ಈ ರಾಶಿಯವರ ಮನೆಗೆ ಧನ ಕನಕಗಳು ಸೇರಲಿವೆ

ಮೇಷ
ತುಂಬಾ ದಿನಗಳಿಂದ ನಿಮ್ಮ ಮನಸ್ಸಿನಲ್ಲಿ
ಕಾಡುತ್ತಿರುವ ಪ್ರಶ್ನೆಗೆ ಇಂದು ಉತ್ತರ
ದೊರೆಯಲಿದೆ. ಕಾರ್ಯಪ್ರವೃತ್ತರಾಗುವಿರಿ.

ವೃಷಭ
ತಂದೆಯೊಂದಿಗೆ ಸಣ್ಣ ಮನಸ್ಥಾಪ ಉಂಟಾ
ಗಲಿದೆ. ಸಂಜೆಯ ವೇಳೆಗೆ ಎಲ್ಲದಕ್ಕೂ
ಪರಿಹಾರ. ನಯವಂಚಕರ ಬಗ್ಗೆ ಎಚ್ಚರವಿರಲಿ.

ಮಿಥುನ
ಇಂದು ನಿಮ್ಮ ಮನೆಗೆ ಧನ ಕನಕಗಳು ಬಂದು
ಸೇರಲಿವೆ. ಬಂಧುಗಳೊಂದಿಗೆ ಒರಟಾಗಿ
ನಡೆದುಕೊಳ್ಳವುದು ಬೇಡ. ಶುಭಫಲ.

ಕಟಕ
ನಿಮ್ಮ ಆತ್ಮೀಯ ಸ್ನೇಹಿತರಿಗೆ ಆರ್ಥಿಕವಾಗಿ
ಸಹಾಯ ಮಾಡಲಿದ್ದೀರಿ. ತಾಳ್ಮೆ ಮತ್ತು
ಶ್ರದ್ಧೆಯಿಂದ ಮಾಡಿ ಕಾರ್ಯಕ್ಕೆ ಫಲವಿದೆ.

ಸಿಂಹ
ಸುಂದರವಾದ ಜಾಗಗಳಿಗೆ ಇಂದು ಕುಟುಂಬ
ಸಮೇತರಾಗಿ ಭೇಟಿ ನೀಡಿಲಿದ್ದೀರಿ. ಸಂಸಾರ
ದಲ್ಲಿ ಇದ್ದ ಸಮಸ್ಯೆ ಮಾಯವಾಗಲಿದೆ.

ಕನ್ಯಾ
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ
ಮಾಡುವ ಅಗತ್ಯವಿಲ್ಲ. ಎಲ್ಲಾ ಕಾರ್ಯಗಳೂ
ಸುಗಮವಾಗಿ ನಡೆಯಲಿವೆ. ಶಾಂತಿ ಇರಲಿ.

ತುಲಾ 
ನೀವು ಮಾಡುವ ಕಾರ್ಯ ಸರಿಯಾಗಿ
ಇರುವಾಗ ಮತ್ತೊಬ್ಬರಿಗೆ ಹೆದರುವ ಅಗತ್ಯ
ಇಲ್ಲ. ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ.

ವೃಶ್ಚಿಕ
ನಿಮ್ಮ ವೈಯಕ್ತಿಕ ಆಸೆಗಳಿಗೆ ಮಿತಿ ಇರಲಿ.
ಮುಂದಿನ ಕೆಲಸ ಕಾರ್ಯಗಳನ್ನು
ಮುಂಚಿತವಾಗಿಯೇ ಮಾಡಿಕೊಳ್ಳಲಿದ್ದೀರಿ. 

ಧನುಸ್ಸು
ಬಹಳ ಇಷ್ಟಪಟ್ಟು ತಂದ ವಸ್ತು ನಿಮ್ಮ ಕೈ
ತಪ್ಪಲಿದೆ. ಮತ್ತೊಬ್ಬರ ಖುಷಿಯಲ್ಲಿ ನಿಮ್ಮ
ಸಂತೋಷ ಕಾಣಲಿದ್ದೀರಿ. ಇಂದು ಶುಭದಿನ.

ಮಕರ
ಗುರುಹಿರಿಯರೊಂದಿಗೆ ಸಮಾಲೋಚನೆ
ಮಾಡುವಾಗ ಎಚ್ಚರಿಕೆ ಇರಲಿ. ಮನೆಯಲ್ಲಿ
ನಿಮ್ಮ ಮಾತಿಗೆ ಹೆಚ್ಚು ಮಾನ್ಯತೆ ದೊರೆಯಲಿದೆ

ಕುಂಭ
ಪ್ರಯಾಣ ಮಾಡುವಾಗ ಬೆಲೆ ಬಾಳುವ
ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ. ಆರೋಗ್ಯ
ದಲ್ಲಿ ಕೊಂಚ ಏರುಪೇರು ಸಾಧ್ಯತೆ.

ಮೀನ 
ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ
ಕಾರ್ಯಗಳನ್ನು ಮಕ್ಕಳು ಮಾಡಲಿದ್ದಾರೆ.
ಟೀಕೆ ಮಾಡುವುದನ್ನು ನಿಲ್ಲಿಸಿ ಮುಂದೆ ಸಾಗಿ.