ಕನ್ಯಾಗೆ ಉದ್ಯೋಗ ಒಲಿಯಲಿದೆ : ಉಳಿದ ರಾಶಿಗೆ ಹೇಗಿದೆ..?

ಮೇಷ
ದೊಡ್ಡವರ ಮಾತನ್ನು ತಾಳ್ಮೆಯಿಂದ ಕೇಳಿ
ಮುಂದುವರೆಯಿರಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು
ಮಾಡಿ. ಇಡೀ ದಿನ ಉಲ್ಲಾಸದಿಂದ ಇರುವಿರಿ.

ವೃಷಭ
ಹೆಚ್ಚು ಕೆಲಸ ಇದ್ದರೂ ಅದನ್ನು ವೇಗವಾಗಿ
ಮಾಡಿ ಮುಗಿಸಲಿದ್ದೀರಿ. ನಿಮ್ಮ ಸಂತೋಷ
ಮತ್ತೊಬ್ಬರಿಗೆ ಉತ್ಸಾಹ ತುಂಬಲಿದೆ.

ಮಿಥುನ
ಕಾಲೆಳೆಯುವ ಮಂದಿ ಎಲ್ಲಾ ಕಡೆಯೂ
ಇರುತ್ತಾರೆ. ಅವರ ಬಗ್ಗೆ ಚಿಂತೆ ಮಾಡದೇ
ಮುಂದೆ ಸಾಗಿದರೆ ಯಶಸ್ಸು ಖಂಡಿತ.

ಕಟಕ
ನಿಮ್ಮ ಮೇಲಿನ ಸುಳ್ಳು ಆರೋಪಗಳಿಗೆ
ವಿರೋಧ ವ್ಯಕ್ತಪಡಿಸಲಿದ್ದೀರಿ. ಗಾಳಿ ಮಾತಿಗೆ
ಕಿವಿಕೊಡುವುದು ಬೇಡ. ಸ್ನೇಹಿತರಿಂದ ಕಿರಿಕಿರಿ.

ಸಿಂಹ
ಬೇಡದ ಮಾತುಗಳಿಗೆ ಕಡಿವಾಣ ಹಾಕಿ.
ಸಾಧ್ಯವಾದರೆ ಮತ್ತೊಬ್ಬರಿಗೆ ಸಂತೋಷ
ಹಂಚಿ. ನೋವು ನೀಡುವುದು ಬೇಡ.

ಕನ್ಯಾ
ನಿಮ್ಮ ಆಸಕ್ತಿಗೆ ತಕ್ಕಂತ ಉದ್ಯೋಗ ಇಂದು
ನಿಮ್ಮನ್ನು ಹರಸಿ ಬರಲಿದೆ. ಇತರರ ಪ್ರತಿಭಟನೆ
ಯಿಂದ ನಿಮಗೆ ತೊಂದರೆಯಾಗಲಿದೆ.

ತುಲಾ 
ದಡ್ಡನಿಗೆ ದೊಣ್ಣೆಯ ಪೆಟ್ಟು, ಜಾಣನಿಗೆ
ಮಾತಿನ ಪೆಟ್ಟು. ಸೂಕ್ಷ್ಮಗಳನ್ನು ಅರ್ಥಮಾಡಿ
ಕೊಂಡು ಮುನ್ನಡೆಯಿರಿ. ಲಾಭ ಹೆಚ್ಚಲಿದೆ.

ವೃಶ್ಚಿಕ
ಖರ್ಚು ಕಡಿಮೆಯಾಗಲಿದೆ. ಅದೇ ವೇಳೆ
ಆದಾಯವೂ ಹೆಚ್ಚಾಗಲಿದೆ. ನಿಮ್ಮ ಪಾಲಿನ
ಕಾರ್ಯಗಳನ್ನು ಮೊದಲು ಪೂರ್ಣಗೊಳಿಸಿ. 

ಧನುಸ್ಸು
ನಿಮ್ಮ ಅಧಿಕಾರ ಬಳಸಿಕೊಂಡು ಹತ್ತಾರು
ಮಂದಿಗೆ ಒಳಿತು ಮಾಡಲಿದ್ದೀರಿ. ನಿಮ್ಮ
ಮಾನವೀಯತೆಯೇ ನಿಮ್ಮ ಸೌಂದರ್ಯ.

ಮಕರ
ಇನ್ನೊಬ್ಬರ ಮೆಚ್ಚುಗೆಗಾಗಿ ನಿಮ್ಮತನವನ್ನು
ಬಲಿಗೊಡದಿರಿ. ಸಾಧಾರಣ ವ್ಯಾಪಾರ
ವಾಗಲಿದೆ. ದೂರದೂರಿಗೆ ಪ್ರವಾಸ ಸಾಧ್ಯತೆ.

ಕುಂಭ
ಅಂದುಕೊಂಡ ಕಾರ್ಯಗಳನ್ನು ಇಂದೇ
ಮಾಡಿ ಮುಗಿಸಿ. ಸರಿಯಾದ ಸಮಯಕ್ಕೆ
ಸ್ನೇಹಿತನಿಗೆ ನೆರವಾಗಿ ನಿಲ್ಲಲಿದ್ದೀರಿ.

ಮೀನ 
ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ. ವಿನಾ
ಕಾರಣ ದುಂದು ವೆಚ್ಚ ಬೇಡ. ಸಂಗೀತದಲ್ಲಿ
ಆಸಕ್ತಿ ಹೆಚ್ಚಾಗಲಿದೆ. ನೆಮ್ಮದಿ ಹೆಚ್ಚಲಿದೆ.