ವ್ಯವಹಾರದಲ್ಲಿ ಈ ರಾಶಿಗೆ ಭಾರಿ ಲಾಭ

ಮೇಷ
ಕಳೆದ ವಾರದಲ್ಲಿ ನಡೆದ ವ್ಯವಹಾರಕ್ಕೆ ಇಂದು
ಪ್ರತಿಫಲ ದೊರೆಯಲಿದೆ. ನಕಾರಾತ್ಮಕ
ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.

ವೃಷಭ
ನೀವು ಇಂದು ತೆಗೆದುಕೊಳ್ಳುವ ನಿರ್ಧಾರ
ನಿಮ್ಮ ಮನೆಯವರ ಮೇಲೆ ಪರಿಣಾಮ
ಬೀರುವುದರಿಂದ ಎಚ್ಚರಿಕೆ ಇರಲಿ.

ಮಿಥುನ
ಈ ದಿನ ಸಾಕಷ್ಟು ಬಿಡುವು ದೊರೆಯಲಿದೆ.
ಮತ್ತೊಬ್ಬರ ಮೇಲೆ ಹೆಚ್ಚು ಅವಲಂಭಿ
ಯಾಗುವುದು ಬೇಡ. ತಾಳ್ಮೆ ಹೆಚ್ಚಲಿದೆ.

ಕಟಕ
ಅನಿರೀಕ್ಷಿತ ಸುದ್ದಿಯಿಂದ ಮನೆಯಲ್ಲಿ ಸಂತಸ
ಹೆಚ್ಚಾಗಲಿದೆ. ನಿಮ್ಮ ಕಾರ್ಯಕ್ಕೆ ತಕ್ಕ
ಪ್ರತಿಫಲವೂ ಈ ದಿನ ದೊರೆಯಲಿದೆ.

ಸಿಂಹ
ಗೆಳೆಯರೊಂದಿಗೆ ಸೇರಿ ಪ್ರವಾಸ ಕೈಗೊಳ್ಳಲಿ
ದ್ದೀರಿ. ಹಿಡಿದ ಕಾರ್ಯ ಸಂಪೂರ್ಣವಾಗ
ಲಿದೆ. ಅಸಹಾಯಕರಿಗೆ ಸಹಾಯ ಮಾಡುವಿರಿ

ಕನ್ಯಾ
ಪಾಲಿಗೆ ಬಂದ ಕಾರ್ಯವನ್ನು ಶ್ರದ್ಧೆಯಿಂದ
ಮಾಡಿ ಮುಗಿಸಿ. ನಿಂದನೆಗಳು ಬರುವ
ಸಾಧ್ಯತೆ ಇದೆ. ಮನೆಯಲ್ಲಿ ಸಂಭ್ರಮವಿರಲಿದೆ

ತುಲಾ 
ಯಾವುದೇ ಆಮಿಷಕ್ಕೆ ಒಳಗಾಗದೇ ನಿಮ್ಮ
ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ
ಮುಗಿಸಿ. ಸಂಜೆಗೆ ಶುಭ ಸುದ್ದಿ ತಿಳಿಯಲಿದೆ.

ವೃಶ್ಚಿಕ
ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಇಡೀ ದಿನ
ತೊಡಗಿಸಿಕೊಳ್ಳಲಿದ್ದೀರಿ. ಅವಿವೇಕಿಗಳ
ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ. 

ಧನುಸ್ಸು
ಅಧಿಕಾರ ಕ್ಷಣಿಕ ಎನ್ನುವುದು ನಿಮ್ಮ
ಮನಸ್ಸಿನಲ್ಲಿ ಇರಲಿ. ಮತ್ತೊಬ್ಬರ ಬಗ್ಗೆ
ಸಹಾನುಭೂತಿ ಇರಲಿ. ಸಂಗೀತ ಕೇಳಿ.

ಮಕರ
ಮಾಡಿದ್ದುಣ್ಣೋ ಮಹರಾಯ ಎನ್ನುವ ಹಾಗೆ
ನಿಮ್ಮ ಹಿಂದಿನ ಪುಣ್ಯಕಾರ್ಯಗಳಿಗೆ ಇಂದು
ನಿರೀಕ್ಷಿತ ಫಲವನ್ನು ಪಡೆಯಲಿದ್ದೀರಿ.

ಕುಂಭ
ದುಷ್ಟರಿಂದ ಅಂತರ ಕಾಯ್ದುಕೊಳ್ಳಿ. ಸ್ನೇಹಿತರ
ವಿಚಾರದಲ್ಲಿ ದುಡುಕುವುದು ಬೇಡ.
ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ಮೀನ 
ಮುಂದಿನ ವಾರದ ಕಾರ್ಯಕ್ರಮಗಳ
ತಯಾರಿಯಲ್ಲಿಯೇ ಈ ದಿನ ಕಳೆಯಲಿದೆ.
ಅವಿವಾಹಿತರಿಗೆ ಒಳ್ಳೆಯ ಸುದ್ದಿ ತಿಳಿಯಲಿ