ಈ ರಾಶಿಯವರಿಗೆ ಅತ್ಯಂತ ಹೆಚ್ಚಿನ ಅನುಕೂಲದ ದಿನ


ಈ ರಾಶಿಯವರಿಗೆ ಅತ್ಯಂತ ಹೆಚ್ಚಿನ ಅನುಕೂಲದ ದಿನ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಷ
ಮಕ್ಕಳೊಂದಿಗೆ ಇಂದು ಹೆಚ್ಚಿನ ಸಮಯ ಕಳೆ
ಯಲಿದ್ದೀರಿ. ಮತ್ತೊಬ್ಬರ ಪ್ರತಿಭೆ ನಿಮ್ಮಿಂದ
ಅನಾವರಣಗೊಳ್ಳಲಿದೆ. ಶುಭದಿನವಿದು.

ವೃಷಭ
ಮತ್ತೊಬ್ಬರಿಗಾಗಿ ಕಾಯುವುದು ಮತ್ತು
ಮತ್ತೊಬ್ಬರನ್ನು ಕಾಯಿಸುವುದಕ್ಕೆ ಹೋಗ
ದಿರಿ. ಕಾರ್ಯವಾಸಿ ಕತ್ತೆ ಕಾಲು.

ಮಿಥುನ
ಸೋಮಾರಿಗಳ ನಡುವೆ ಸೇರಿ ನೀವು ಹೆಚ್ಚು
ಶ್ರಮಪಡಬೇಕಾಗುತ್ತದೆ. ಹೆಚ್ಚು ಆಲೋಚನೆ
ಮಾಡುವುದು ಬಿಟ್ಟು, ಕೆಲಸ ಶುರು ಮಾಡಿ.

ಕಟಕ
ತಾಂತ್ರಿಕವಾಗಿ ಹಲವಾರು ವಿಚಾರಗಳನ್ನು
ಇಂದು ತಿಳಿದುಕೊಳ್ಳಲಿದ್ದೀರಿ. ಹೊಸ ಹೊಸ
ಜಾಗಗಳ ಪರಿಚಯವಾಗಲಿದೆ. ನೆಮ್ಮದಿ ಇದೆ.

ಸಿಂಹ
ನೀವು ಹಿಂದೆ ಮಾಡಿದ ಸಹಾಯಗಳೇ ಇಂದು
ನಿಮ್ಮ ನೆರವಿಗೆ ಬರಲಿವೆ. ಬೇರೆಯವರ
ಅಭಿಪ್ರಾಯಗಳಿಗೆ ನೀವು ಶರಣಾಗಬೇಡಿ

ಕನ್ಯಾ
ಅತಿಯಾದ ಉತ್ಸಾಹವೇ ನಿಮಗೆ ಇಂದು
ಮುಳುವಾಗುವ ಸಾಧ್ಯತೆ ಇದೆ. ಸರಿ
ಎನ್ನಿಸಿದ್ದನ್ನು ಇಂದೇ ಮಾಡಿ ಮುಗಿಸಿ.

ತುಲಾ 
ನಿಮ್ಮ ಮಾತೇ ನಡೆಯಬೇಕು ಎನ್ನುವ ಹಠ
ಬೇಡ. ನಿಮ್ಮ ಪಾಡಿಗೆ ನೀವು ಇದ್ದು ಬಿಡು
ವುದೂ ಕೂಡ ನೆಮ್ಮದಿ ತಂದುಕೊಡುತ್ತದೆ.

ವೃಶ್ಚಿಕ
ನಿಮ್ಮ ದಾರಿಯಲ್ಲಿ ನೀವು ಸಾಗುವಾಗ
ನೂರೆಂಟು ಅಡೆತಡೆ ಬರುವುದು ಸಹಜ.
ಎಲ್ಲವನ್ನೂ ದಾಟಿ ಮುಂದೆ ಸಾಗುತ್ತಿರಬೇಕು. 

ಧನುಸ್ಸು
ಗೊಣಗುತ್ತಾ ಕೂರುವುದರಿಂದ ಏನೂ
ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ಕೆಲಸ
ಮಾಡುವುದಕ್ಕೆ ಮುಂದಾದರೆ ಮಾತ್ರ ಫಲ.

ಮಕರ
ಶುಭಕಾರ್ಯಗಳನ್ನು ಮುಂದೂಡುತ್ತಾ
ಕೂರುವುದು ಬೇಡ. ಸ್ನೇಹಿತರೊಂದಿಗೆ
ಹಣಕಾಸಿನ ವ್ಯವಹಾರ ಬೇಡವೇ ಬೇಡ.

ಕುಂಭ
ನಾಳೆಗಾಗಿ ಯಾವ ಕೆಲಸವನ್ನೂ ಬಾಕಿ ಉಳಿಸಿ
ಕೊಳ್ಳದಿರಿ. ತಂದೆಯ ಸಹಕಾರದಿಂದ ಹೊಸ
ಹಾದಿಯಲ್ಲಿ ಪ್ರಯಾಣ ಆರಂಭವಾಗಲಿದೆ.

ಮೀನ 
ಸಮಸ್ಯೆಗಳನ್ನು ಸವಾಲುಗಳಂತೆ ಸ್ವೀಕಾರ
ಮಾಡಲಿದ್ದೀರಿ. ಸಹೋದ್ಯೋಗಿಗಳಿಂದ
ಮಾನಸಿಕ ಕಿರಿಕಿರಿ. ಸಂಜೆ ವೇಳೆಗೆ ಶುಭ ಸುದ್ದಿ