ಈ ರಾಶಿಯವರಿಗೆ ಒಳ್ಳೆಯ ಸಮಾಚಾರವು ಕಾದಿದೆ 

ಮೇಷ
ನೀವು ನಡೆಯುತ್ತಿರುವ ದಾರಿ ಸರಿಯಾಗಿದೆ
ಎಂದ ಮೇಲೆ ಮತ್ಯಾರ ಮಾತಿಗೂ ತಲೆ
ಕೆಡಿಸಿಕೊಳ್ಳುವುದು ಬೇಡ. ಶುಭವಾಗಲಿದೆ.

ವೃಷಭ
ಸಾಧ್ಯವಾದರೆ ಒಳ್ಳೆಯದ್ದನ್ನು ಹಂಚಿ, ಇಲ್ಲದೇ
ಹೋದರೆ ಸುಮ್ಮನೆ ಇದ್ದು ಬಿಡುವುದು
ಒಳಿತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಮಿಥುನ
ನಾನು ಏನೇ ಮಾಡಿದರೂ ನಡೆಯುತ್ತದೆ
ಎನ್ನುವ ಮನಸ್ಥಿತಿಯಿಂದ ಹೊರಗೆ ಬನ್ನಿ. ಸನ್ನಿ
ವೇಶಕ್ಕೆ ತಕ್ಕಂತೆ ವರ್ತಿಸುವುದು ಅನಿವಾರ್ಯ.

ಕಟಕ
ಮಾತಿನ ಮೂಲಕ ನಿಮ್ಮ ವ್ಯಕ್ತಿತ್ವವನ್ನು ನಿರೂ
ಪಿಸುವುದಕ್ಕೆ ಬದಲಾಗಿ ಕೆಲಸದ ಮೂಲಕ
ನಿಮ್ಮ ವ್ಯಕ್ತಿತ್ವವನ್ನು ತೋರಿಸಲಿದ್ದೀರಿ.

ಸಿಂಹ
ಒಳ್ಳೆಯದ್ದನ್ನೇ ಮಾಡಬೇಕು ಎನ್ನುವ ಆಸೆ
ನಿಮಗೆ ಇದ್ದರೂ ನಿಮ್ಮ ಕಾರ್ಯದಿಂದ ಕೆಲವು
ಮಂದಿಗೆ ತೊಂದರೆಯಾಗಲಿದೆ. ಶುಭ ಫಲ.

ಕನ್ಯಾ
ಕಷ್ಟಗಳು ನನಗೇ ಯಾಕೆ ಬರುತ್ತವೆ ಎಂದು
ಕೊರಗುತ್ತಾ ಕೂರುವುದು ಬೇಡ.
ಸಂಕಷ್ಟದಿಂದ ಹೊರ ಬರುವ ದಾರಿ ಹುಡುಕಿ.

ತುಲಾ 
ಒಳ್ಳೆಯ ಲಾಭವೇ ಬರಲಿದೆ ಎನ್ನುವ ನಿರೀಕ್ಷೆ
ಹುಸಿಯಾಗಲಿದೆ. ನಟನೆಯಲ್ಲಿ ಆಸಕ್ತಿ
ಹೆಚ್ಚಾಗಲಿದೆ. ದೊಡ್ಡವರ ಮಾತಿಗೆ ಬೆಲೆ ನೀಡಿ.

ವೃಶ್ಚಿಕ
ನನ್ನಿಂದಲೇ ಎಲ್ಲವೂ ಆಗುತ್ತದೆ ಎನ್ನುವ ಅಹಂ
ಬೇಡ. ಸ್ನೇಹಿತರ ಮಾತಿಗೆ ಬೇರೆ ಬೇರೆ ಅರ್ಥ
ಕಲ್ಪಿಸಿಕೊಂಡು ಕೊರಗುತ್ತಾ ಕೂರದಿರಿ. 

ಧನುಸ್ಸು
ಎಲ್ಲಾ ಕೆಲಸಗಳೂ ನಿಗದಿತ ಅವಧಿಗಿಂತ ಬೇಗ
ಬೇಗ ಮುಗಿಯಲಿವೆ. ನಿಮ್ಮನ್ನು
ವಿರೋಧಿಸುವವರೂ ಹುಟ್ಟಿಕೊಳ್ಳಲಿದ್ದಾರೆ.

ಮಕರ
ಸ್ನೇಹಿತರ ಸಮಸ್ಯೆಗಳಿಗೆ ನೀವು ಪರಿಹಾರ
ಒದಗಿಸಲಿದ್ದೀರಿ. ದಿನ ಪೂರ್ತಿ ವಿವಿಧ
ಕಾರ್ಯಗಳಲ್ಲಿ ನಿರತರಾಗಿರುವಿರಿ. ಶುಭ ಫಲ.

ಕುಂಭ
ತಾಂತ್ರಿಕವಾಗಿ ಮತ್ತಷ್ಟು ಗಟ್ಟಿಯಾಗುವಿರಿ.
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಇಡೀ ದಿನ ಗೊಂದಲದಲ್ಲಿಯೇ ಕಳೆಯಲಿದೆ.

ಮೀನ 
ಪೂರ್ಣ ಮಾಹಿತಿ ತಿಳಿದುಕೊಳ್ಳದೇ ಯಾವುದೇ
ವಿಚಾರದ ಬಗ್ಗೆ ಮಾತನಾಡುವುದು ಸರಿ
ಯಲ್ಲ. ನಿಮ್ಮ ಆಸೆಗಳು ಇಂದು ಈಡೇರಲಿವೆ.