ಈ ರಾಶೀಗೆ ಒಳ್ಳೆ ದಾರಿಯೊಂದು ಸಿಗಲಿದೆ : ಉಳಿದ ರಾಶೀ ಹೇಗಿದೆ?

ಮೇಷ
ಮೂರು ಮೂರು ಬಾರಿ ಯೋಚನೆ ಮಾಡಿ
ಸರಿಯಾದ ನಿರ್ಧಾರಕ್ಕೆ ಬನ್ನಿ. ಹಳೆಯ
ಉಳಿತಾಯ ಇಂದು ನಿಮಗೆ ನೆರವಾಗಲಿದೆ.

ವೃಷಭ
ಒಳ್ಳೆಯ ಕೆಲಸ ಮಾಡಲು ನಿಮಗೆ ಹೆಚ್ಚಿನ
ಅವಕಾಶಗಳು ಇಂದು ದೊರೆಯಲಿವೆ.
ಅಧಿಕಾರಸ್ಥರೊಂದಿಗೆ ಬೆರೆಯಲಿದ್ದೀರಿ.

ಮಿಥುನ
ಸಮಾಧಾನದಿಂದ ಪರಿಸ್ಥಿತಿಯನ್ನು ನಿಭಾ
ಯಿಸಿ. ಕಣ್ಣಿನ ಸಮಸ್ಯೆಗೆ ಪರಿಹಾರ ದೊರೆಯ
ಲಿದೆ. ಒಳ್ಳೆಯ ಮಾರ್ಗದರ್ಶನ ಸಿಗಲಿದೆ.

ಕಟಕ
ಅಸಹಾಯಕರಿಗೆ ನೆರವು ನೀಡಲು ಮುಂದಾ
ಗುವಿರಿ. ಹಿಡಿದ ಕೆಲಸಗಳು ಪೂರ್ಣ
ಗೊಳ್ಳಲಿವೆ. ಕಾಸಿಗೆ ತಕ್ಕ ಕಜ್ಜಾಯ ಸಿಗಲಿದೆ.

ಸಿಂಹ
ಮಿತವ್ಯಯಕ್ಕೆ ಹೆಚ್ಚು ಆದ್ಯತೆ ನೀಡಲಿದ್ದೀರಿ.
ಸೋಮಾರಿತನ ಇಲ್ಲವಾಗಲಿದೆ. ಧೈರ್ಯ
ದಿಂದ ಮುಂದೆ ಸಾಗಿದರೆ ಜಯ ಸಿಗಲಿದೆ.

ಕನ್ಯಾ
ಆರೋಗ್ಯದಲ್ಲಿ ಸಣ್ಣ ಮಟ್ಟದ ಏರು ಪೇರು
ಕಂಡುಬಂದರೂ ಸಂಜೆ ವೇಳೆಗೆ ಎಲ್ಲವೂ
ಸರಿಯಾಗಲಿದೆ. ಅನಾಮಧೇಯರಿಂದ ನೆರವು.

ತುಲಾ 
ಮತ್ತೊಬ್ಬರ ಕೈಗೊಂಬೆಯಾಗದಿರಿ. ನಿಮ್ಮ
ಸ್ವಂತ ಆಲೋಚನೆಗಳೇ ನಿಮ್ಮನ್ನು ಮುಂದೆ
ತರುವುದು. ಹಣಕಾಸಿನ ತೊಂದರೆ ಇದೆ.

ವೃಶ್ಚಿಕ
ಸಿಕ್ಕ ಅವಕಾಶವನ್ನು ಸರಿಯಾಗಿ ಬಳಕೆ
ಮಾಡಿಕೊಂಡು ಮುಂದೆ ಸಾಗುತ್ತಿರಿ. ಬೇಡದ
ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ. 

ಧನುಸ್ಸು
ಬೇಡದ ವಿಚಾರಗಳಲ್ಲಿಯೇ ಇಡೀ ದಿನ ಕಾಲ
ಹರಣ ಮಾಡಲಿದ್ದೀರಿ. ಉದ್ಯೋಗದಲ್ಲಿ
ಬದಲಾವಣೆ ಸಾಧ್ಯತೆ. ಲಾಭ ಹೆಚ್ಚಾಗಲಿದೆ.

ಮಕರ
ಆಕಾಶವೇ ತಲೆಯ ಮೇಲೆ ಬಿದ್ದಿದೆ ಎಂದು
ಕೂರುವುದು ಬೇಡ. ಉತ್ಸಾಹದಿಂದ ಮೇಲೆ
ದ್ದರೆ ಎಂತಹ ಸಮಸ್ಯೆಗೂ ಪರಿಹಾರವಿದೆ.

ಕುಂಭ
ಮಾಡದ ತಪ್ಪಿಗೆ ನಿಮ್ಮ ಮೇಲೆ ಆರೋಪ
ಬರುವ ಸಾಧ್ಯತೆ ಇದೆ. ನಿಮ್ಮ ಪಾಲಿನ
ಕಾರ್ಯವನ್ನು ಮಾಡಿ ಮುಗಿಸಿಕೊಳ್ಳಿ.

ಮೀನ 
ಕೆಲಸ ಮಾಡುವ ಕಚೇರಿಯಲ್ಲಿ ಉಲ್ಲಾಸದ
ವಾತಾವರಣ ಇರಲಿದೆ. ಮತ್ತೊಬ್ಬರ
ಸಹಕಾರಕ್ಕೆ ನೀವು ನಿಲ್ಲಲಿದ್ದೀರಿ. ಶುಭ ಫಲ