ಈ ರಾಶಿಗೆ ಗೆಲುವು ಖಚಿತ : ಹೆಚ್ಚು ಒಳಿತಾಗಲಿದೆ

ಮೇಷ
ಹಂಚುವುದಿದ್ದರೆ ಒಳ್ಳೆಯ ಚಿಂತನೆಗಳನ್ನು
ಹಂಚಿ. ನಿಮ್ಮಿಂದ ಕೆಲವರು ಸಹಾಯ
ಬಯಸಲಿದ್ದಾರೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ.

ವೃಷಭ
ಆತ್ಮವಿಶ್ವಾಸವೇ ನಿಮ್ಮ ಗೆಲುವಿಗೆ ಮೊದಲ
ಮೆಟ್ಟಿಲಾಗಲಿದೆ. ಸಮಯಕ್ಕೆ ಸರಿಯಾಗಿ ಎಲ್ಲಾ
ಕೆಲಸಗಳನ್ನೂ ಮಾಡಿ ಮುಗಿಸಿಕೊಳ್ಳಿ.

ಮಿಥುನ
ಸುಳ್ಳು ಆರೋಪಗಳಿಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಅವು ಬಂದ
ಹಾಗೆಯೇ ಮಾಯವಾಗಿ ಹೋಗುತ್ತವೆ.

ಕಟಕ
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ
ಪಡೆದವರಂತೆ ಕಾಣಿರೋ ಎನ್ನುವ ಹಾಗೆ
ದಾನ ಧರ್ಮವನ್ನು ಮಾಡಲಿದ್ದೀರಿ.

ಸಿಂಹ
ಸಾಲ ಕೊಡದಿರಿ. ಪಡೆದ ಸಾಲವನ್ನು
ಮರೆಯದಿರಿ. ಅಂದುಕೊಂಡಿರುವ
ಕಾರ್ಯಗಳಲ್ಲಿ ಸಣ್ಣ ವ್ಯತ್ಯಾಸಗಳು ಆಗಲಿವೆ.

ಕನ್ಯಾ
ತೀರಾ ಹತ್ತಿರದ ಬಂಧುಗಳು ದೂರವಾಗಲಿ
ದ್ದಾರೆ. ಪಾಲಿಗೆ ಬಂದದ್ದು ಪಂಚಾಮೃತ.
ಇರುವುದರಲ್ಲಿಯೇ ತೃಪ್ತಿ ಕಂಡುಕೊಳ್ಳಿ.

ತುಲಾ 
ಸುಳ್ಳುಗಳು ಕ್ಷಣಿಕ ಸುಖ ನೀಡಿದರೂ ಮುಂದೆ
ಅದರಿಂದ ಆಗುವ ಸಮಸ್ಯೆಯೇ ಹೆಚ್ಚು.
ಇರುವುದನ್ನು ಇದ್ದ ಹಾಗೆ ಹೇಳಿಬಿಡಿ.

ವೃಶ್ಚಿಕ
ನಿಮ್ಮನ್ನು ತಿರಸ್ಕಾರ ಮಾಡಿದ್ದವರೇ ಇಂದು
ಪುರಸ್ಕಾರ ಮಾಡಲಿದ್ದಾರೆ. ನಿಮ್ಮ ಶಕ್ತಿಯ
ಮೇಲೆ ನಿಮಗೆ ನಂಬಿಕೆ ಇರಲಿ. ಒಳಿತಾಗಲಿದೆ. 

ಧನುಸ್ಸು
ದೂರದ ಬೆಟ್ಟ ಯಾವಾಗಲೂ ನುಣ್ಣಗೆ
ಕಾಣುವುದು. ವಿನಾಕಾರಣ ಕೋಪ
ಮಾಡಿಕೊಳ್ಳದಿರಿ. ಲಾಭ ಹೆಚ್ಚಾಗಲಿದೆ.

ಮಕರ
ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ
ಸಾಮ್ಯತೆ ಇರುವಂತೆ ನೋಡಿಕೊಳ್ಳಿ. ಇಲ್ಲದೇ
ಇದ್ದರೆ ನಿಮ್ಮ ಮಾತಿಗೆ ಬೆಲೆ ಇಲ್ಲದಾದೀತು.

ಕುಂಭ
ಅನಾರೋಗ್ಯದಿಂದ ಅಂದುಕೊಂಡಿದ್ದ
ಕಾರ್ಯಗಳು ಮುಂದೂಡಲ್ಪಡುತ್ತವೆ.
ನಾಳೆಗಾಗಿ ಹೆಚ್ಚು ಚಿಂತೆ ಮಾಡುವುದು ಬೇಡ.

ಮೀನ 
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ
ರಾತ್ರಿಯಲ್ಲಿ ಕೊಡೆ ಹಿಡಿದನಂತೆ. ಹಾಗೆ ನಿಮ್ಮ
ಇಂದಿನ ದಿನ ಆಗಲಿದೆ. ಎಚ್ಚರಿಕೆಯಿಂದಿರಿ.