ಉತ್ತಮ ಅವಕಾಶಗಳು ಈ ರಾಶಿಗಿಂದು ಒದಗಲಿವೆ

ಮೇಷ
ಉತ್ತಮ ಅವಕಾಶಗಳು ನಿಮ್ಮನ್ನು
ಹುಡುಕಿಕೊಂಡು ಬರಲಿದೆ. ಬಾಧೆಗಳು
ಎದುರಾದರೂ ಅದನ್ನು ನಿವಾರಿಸಲಿದ್ದೀರಿ.

ವೃಷಭ
ಶಾಂತ ಮನಸ್ಸಿನಿಂದ ಸಕಲ ಕಾರ್ಯಗಳಲ್ಲೂ
ಯಶಸ್ಸು ಕಾಣುವಿರಿ. ದಿನದಂತ್ಯದಲ್ಲಿ
ತಲೆನೋವಿನ ವಿಚಾರಗಳು ಎದುರಾಗಲಿದೆ.

ಮಿಥುನ
ಎಂದೋ ನಡೆದ ಘಟನೆಯನ್ನು ಮತ್ತೆ
ನೆನಪಿಸಿಕೊಳ್ಳದಿರಿ. ದೂರಾದವರು
ಹತ್ತಿರವಾಗಲಿದ್ದಾರೆ. ಶುಭ ದಿನ.

ಕಟಕ
ಓದಿನ ವಿಚಾರದಲ್ಲಿ ದುಡುಕು ನಿರ್ಧಾರದಿಂದ
ಎಚ್ಚರ. ಹಿರಿಯರಲ್ಲಿ ಗೌರವ ಹೆಚ್ಚಲಿದೆ.
ಆರೋಗ್ಯದಲ್ಲಿ ಕೊಂಚ ಏರುಪೇರು.

ಸಿಂಹ
ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಇದರಿಂದ
ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳಿಗೆ
ಓದಿನಲ್ಲಿ ಆಸಕ್ತಿ ಹೆಚ್ಚಲಿದೆ. ಮೌನ ಸಿದ್ಧಿ.

ಕನ್ಯಾ
ಮನುಷ್ಯ ರೂಪದ ವಿಷಜಂತುಗಳಿಂದ ದೂರ
ಇರುವುದು ನಿಮ್ಮ ಬದುಕಿಗೆ ಉತ್ತಮ.
ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಲಾಭ.

ತುಲಾ 
ಸ್ನೇಹಿತರಿಂದ ಸಂತಸ. ದೂರ ಪ್ರಯಾಣ
ಸಾಧ್ಯ. ದಿನದಂತ್ಯದಲ್ಲಿ ಶುಭ ಸುದ್ದಿ. ಶುಭ
ದಿನ. ಮಾತಿನಲ್ಲಿ ಎಚ್ಚರಿಕೆ ಇರಲಿ.

ವೃಶ್ಚಿಕ
ಮುಗ್ದರಾಗಿದ್ದರೆ ನಿಮ್ಮನ್ನು ದುರಪಯೋಗ
ಪಡಿಸಿಕೊಳ್ಳಬಹುದು. ಕಟುವಾದ ಮಾತು
ನೋವು ತರುವ ಸಾಧ್ಯತೆ.

 ಧನುಸ್ಸು
ಎಷ್ಟೋ ದಿನದ ನಿಮ್ಮ ಶ್ರಮ ಫಲಿಸಲಿದೆ.
ಮಹಿಳೆಯರಿಗೆ ಕಂಕಣ ಭಾಗ್ಯ. ಕಟ್ಟಡ
ಕಾರ್ಮಿಕರಿಗೆ ಲಾಭ. ಆರೋಗ್ಯ ವೃದ್ಧಿ

ಮಕರ
ಯಾರಿಗೂ ಎದುರು ಮಾತನಾಡದಿರುವುದು
ಉತ್ತಮ. ಕೆಲಸದ ವಿಚಾರದಲ್ಲಿ ಕಿರಿ-ಕಿರಿ
ಯಾದರೂ ದುಡುಕದೆ ಬಗೆಹರಿಸುವಿರಿ.

ಕುಂಭ
ದುಶ್ಚಟಗಳಿಂದ ನಿಮಗೂ ಹಾಗೂ ನಿಮ್ಮವರಿ
ಗೂ ಮಾರಕವಾಗಬಹುದು. ಅದರಿಂದ ದೂರ
ಇರುವುದು ಒಳಿತು. ವ್ಯಾಪಾರಿಗಳಿಗೆ ಲಾಭ.

ಮೀನ 
ಯಾರದೋ ತಪ್ಪಿನಿಂದ ನಿಮಗೆ ಶಿಕ್ಷೆಗಳು
ಎದುರಾಗಬಹುದು. ಸಮಸ್ಯೆ ಎದುರಾದರೂ
ಧೈರ್ಯದಿಂದ ಎದುರಿಸಲಿದ್ದೀರಿ.