ಈ  ರಾಶಿಗೆ ಈ ದಿನ ವಿಶೇಷವಾಗಿರಲಿದೆ

ಮೇಷ
ಸುಳ್ಳು ಹೇಳುವ ಮಂದಿಯಿಂದ ಅಂತರ
ಕಾಯ್ದುಕೊಳ್ಳಿ. ಇದರಿಂದ ಮುಂದೆ ನಿಮಗೇ
ಒಳ್ಳೆಯದಾಗಲಿದೆ. ಅತಿಯಾದ ಖರ್ಚು ಬೇಡ.

ವೃಷಭ
ಹತ್ತಿರದ ಸಂಬಂಧಿಗಳ ಜೊತೆಗೆ ಹಣಕಾಸಿನ
ವ್ಯವಹಾರ ಇಟ್ಟುಕೊಳ್ಳುವುದು ಸೂಕ್ತವಲ್ಲ.
ಇಡೀ ದಿನ ನಿಮ್ಮ ಪಾಲಿಗೆ ವಿಶೇಷವಾಗಿರಲಿದೆ.

ಮಿಥುನ
ಸ್ನೇಹಿತರಿಂದ ನಿಮ್ಮ ಪಾಲಿನ ಕೆಲಸದ ಹೊರೆ
ತುಸು ಕಡಿಮೆಯಾಗಲಿದೆ. ಮನಶಾಂತಿಗಾಗಿ
ಪ್ರಕೃತಿಯ ಮೊರೆ ಹೋಗಲಿದ್ದೀರಿ.

ಕಟಕ
ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಕಂಡು ಬರಲಿದೆ.
ನಿಮ್ಮ ನೋವನ್ನೇ ಹೇಳಿಕೊಂಡು ಇತರರಿಗೆ
ಕಿರಿಕಿರಿ ಉಂಟು ಮಾಡಬೇಡಿ. ಶುಭ ದಿನ.

ಸಿಂಹ
ಸಾಧ್ಯವಾದರೆ ಸಂತೋಷವನ್ನು ಹಂಚಿ.
ಇಲ್ಲದೇ ಇದ್ದರೆ ಸುಮ್ಮನೆ ಇದ್ದು ಬಿಡಿ. ಚಾಡಿ
ಮಾತುಗಳಿಗೆ ಕಿವಿಗೊಡುವುದು ಬೇಡ. 

ಕನ್ಯಾ
ಚಿಂತೆ ಹೆಚ್ಚಾಗಲಿದೆ. ರಾತ್ರಿ ವೇಳೆಗೆ ಬಂಧು
ಗಳಿಂದ ಸಹಕಾರ ದೊರೆಯಲಿದೆ. ಅತಿಯಾದ
ಆತ್ಮವಿಶ್ವಾಸ ಒಳ್ಳೆಯದ್ದಲ್ಲ. ನಿರೀಕ್ಷೆ ಬೇಡ.

ತುಲಾ 
ದೊಡ್ಡ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.
ವಿನಾಕಾರಣ ಅಪವಾದ ನಿಮ್ಮ ತಲೆಯ ಮೇಲೆ
ಬರುವ ಸಾಧ್ಯತೆ ಇದೆ. ದೂರದ ಪ್ರಯಾಣ.

ವೃಶ್ಚಿಕ
ಮತ್ಯಾರಿಂದಲೋ ಸಹಾಯವಾಗುತ್ತದೆ
ಎಂದು ಕಾಯುತ್ತಾ ಕುಳಿತುಕೊಳ್ಳುವುದು
ಬೇಡ. ನಿಮ್ಮ ಪ್ರಯತ್ನವನ್ನು ನೀವು ಮಾಡಿ. 

ಧನುಸ್ಸು
ಮನೆಯಲ್ಲಿನ ತೊಂದರೆಗಳಿಗೆ ನೀವೇ
ಕಾರಣವಾಗಲಿದ್ದೀರಿ. ಸಂಜೆ ವೇಳೆಗೆ ಎಲ್ಲವೂ
ತಿಳಿಯಾಗಲಿದೆ. ಹೆದರದೇ ಮುಂದೆ ಸಾಗಿ.

ಮಕರ
ಪೋಷಕರ ಸಂತೋಷಕ್ಕೆ ನೀವು ಕಾರಣ
ವಾಗಲಿದ್ದೀರಿ. ಕಷ್ಟ ಎಲ್ಲರಿಗೂ ಇದ್ದದ್ದೇ. ಚಿಂತೆ
ಮಾಡದೇ, ಆತುರ ಬೀಳದೇ ಮುಂದೆ ಸಾಗಿ.

ಕುಂಭ
ಮಾಡಿದ ಸಹಾಯಕ್ಕೆ ಕೃತಜ್ಞರಾಗಿ ನಡೆದು
ಕೊಳ್ಳಲಿದ್ದೀರಿ. ರಾಜಕಾರಣದಿಂದ ಅಂತರ.
ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಿ.

ಮೀನ
ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದು
ಬೇಡ. ಅಂದುಕೊಂಡದ್ದೆಲ್ಲವೂ ನಿಮಗೆ
ಸಿಕ್ಕುವುದಿಲ್ಲ. ಆರೋಗ್ಯ ವೃದ್ಧಿಯಾಗಲಿದೆ.