Asianet Suvarna News Asianet Suvarna News

ಈ ರಾಶಿಗೆ ಅತಿ ಹೆಚ್ಚಿನ ಲಾಭ ದೊರೆಯಲಿದೆ

ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ ಭವಿಷ್ಯ 

Daily Bhavishya 20 July 2019
Author
Bengaluru, First Published Jul 20, 2019, 7:12 AM IST

ಈ ರಾಶೀಗೆ ಅತಿ ಹೆಚ್ಚಿನ ಲಾಭ ದೊರೆಯಲಿದೆ

ಮೇಷ
ಅಪ್ಪ ಅಮ್ಮನ ಮನಸ್ಸಿಗೆ ನೋವಾಗದ
ರೀತಿಯಲ್ಲಿ ನಡೆದುಕೊಳ್ಳಿ. ನಿಮ್ಮಿಂದ
ಮತ್ತೊಬ್ಬರಿಗೆ ತೊಂದರೆಯಾಗದಿರಲಿ.

ವೃಷಭ
ನಿಮ್ಮ ದಾರಿಯಲ್ಲಿ ನೀವು ಸಾಗುವಾಗ ಎಡರು
ತೊಡರುಗಳು ಬರುವುದು ಸಹಜ.
ಯಾವುದಕ್ಕೂ ಅಂಜದೇ ಮುಂದೆ ಸಾಗುತ್ತಿರಿ.

ಮಿಥುನ
ಹಿರಿಯ ಅಧಿಕಾರಿಗಳಿಂದ ಸಣ್ಣ ಮಟ್ಟದ
ಕಿರಿಕಿರಿ ಅನುಭವಿಸಲಿದ್ದೀರಿ. ಎಲ್ಲರನ್ನೂ
ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ.

ಕಟಕ
ಹಣಕಾಸಿನ ವಿಚಾರದಲ್ಲಿ ಬಿಗಿಯಾಗಿ ವರ್ತನೆ
ಮಾಡಲಿದ್ದೀರಿ. ನಿತ್ಯದ ಜಂಜಾಟದಿಂದ
ದೂರವಾಗಲಿದ್ದೀರಿ. ಶಾಂತಿ ಹೆಚ್ಚಲಿದೆ.

ಸಿಂಹ
ನಿಮ್ಮ ಹಿತಾಸಕ್ತಿಗೆ ಧಕ್ಕೆ ತರುವ ಪ್ರಯತ್ನಗಳು
ಆಗಲಿವೆ. ನಿಧಾನಕ್ಕೆ ಆಲೋಚನೆ ಮಾಡಿ ಕೆಲಸ
ಕಾರ್ಯಗಳನ್ನು ಮಾಡಿ. ನಿರೀಕ್ಷೆ ಬೇಡ. 

ಕನ್ಯಾ
ಹೆಚ್ಚು ಕೋಪ ಮಾಡಿಕೊಳ್ಳುವುದು ಒಳ್ಳೆಯ
ದಲ್ಲ. ಮಾಡಿದ ತಪ್ಪಿಗೆ ಪಶ್ಚಾತ್ತಾಪ
ಪಡಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ.

ತುಲಾ 
ಹೆಚ್ಚಿನ ಕೆಲಸದ ಒತ್ತಡದಿಂದ ಸಂಜೆ ವೇಳೆಗೆ
ಆಯಾಸ ಹೆಚ್ಚಾಗಲಿದೆ. ನಿಮ್ಮ ಕೆಲಸಕ್ಕೆ ತಕ್ಕ
ಪ್ರತಿಫಲವೂ ದೊರೆಯಲಿದೆ. ಖರ್ಚು ಅಧಿಕ.

ವೃಶ್ಚಿಕ
ಹೆಚ್ಚು ಲಾಭ ದೊರೆಯುವಂತಹ ಕಾರ್ಯ
ದಲ್ಲಿ ತೊಡಗಿಕೊಳ್ಳಲಿದ್ದೀರಿ. ನಿಮ್ಮ ಮಾತಿ ನಿಂದ
ಇತರರಿಗೆ ನೋವಾಗದಂತೆ ನೋಡಿಕೊಳ್ಳಿ. 

ಧನುಸ್ಸು
ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ.
ಖರ್ಚಿನಲ್ಲಿ ಹಿಡಿತ ಸಾಧಿಸುವುದು ಒಳಿತು.
ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ.

ಮಕರ
ನೀವು ಮಾಡಿದ್ದೇ ಸರಿ ಎಂದು ಹೇಳಿಕೊಳ್ಳು
ವುದು ಬೇಡ. ಸ್ವಾರ್ಥ ಮರೆತು
ಎಲ್ಲರೊಂದಿಗೂ ಒಂದಾಗಲಿದ್ದೀರಿ. ಶುಭ ಫಲ

ಕುಂಭ
ದೊಡ್ಡವರಿಂದ ಸಾಕಷ್ಟು ಮಾಹಿತಿಗಳನ್ನು
ತಿಳಿದುಕೊಳ್ಳಲಿದ್ದೀರಿ. ಕ್ರೀಡೆಯಲ್ಲಿ ಆಸಕ್ತಿ
ಹೆಚ್ಚಾಗಲಿದೆ. ಕೆಲಸದಲ್ಲಿಯೂ ಒತ್ತಡ.

ಮೀನ 
ಹಬ್ಬದ ತಯಾರಿಯಲ್ಲಿಯೇ ಇಡೀ ದಿನ
ತೊಡಗಿಕೊಳ್ಳಲಿದ್ದೀರಿ. ಸಂಬಂಧಿಗಳು ಮನೆಗೆ
ಬರಲಿದ್ದಾರೆ. ಹೊಸ ಸಂಬಂಧ ಬೆಸೆಯಲಿವೆ

Follow Us:
Download App:
  • android
  • ios