ಸಣ್ಣ ಪ್ರಯತ್ನವೊಂದು ಭರ್ಜರಿ ಲಾಭ ಕೊಡಲಿದೆ

ಮೇಷ
ದೇವರ ಮೇಲೆ ಭಾರ ಹಾಕಿ ಕಾರ್ಯರಂಗಕ್ಕೆ
ಇಳಿಯಿರಿ. ಹಣಕಾಸಿನ ವ್ಯವಹಾರಗಳು
ಕೈಗೂಡಲಿವೆ. ನಗು ನಗುತ್ತಾ ಇರುವಿರಿ.

ವೃಷಭ
ಸಂಕಷ್ಟದಲ್ಲಿ ಇರುವ ಸ್ನೇಹಿತರಿಗೆ
ನೆರವಾಗಲಿದ್ದೀರಿ. ದೊಡ್ಡವರ ಮಾತಿಗೆ ಬೆಲೆ
ನೀಡಿ. ಒಳ್ಳೆಯ ಮಾತಿಗೆ ಬೆಲೆ ಇದ್ದೇ ಇದೆ.

ಮಿಥುನ
ಕಷ್ಟಕಾಲದಲ್ಲಿ ಕೈ ಹಿಡಿದವರನ್ನು ನೆನೆದುಕೊಳ್ಳಿ.
ದೊಡ್ಡ ಕಾರ್ಯಗಳಲ್ಲಿ ನಿಮ್ಮದೂ ಸಣ್ಣ
ಪ್ರಯತ್ನ ಸೇರಲಿದೆ. ಲಾಭ ಹೆಚ್ಚಾಗಲಿದೆ.

ಕಟಕ
ಇನ್ನೇನು ಎಲ್ಲವೂ ಮುಗಿದೇ ಹೋಯಿತು
ಎಂದುಕೊಳ್ಳುವಾಗ ಹೊಸ ಅವಕಾಶಗಳು
ಸಿಗಲಿವೆ. ಎಲ್ಲವೂ ಅಂದುಕೊಂಡಂತೆ ಆಗದು.

ಸಿಂಹ
ನೋವಿನಲ್ಲೂ ನಗುವುದನ್ನು ಬಲ್ಲವರಾದರೆ
ನೆಮ್ಮದಿ ಹೆಚ್ಚಾಗಲಿದೆ. ಸಾಧ್ಯವಾದರೆ ಒಳಿತು
ಮಾಡಿ, ಇಲ್ಲವಾದರೆ ಸುಮ್ಮನೆ ಇದ್ದು ಬಿಡಿ.

ಕನ್ಯಾ
ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಬೀಳಿಸುವ
ತಾಕತ್ತು ನಿಮಗೆ ಇದೆ. ಒಳ್ಳೆಯ ಮಾತುಗಳಿಂದ
ಮನಸ್ಸಿಗೆ ಸಮಾಧಾನ ಸಿಗಲಿದೆ. ಶುಭ ಫಲ.

ತುಲಾ 
ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.
ಸಾಂಸಾರಿಕ ಜೀವನದಲ್ಲಿ ಸಂತಸದ ಕ್ಷಣಗಳು
ಹೆಚ್ಚಾಗಲಿದೆ. ಹೆಚ್ಚು ಚಿಪುಣತನ ಬೇಡ.

ವೃಶ್ಚಿಕ
ಮತ್ತೊಬ್ಬರ ಮೇಲೆ ಅವಲಂಬಿತರಾಗಿ
ಕೂರದಿರಿ. ಸ್ವಂತ ಬಲದಿಂದ ಗುರಿ ಸೇರಲಿ
ದ್ದೀರಿ. ಆತ್ಮೀಯರು ದೂರವಾಗಲಿದ್ದಾರೆ. 

ಧನುಸ್ಸು
ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.
ಹಳೆಯ ನೆನಪುಗಳಿಗೆ ಮತ್ತೆ ಮರು ಜೀವ
ಬರಲಿದೆ. ಇಡೀ ದಿನ ಸಂತಸದಿಂದ ಇರುವಿರಿ.

ಮಕರ
ಸಮಚಿತ್ತದಿಂದ ಎಲ್ಲವನ್ನೂ ನಿಭಾಯಿಸಿ.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ
ದ್ದೀರಿ. ಹಳೆಯ ಸ್ನೇಹ ಮತ್ತೆ ಚಿಗುರಲಿದೆ.

ಕುಂಭ
ಮುಖ ಗಂಟು ಹಾಕಿಕೊಂಡು ಕುಳಿತರೆ ಏನೂ
ಮಾಡಲು ಆಗದು. ನಗು ನಗುತ್ತಾ
ಬಂದದ್ದೆಲ್ಲವನ್ನೂ ನಿಭಾಯಿಸಿಕೊಂಡು ಸಾಗಿ.

ಮೀನ 
ಮುಂದೆ ಅನಾಹುತ ಕಾದಿದೆ ಎಂದು
ಗೊತ್ತಿದ್ದರೂ ಹುಚ್ಚು ಸಾಹಸಕ್ಕೆ ಮುಂದಾಗು
ವುದು ಬೇಡ. ತಾಳ್ಮೆ ಹೆಚ್ಚಾಗಿ ಇರಲಿ