ಈ ರಾಶಿಯವರು ಶುಭ ಕಾರ್ಯವೊಂದಕ್ಕೆ ಸಿದ್ಧರಾಗಿ

ಮೇಷ
ವಿನಯವೇ ನಿಮ್ಮನ್ನು ದೊಡ್ಡ ಸ್ಥಾನಕ್ಕೆ
ಕರೆದೊಯ್ಯಲಿದೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ
ಎಂದು ಭಾವಿಸಿ. ಶುಭ ಕಾರ್ಯಕ್ಕೆ ಸಿದ್ಧರಾಗಿ.

ವೃಷಭ
ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಎಂಥ
ಕಾರ್ಯವನ್ನು ಬೇಕಿದ್ದರೂ ಮಾಡಿ
ಮುಗಿಸಬಹುದು. ಛಲ ಹೆಚ್ಚಾಗಲಿದೆ.

ಮಿಥುನ
ನಿಮಗೆ ಬೇಡವಾದ ವಸ್ತುವಾಗಲಿ,
ವಿಚಾರವಾಗಲಿ ಅದರತ್ತ ಚಿತ್ತ ಹರಿಸದಿರಿ.
ಇಡೀ ದಿನವನ್ನು ನೆಮ್ಮದಿಯಿಂದ ಕಳೆಯುವಿರಿ.

ಕಟಕ
ಸಂಬಂಧಿಗಳ ಮೇಲೆ ನಂಬಿಕೆ ಇರಲಿ.
ಹಣಕಾಸಿನ ವಿಚಾರದಲ್ಲಿ ಜಾಣತನದಿಂದ
ನಡೆದುಕೊಳ್ಳಿ. ವ್ಯಾಪಾರದಲ್ಲಿ ಲಾಭ.

ಸಿಂಹ
ನೀವು ಹೆಚ್ಚು ಇಷ್ಟಪಡುವ ವ್ಯಕ್ತಿಗಳಿಂದ
ಇಂದು ನಿಮಗೆ ಸಂತೋಷದ ಸುದ್ದಿ
ತಿಳಿಯಲಿದೆ. ನಿಮ್ಮ ತಪ್ಪಿಗೆ ಮತ್ತೊಬ್ಬರಿಗೆ ಶಿಕೆ

ಕನ್ಯಾ
ಸಹೋದ್ಯೋಗಿಗಳ ಜತೆ ಸ್ನೇಹಯುತವಾಗಿ
ಇರುವಿರಿ. ಎಲ್ಲಾ ಸಮಸ್ಯೆಗಳಿಗೂ ನೀವೇ
ಪರಿಹಾರ ಅಲ್ಲ. ಶಾಂತಿಯಿಂದ ವರ್ತಿಸಿ.

ತುಲಾ 
ಕೆಟ್ಟ ಮೇಲೆ ಬುದ್ಧಿ ಬಂತು ಎಂದ ಹಾಗೆ, ತಪ್ಪು
ಮಾಡಿಯಾದ ಮೇಲೆ ಪಶ್ಚಾತ್ತಾಪ
ಪಡಲಿದ್ದೀರಿ. ಸ್ನೇಹಿತರ ನೆರವು ದೊರೆಯಲಿದೆ.

ವೃಶ್ಚಿಕ
ನಿಮ್ಮ ಕೆಲಸದ ಹೊರೆಯನ್ನು ಇಳಿಸಲು
ಸಹೋದ್ಯೋಗಿಗಳು ಬರಲಿದ್ದಾರೆ.
ಎಚ್ಚರಿಕೆಯಿಂದ ಮಾಡಿದ ಕಾರ್ಯ ಸಿದ್ಧಿ.

 ಧನುಸ್ಸು
ತಂದೆಯ ಮಾತಿನಂತೆ ಎಲ್ಲವೂ ನಡೆಯಲಿದೆ.
ನಿಮ್ಮ ನೋವೇ ನಿಮಗೆ ಹೆಚ್ಚು ಎಂದು
ತಿಳಿಯದೇ ಇತರರಿಗೆ ನೆರವು ನೀಡಿ.

ಮಕರ
ಶುಭ ಸುದ್ದಿಯ ಮೂಲಕ ಇಂದಿನ ದಿನ
ಆರಂಭವಾಗಲಿದೆ. ಅಮ್ಮನ ಸಹಾಯದಿಂದ
ವ್ಯಾಪಾರದಲ್ಲಿ ಲಾಭ. ನೆಮ್ಮದಿ ಹೆಚ್ಚಲಿದೆ.

ಕುಂಭ
ಬಣ್ಣದ ಮಾತುಗಳಿಗೆ ಮರುಳಾಗದಿರಿ.
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ನಿಮ್ಮ
ಸ್ಥಿತಿ ಆಗಲಿದೆ. ಗೆಲುವಿಗಾಗಿ ಶ್ರಮ ಬೇಕು.

ಮೀನ 
ನನ್ನ ಮಾತೇ ನಡೆಯಬೇಕು ಎನ್ನುವ ಹಠ
ಬೇಡ. ಕಾಲ ಕೂಡಿ ಬಂದಾಗ ಎಲ್ಲಾ
ಕಾರ್ಯಗಳೂ ನಡೆಯುತ್ತವೆ. ತಾಳ್ಮೆ ಇರಲಿ