ಈ ರಾಶಿಗೆ ಶುಭ ಫಲದೊಂದಿಗೆ ಅಂದುಕೊಂಡದ್ದಾಗಲಿದೆ :ಉಳಿದ ರಾಶಿ?


ಮೇಷ
ಯಾವುದೇ ಕಾರ್ಯ ಮಾಡುವುದಿದ್ದರೂ
ಸ್ವಂತ ಬುದ್ಧಿಯಿಂದ ಮಾಡಿ. ಹಿರಿಯರಿಂದ
ನಿಮಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ.

ವೃಷಭ
ಅಪರೂಪಕ್ಕೆ ಹಳೆಯ ಸ್ನೇಹಿತರು ಸಿಗಲಿದ್ದಾರೆ.
ಸೋಮಾರಿತನದಿಂದ ಹೊರ ಬರಲಿದ್ದೀರಿ.
ಕೈಗೊಂಡ ಕಾರ್ಯಗಳು ಪೂರ್ಣವಾಗಲಿವೆ.

ಮಿಥುನ
ಹುಚ್ಚು ಆಸೆಗಳಿಗೆ ಕಡಿವಾಣ ಹಾಕಿ.
ಮತ್ತೊಬ್ಬರಿಗೆ ನಿಮ್ಮನ್ನು ನೀವು ಹೋಲಿಕೆ
ಮಾಡಿಕೊಳ್ಳುವುದು ಬೇಡ. ಶುಭ ಫಲ.

ಕಟಕ
ಮಾಡಿದ ಕೆಟ್ಟ ಕೆಲಸಕ್ಕೆ ಸರಿಯಾದ ಶಿಕ್ಷೆ
ಆಗಿಯೇ ಆಗುತ್ತದೆ. ಮನೆಯಲ್ಲಿ ಲಕ್ಷ್ಮಿ
ನೆಲಸಲಿದ್ದಾಳೆ. ಮಹಿಳೆಯರಿಗೆ ಶುಭ ದಿನ.

ಸಿಂಹ
ಕುಟುಂಬ ಸಮೇತರಾಗಿ ದೂರದ ಪ್ರಯಾಣ
ಕೈಗೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ
ಉಂಟಾಗಲಿದೆ. ನೆಮ್ಮದಿಯಾಗಿ ಇರುವಿರಿ. 

ಕನ್ಯಾ
ಆಸೆ ಎನ್ನುವ ಕುದುರೆಯನ್ನು ಕಟ್ಟಿ ಹಾಕಿದರೆ
ನೆಮ್ಮದಿ ಎನ್ನುವುದು ತಾನಾಗಿಯೇ ಸಿಗುತ್ತದೆ.
ಎಲ್ಲರೊಂದಿಗೂ ವಿಶ್ವಾಸದಿಂದ ಇರಲಿದ್ದೀರಿ.

ತುಲಾ 
ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಸಮಯಕ್ಕೆ
ಸರಿಯಾಗಿ ನಿರ್ವಹಿಸಲಿದ್ದೀರಿ. ದೊಡ್ಡ
ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ಫಲ.

ವೃಶ್ಚಿಕ
ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ
ಯೇ. ಸ್ಥಾನ ಬದಲಾವಣೆಯಿಂದ ನೆಮ್ಮದಿ
ದೊರೆಯಲಿದೆ. ಧೈರ್ಯ ಕಾಯಲಿದೆ. 

ಧನುಸ್ಸು
ನಿಮ್ಮ ಕೆಲಸಕ್ಕೂ ನೀವು ಮಾಡುವ
ಆಲೋಚನೆಗೂ ವ್ಯತ್ಯಾಸ ಏರ್ಪಡಲಿದೆ.
ಬೈದವರು ಬದುಕುವುದಕ್ಕೆ ಹೇಳುತ್ತಾರೆ.

ಮಕರ
ಹೊಸ ವಿಚಾರಗಳನ್ನು ತಿಳಿದುಕೊಳ್ಳಲು
ಮುಂದಾಗುವಿರಿ. ನಿಮಗೆ ಸರಿ ಎನ್ನಿಸಿದ್ದನ್ನು
ಮಾಡಿ ಮುಗಿಸಿ. ಮತ್ತೊಬ್ಬರಿಗೆ ಕಾಯದಿರಿ.

ಕುಂಭ
ಸುತ್ತಲಿನ ವಾತಾವರಣವನ್ನು ಶುಚಿಯಾಗಿ
ಇಟ್ಟುಕೊಳ್ಳಲಿದ್ದೀರಿ. ತಾಳ್ಮೆಯಿಂದ ಹಿಡಿದ
ಕೆಲಸದಲ್ಲಿ ಜಯ ಸಿಗಲಿದೆ. ಆರೋಗ್ಯ ವೃದ್ಧಿ.

ಮೀನ 
ಬಹಳ ದಿನಗಳ ಬಯಕೆ ಇಂದು ಈಡೇರಲಿದೆ.
ಯಾರೊಂದಿಗೂ ಮನಸ್ಥಾಪ ಬೇಡ. ನಗು 
ನಗುತ್ತಲೇ ದಿನ ಪೂರ್ತಿ ಕಳೆಯಲಿದ್ದೀರಿ.