ಈ ರಾಶಿಗೆ ಆದಾಯದಲ್ಲಿ ಭಾರೀ ಏರಿಕೆ


ಮೇಷ
ಸುಳ್ಳನ್ನು ಸತ್ಯ ಎಂದು ಸಾಭೀತು ಮಾಡು
ವುದಕ್ಕೆ ಮುಂದಾಗದಿರಿ. ಹಿರಿಯರಿಂದ ಬುದ್ಧಿ
ಮಾತು ಕೇಳಲಿದ್ದೀರಿ. ನೆಮ್ಮದಿ ಹೆಚ್ಚಾಗಲಿದೆ.

ವೃಷಭ
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು
ಎನ್ನುವ ಗಾದೆ ಮಾತಿನಂತೆ ಇಂದಿನ ದಿನ
ವಾಗಲಿದೆ. ಆದಾಯದಲ್ಲಿ ಏರಿಕೆ ಕಾಣಲಿದ್ದೀರಿ

ಮಿಥುನ
ಮತ್ತೊಬ್ಬರ ಅವಗುಣಗಳನ್ನೇ ಎತ್ತಿ ತೋರಿ
ಸುವುದಕ್ಕೆ ಮುಂದಾಗದಿರಿ. ತಂದೆ ತಾಯಿ
ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ.

ಕಟಕ
ಸಹೋದರಿಯ ಸಹಾಯದಿಂದ ಹೊಸ ಬೈಕ್
ಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ನಿಮ್ಮ
ಹಿಂದಿನ ಆಸೆಗಳು ಈ ದಿನ ನೆರವೇರಲಿವೆ.

ಸಿಂಹ
ಕಾಸಿಗೆ ತಕ್ಕಂತೆ ಕಜ್ಜಾಯ. ನಿಮ್ಮ ಕೈಗೆ ಎಟುಕದ
ವಸ್ತುಗಳ ಬಗ್ಗೆ ಆಸೆ ಇಟ್ಟುಕೊಳ್ಳುವುದು
ತರವಲ್ಲ. ರಾಜಕಾರಣಿಗಳಿಗೆ ಶುಭ ದಿನ.

ಕನ್ಯಾ
ಸ್ವಂತ ಆಲೋಚನೆಗಳೊಂದಿಗೆ ಮುನ್ನಡೆಯಿರಿ.
ಛಾಡಿ ಮಾತುಗಳಿಗೆ ಕಿವಿ ಕೊಡುವುದು ಬೇಡ.
ಸತ್ಯಕ್ಕೆ ಎಂದಿಗೂ ಜಯ ಇದ್ದೇ ಇರುತ್ತದೆ.

ತುಲಾ 
ನಿಮ್ಮ ನೋವೇ ದೊಡ್ಡದೆಂದು ತಿಳಿದು
ಕೊಳ್ಳುವುದು ಬೇಡ. ಇರುವ ಭಾಗ್ಯವನ್ನು
ನೆನೆದು, ಬರುತ್ತದೆ ಎನ್ನುವುದನ್ನು ಬಿಡಿ.

ವೃಶ್ಚಿಕ
ಅವಿಶ್ರಾಂತವಾಗಿ ದಿನಪೂರ್ತಿ ದುಡಿಯ
ಲಿದ್ದೀರಿ. ವಾರದಿಂದ ಇದ್ದ ಗೊಂದಲಕ್ಕೆ ತೆರೆ
ಬೀಳಲಿದೆ. ಖುಷಿ ಹೆಚ್ಚಾಗಲಿದೆ. ಶುಭಫಲ. 

ಧನುಸ್ಸು
ಸರಿಯಾದ ಸಮಯಕ್ಕೆ ನಿಮ್ಮ ಪಾಲಿಗೆ
ಬಂದಿರುವ ಕೆಲಸ ಕಾರ್ಯಗಳನ್ನು ಮಾಡಿ
ಮುಗಿಸಿಕೊಳ್ಳಿ. ಸಂಜೆ ವೇಳೆಗೆ ಶುಭ ಸುದ್ದಿ.

ಮಕರ
ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ.
ಆಸೆಯೇ ದುಃಖಕ್ಕೆ ಮೂಲ. ಸಮಯ ಸಾಧ
ಕರು, ಸ್ವಾರ್ಥಿಗಳಿಂದ ಅಂತರ ಕಾಯ್ದುಕೊಳ್ಳಿ.

ಕುಂಭ
ನಿಮ್ಮನ್ನು ದ್ವೇಷಿಸುವವರ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳದೇ, ನಿಮ್ಮನ್ನು ಪ್ರೀತಿ
ಮಾಡುವವರ ಬಗ್ಗೆ ಹೆಚ್ಚು ಗಮನ ನೀಡಿ.

ಮೀನ 
ಹಳೆಯ ಸಾಲಗಳು ಇಂದು ಸ್ವಲ್ಪ ಪ್ರಮಾಣ
ದಲ್ಲಿ ವಾಪಸ್ ಬರಲಿವೆ. ಉದ್ಯಮದಲ್ಲಿ ಸಣ್ಣ
ಪ್ರಮಾಣದ ನಷ್ಟ. ಉತ್ಸಾಹ ಹೆಚ್ಚಾಗಲಿದೆ.