದ್ದೀರಿ.
ಅಂದುಕೊಂಡ ಕಾರ್ಯಕ್ಕೆ ಸಣ್ಣ ವಿಘ್ನ
ಬರಲಿದೆ. ತಂದೆಯ ಮಾತಿಗೆ ಮನ್ನಣೆ ನೀಡಿ.

ಕುಂಭ
ಮತ್ತೊಬ್ಬರಿಗಾಗಿ ಕಾಯುವುದು ಬೇಡ.
ಇನ್ನೊಬ್ಬರನ್ನು ನೀವು ಕಾಯಿಸಬೇಡಿ. ನಿಮ್ಮ
ಪಾಲಿಗೆ ಬಂದದ್ದನ್ನು ನೀವೇ ಅನುಭವಿಸಬೇಕು.

ಮೀನ 
ಹಿಂದೆ ಮಾಡಿದ ತಪ್ಪು ಕೆಲಸಕ್ಕೆ ಇಂದು ಬೆಲೆ
ತೆರಬೇಕಾಗಿ ಬರುತ್ತದೆ. ಅಂದುಕೊಂಡ
ಕಾರ್ಯಗಳು ನೆರವೇರಲಿವೆ. ನೆಮ್ಮದಿ ಇದೆ.

Follow Us:
Download App:
  • android
  • ios