ಈ ರಾಶಿಗೆ  ಭಾರೀ ಲಾಭ ಒಲಿಯುವ ದಿನ : ಮತ್ಯಾರಿಗೆ ಯಾವ ಫಲ? 

ಮೇಷ
ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪೇ.
ಅದನ್ನು ಸಮರ್ಥನೆ ಮಾಡಿಕೊಳ್ಳುವ ಬದಲಿಗೆ
ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಿ.

ವೃಷಭ
ಒಳ್ಳೆಯ ಕಾರ್ಯ ಮಾಡಲು ತುಸು ಸಮಯ
ಬೇಕಾಗುತ್ತದೆ. ಆದರೆ ಕಾರ್ಯವನ್ನು ಪೂರ್ಣ
ಮಾಡುವ ಛಲ ಮತ್ತು ಶಕ್ತಿ ನಿಮ್ಮಲ್ಲಿ ಇರಲಿ.

ಮಿಥುನ
ನಿಮ್ಮ ಬಲದ ಮೇಲೆ ನಿಮಗೆ ನಂಬಿಕೆ ಇರಲಿ.
ಯಾರೋ ಹೇಳಿದರು ಎಂದು ಬೇಡದ
ವಿಚಾರಕ್ಕೆ ತಲೆ ಕೆಡಿಸಿಕೊಂಡು ಕೂರದಿರಿ.

ಕಟಕ
ಹೊರೆ ಹೆಚ್ಚಾಯಿತು ಎಂದು ಅಳುತ್ತಾ
ಕೂರುವುದಕ್ಕೆ ಬದಲಾಗಿ ಅದನ್ನು ಹೇಗೆ ಸರಿ
ಮಾಡಿಕೊಳ್ಳಬಹುದು ಎನ್ನುವುದನ್ನು ಚಿಂತಿಸಿ.

ಸಿಂಹ
ಧನಾತ್ಮಕ ಚಿಂತನೆಗಳು ಹೆಚ್ಚಾಗಲಿವೆ. ಧರ್ಮ
ಕಾರ್ಯಕ್ಕೆ ನಿಮ್ಮ ಸೇವೆಯ ಅಗತ್ಯವಿದೆ. ಪರ
ನಿಂದೆಯನ್ನು ನಿಲ್ಲಿಸಿ ಮುಂದೆ ಸಾಗುವಿರಿ

ಕನ್ಯಾ
ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡ ವಸ್ತು
ಹೆಚ್ಚು ಸಂತೋಷ ನೀಡಲಿದೆ. ಮಕ್ಕಳ ಪಾಲಿಗೆ
ಇದು ಶುಭವಾದ ದಿನ. ಗೆಲುವು ಸಿಗಲಿದೆ.

ತುಲಾ 
ಚಿಲ್ಲರೆ ವ್ಯಾಪಾರಿಗಳಿಗೆ ಒಳ್ಳೆಯ ಲಾಭ
ಸಿಗಲಿದೆ. ದೊಡ್ಡ ಕಾರ್ಯಗಳಿಗೆ ಇಂದು ಕೈ
ಹಾಕಲಿದ್ದೀರಿ. ಆರೋಗ್ಯದಲ್ಲಿ ಎಚ್ಚರವಿರಲಿ.

ವೃಶ್ಚಿಕ
ಬಂಧುಗಳ ಜೊತೆಗೆ ಹೆಚ್ಚು ಸಮಯ ಕಳೆಯು
ವಿರಿ. ಹಳೆಯ ಸ್ನೇಹಿತರು ಒಂದು ಕಡೆ ಸೇರು
ವುದಕ್ಕೆ ನೀವು ನೇತೃತ್ವ ವಹಿಸಿಕೊಳ್ಳುವಿರಿ. 

ಧನುಸ್ಸು
ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ
ಇರಲಿ. ಇಲ್ಲದೇ ಇದ್ದರೆ ತೀವ್ರ ಆರೋಗ್ಯ
ಸಮಸ್ಯೆ ಉಂಟಾಗಲಿದೆ. ನೆಮ್ಮದಿ ಸಿಗಲಿದೆ.

ಮಕರ
ಅನ್ಯರ ಬಗ್ಗೆಯೇ ಮಾತನಾಡುತ್ತಾ ಕುಳಿತರೆ
ನಿಮ್ಮ ಯಶಸ್ಸು ಸಾಧ್ಯವಾಗದು. ನಿಮ್ಮ
ಪಾಲಿನ ಕರ್ಮವನ್ನು ನೀವು ಮಾಡಿ ಮುಗಿಸಿ.

ಕುಂಭ
ಆಪ್ತ ಸ್ನೇಹಿತರು ಇಂದು ನಿಮ್ಮನ್ನು
ಅಗಲಲಿದ್ದಾರೆ. ಸಣ್ಣ ವಿಚಾರಗಳಿಗೂ
ರೇಗುವುದು ಬೇಡ. ಸಂತೋಷ ಹೆಚ್ಚಲಿದೆ.

ಮೀನ 
ಇರುವ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವ
ಭರದಲ್ಲಿ ಹೊಸ ಸಮಸ್ಯೆ ತಂದುಕೊಳ್ಳದಿರಿ.
ನಿಧಾನವೇ ಪ್ರಧಾನ. ಆರೋಗ್ಯ ವೃದ್ಧಿ.