ಈ ರಾಶಿಗಿಂದು ಶುಭದಾಯಕ ದಿನ : ಶ್ರಮಕ್ಕೆ ಸಿಗಲಿದೆ ಫಲ

ಮೇಷ
ಹಿಂದಿನ ಕೆಲಸಗಳು ಅಂತ್ಯವಾಗಲಿವೆ. ಶ್ರಮಕ್ಕೆ
ತಕ್ಕ ಪ್ರತಿಫಲ ಇಂದು ದೊರೆಯಲಿದೆ.
ಅಸಾಧ್ಯವಾದ ಕೆಲಸಗಳಿಂದ ಹಿಂದೆ ಬನ್ನಿ.

ವೃಷಭ
ದೊಡ್ಡವರ ಮಾತಿಗೆ ಬೆಲೆ ನೀಡಿ. ಎಲ್ಲವೂ
ನಿಮ್ಮ ಅಣತೆಯಂತೆಯೇ ನೆರವೇರಲಿದೆ.
ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಸಹಜ

ಮಿಥುನ
ಒಂದೇ ವಿಚಾರದ ಬಗ್ಗೆ ಪದೇ ಪದೇ ಚಿಂತೆ
ಮಾಡುವುದು ಬೇಡ. ಸರಕಾರಿ ಯೋಜನೆ
ಯಿಂದ ಇಂದು ನಿಮಗೆ ಅನುಕೂಲವಾಗಲಿದೆ.

ಕಟಕ
ಎಲ್ಲದ್ದಕ್ಕೂ ಲೆಕ್ಕಾಚಾರ ಮಾಡುವುದು ಬೇಡ.
ಆದರೆ ಲೆಕ್ಕವನ್ನೇ ಹಾಕದೇ ವ್ಯವಹರಿಸುವು
ದೂ ಬೇಡ. ಯೋಚಿಸಿ ಮುಂದಡಿ ಇಡಿ.

ಸಿಂಹ
ಶ್ರದ್ಧೆಯಿಂದ ಮಾಡಿದರೆ ಯಾವ ಕೆಲಸವಾದ
ರೂ ಕೈ ಹಿಡಿಯುತ್ತದೆ. ಎಲ್ಲವೂ ನಿಮ್ಮಿಂದಲೇ
ಸಾಧ್ಯವಾಗದು, ಸ್ನೇಹಿತರ ಸಹಾಯ ಸಿಗಲಿದೆ.

ಕನ್ಯಾ
ದೂರದ ಪ್ರಯಾಣ ರದ್ದಾಗಲಿದೆ.
ಅನಾಮಧೇಯ ವ್ಯಕ್ತಿಗಳಿಂದ ಸಹಾಯ.
ಮಕ್ಕಳ ವಿಚಾರದಲ್ಲಿ ದುಡುಕುವುದು ಬೇಡ.

ತುಲಾ 
ನಿಮ್ಮ ಮಾತೇ ನಡೆಯಬೇಕು ಎನ್ನುವ ಹಠ
ಬೇಡ. ನಿಮ್ಮೊಡನೆ ಇರವವರ ಮಾತಿಗೂ
ಮಾನ್ಯತೆ ನೀಡಿ. ಆರ್ಥಿಕವಾಗಿ ಎಚ್ಚರಿಕೆ ಇರಲಿ

ವೃಶ್ಚಿಕ
ಸಮಯಕ್ಕೆ ಸರಿಯಾಗಿ ಹೊಂದಿಕೊಂಡು
ನಡೆಯಿರಿ. ಮತ್ತೊಬ್ಬರ ಭಾವನೆಗಳಿಗೆ ಹೆಚ್ಚು
ಬೆಲೆ ನೀಡಿ. ಶುಭ ಕಾರ್ಯಗಳು ಸನ್ನಿಹಿತ. 

ಧನುಸ್ಸು
ಒತ್ತಡದಿಂದ ಹೊರಗೆ ಬರಲಿದ್ದೀರಿ.
ನಿರೀಕ್ಷೆಗಳು ನಿಜವಾಗಲಿವೆ. ಆದರೂ ಕಠಿಣ
ಶ್ರಮದ ಅಗತ್ಯವಿದೆ. ನಂಬಿಕೆ ಮುಖ್ಯ.

ಮಕರ
ನಿಮ್ಮ ಬಗ್ಗೆ ಅಭಿಮಾನ ಇರುವ ವ್ಯಕ್ತಿಗ
ಳೊಂದಿಗೆ ನೀವು ಸ್ನೇಹದಿಂದ ನಡೆದುಕೊಳ್ಳಿ.
ಯಾರಿಗೂ ಹಿಂದಿರುಗಿ ಮಾತನಾಡದಿರಿ.

ಕುಂಭ
ಹತ್ತಿರದ ವ್ಯಕ್ತಿಗಳಿಗೆ ಉಡುಗೊರೆ
ನೀಡಲಿದ್ದೀರಿ. ಮನೆ ಮಂದಿಯೊಂದಿಗೆ
ಹೊರಗಡೆ ಸುತ್ತಾಟ ಹೆಚ್ಚಾಗಲಿದೆ.

ಮೀನ
ಗುಣಾತ್ಮಕವಾಗಿ ಕೆಲಸ ಮಾಡುವ ಅವಕಾಶ
ಸಿಗಲಿದೆ. ಮಹಿಳೆಯರು ಮಾತಿನ ಮೇಲೆ
ಹಿಡಿತ ಸಾಧಿಸುವುದು ಒಳ್ಳೆಯದು.