ಒಂದು ರಾಶಿಗೆ ಆದಾಯದಲ್ಲಿ ಭರ್ಜರಿ ಏರಿಕೆ : ಉಳಿದ ರಾಶಿ?

ಮೇಷ
ನಿಮ್ಮ ತಪ್ಪುಗಳನ್ನು ನೀವೇ ಗುರುತು
ಮಾಡಿಕೊಂಡು ಅವುಗಳನ್ನು ಸರಿ
ಮಾಡಿಕೊಳ್ಳಲು ಪ್ರಯತ್ನ ಮಾಡಲಿದ್ದೀರಿ.

ವೃಷಭ
ಆದಾಯದಲ್ಲಿ ಏರಿಕೆಯಾಗಲಿದೆ. ಸುಳ್ಳು
ಸುದ್ದಿಗಳಿಗೆ ಮರುಳಾಗದಿರಿ. ಯಾರದೋ
ಮಾತಿಗೆ ನಿಮ್ಮ ಉತ್ಸಾಹ ಕುಗ್ಗದಿರಲಿ.

ಮಿಥುನ
ಕೆಟ್ಟ ವಿಚಾರಗಳು ಬೇಗನೇ ಹಬ್ಬುತ್ತವೆ.
ಇವುಗಳ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಒಳ್ಳೆಯ
ಮನಸ್ಸಿದ್ದರೆ ಒಳ್ಳೆಯ ಪ್ರತಿಫಲ ಸಿಕ್ಕುತ್ತದೆ.

ಕಟಕ
ಹೊಸ ಕೆಲಸಗಳಿಗೆ ಮುಂದಾಗಲಿದ್ದೀರಿ.
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ನಿಮಗೆ ಸರಿ ಎನ್ನಿಸಿದ ದಾರಿಯಲ್ಲಿ ಸಾಗಿ.

ಸಿಂಹ
ಕೆಲಸದಲ್ಲಿ ಬದಲಾವಣೆಯ ಮಾಡಿಕೊಳ್ಳ
ಬೇಕಾದ ಅನಿವಾರ್ಯತೆ ಬರಲಿದೆ. ಧೈರ್ಯ
ವಾಗಿ ಮುಂದೆ ಸಾಗಿದರೆ ಒಳಿತಾಗುವುದು

ಕನ್ಯಾ
ಮಾತನಾಡುವಾಗ ಎಚ್ಚರ ಇರಲಿ. ಸ್ವಲ್ಪ
ತಪ್ಪಾದರೂ ದೊಡ್ಡ ಮಟ್ಟದ ತೊಂದರೆಗೆ
ಸಿಲುಕುವ ಅಪಾಯ ಇರುತ್ತದೆ. ಶುಭಫಲ.

ತುಲಾ 
ನಿಮ್ಮ ಆಸಕ್ತಿಯ ವಿಚಾರಗಳ ಕುರಿತು ಇಂದು
ಹೆಚ್ಚು ಸಮಯವನ್ನು ವ್ಯಯ ಮಾಡಲಿದ್ದೀರಿ.
ಬಂಧುಗಳೊಂದಿಗೆ ವ್ಯವಹಾರ ಮಾಡದಿರಿ.

ವೃಶ್ಚಿಕ
ಆತ್ಮ ವಿಶ್ವಾಸವನ್ನು ಕುಗ್ಗಿಸಿಕೊಳ್ಳದೇ ಮುಂದೆ
ಸಾಗಿ. ಎಲ್ಲರಿಗೂ ನೀವು ಸರಿಯಾಗಿ ಇರಬೇಕು
ಎಂದೇನೂ ಇಲ್ಲ. ನಿಮಗೆ ನೀವು ಸರಿಯಾಗಿರಿ. 

ಧನುಸ್ಸು
ಸುಳ್ಳನ್ನು ಹೇಳುವ ವ್ಯಕ್ತಿಗಳಿಂದ ಅಂತರ
ಕಾಯ್ದುಕೊಳ್ಳಿ. ಆದಾಯದಲ್ಲಿ ಏರಿಕೆ,
ಖರ್ಚಿನಲ್ಲಿಯೂ ಏರಿಕೆ ಕಂಡುಬರಲಿದೆ.

ಮಕರ
ಪ್ರೀತಿಸುವವರ ಸಂಖ್ಯೆಗಿಂತ ದ್ವೇಷಿಸುವವರ
ಸಂಖ್ಯೆ ಹೆಚ್ಚಾಗಲಿದೆ. ಧೈರ್ಯದಿಂದ ಮುಂದೆ
ಸಾಗಿದರೆ ಯಶಸ್ಸು. ನೆಮ್ಮದಿ ಹೆಚ್ಚಾಗಲಿದೆ.

ಕುಂಭ
ಯಾರೋ ಮಾಡಿದ ಕಾರ್ಯಕ್ಕೆ ನೀವು ನಿಮ್ಮ
ಹೆಸರು ಹೇಳಿಕೊಳ್ಳುವುದು ಬೇಡ. ಸಾಧ್ಯ
ವಾದರೆ ಒಳಿತು ಮಾಡಿ, ಇಲ್ಲ ಸುಮ್ಮನೆ ಇರಿ.

ಮೀನ 
ಅಪರಿಚಿತರ ಸಹಾಯದಿಂದ ಅಪಾಯದಿಂದ
ಪಾರಾಗಲಿದ್ದೀರಿ. ಹೊಸ ಸ್ಥಳಕ್ಕೆ ಭೇಟಿ. 
ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.