ಈ ರಾಶಿಗೆ ಆದಾಯ ಏರಿಕೆಯಾಗಲಿದ್ದು, ಹೆಚ್ಚು ಲಾಭ ದೊರೆಯುತ್ತೆ


ಮೇಷ : ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಮುನ್ನಡೆಯುವ ಗುಣವು ಇರಬೇಕು. ಚಿಂತೆ ಇಲ್ಲದೇ ದಿನ ಕಳೆಯುವಿರಿ

ವೃಷಭ : ಮನೆಗೆ ಒಳ್ಳೆಯ ಮಗನಾಗಿ ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳಲಿದ್ದೀರಿ. ಆದಾಯದಲ್ಲಿ ಏರಿಕೆ. 

ಮಿಥುನ : ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಆಲಸ್ಯ ಕಡಿಮೆಯಾಗಲಿದೆ. ಶುಭ ಫಲ

ಕಟಕ : ನಿಮ್ಮ ಮೇಲೆ ನಿಮ್ಮ ಮನೆಯವರಿಗೆ ಹೆಚ್ಚು ನಂಬಿಕೆ ಉಂಟಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವ ವಹಿಸಲಿದ್ದೀರಿ. 

ಸಿಂಹ : ನಿಮ್ಮದಲ್ಲದ ಕಾರ್ಯಗಳಲ್ಲಿ ನೀವು ಮೂಗು ತೂರಿಸದಿರಿ. ಚಿಕ್ಕ ಮಕ್ಕಳ ಬಗ್ಗೆ ಮಮಕಾರ ಹೆಚ್ಚಾಗಲಿದೆ. 

ಕನ್ಯಾ : ಮತ್ತೊಬ್ಬರಿಂದ ಹೇಳಿಸಿಕೊಂಡು ಕೆಲಸ ಮಾಡದಿರಿ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡಿ ಮುಗಿಸಲಿದ್ದೀರಿ. 

ತುಲಾ : ಗುರುಗಳು ತೋರಿದ ದಾಳಿಯಲ್ಲಿ ಮುಂದೆ ಸಾಗಲಿದ್ದೀರಿ. ನಿಮ್ಮ ಹಿತವನ್ನು ಬಯಸುವವರ ಸಂಖ್ಯೆ ಹೆಚ್ಚಾಗಲಿದೆ. ಶುಭ ಫಲ

ವೃಶ್ಚಿಕ : ಜೇಬಿನಲ್ಲಿ ಇರುವ ಹಣವನ್ನು ಲೆಕ್ಕಾಚಾರ ಮಾಡಿಕೊಂಡು ಖರ್ಚು ಮಾಡಲು ಮುಂದಾಗಿ. ಮನೆಯಲ್ಲಿ ನೆಮ್ಮದಿ ಹೆಚ್ಚಾಗಲಿದೆ. 

ಧನಸ್ಸು : ಅತಿಯಾದ ಆತ್ಮವುಶ್ವಾಸ ಬೇಡ. ನಿಮ್ಮಿಂದಲೇ ಎಲ್ಲವೖ  ಆಗುತ್ತಿದೆ ಎನ್ನುವ ಅಹಂಕಾರವೂ ಬೇಡ, ಮಾತಿನಲ್ಲಿ ವಿನಯ ಹೆಚ್ಚಾಗಲಿದೆ. 

ಮಕರ : ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಹೆಚ್ಚು ಮೌನವಾಗಿ  ಇರಿ. 

ಕುಂಭ : ಆರಾಮವಾಗಿ ಇರುವುದಕ್ಕಾಗಿ ಇಷ್ಟಪಡುವಿರಿ. ಸ್ನೇಹಿತರಿಗೆ ಹಣಕಾಸಿನ ನೆರವು ನೀಡಲಿದ್ದೀರಿ. ತಾಳ್ಮೆ ಇರಲಿ. 

ಮೀನ : ಬಂಧುಗಳ ಆಗಮನದಿಂದ ಮನೆಯಲ್ಲಿ ಖರ್ಚು, ಮಕ್ಕಳೊಂದಿಗೆ ಸಂಜೆ ಕಳೆಯಲಿದ್ದೀರಿ, ಶುಭ ಫಲ