Asianet Suvarna News Asianet Suvarna News

ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆಯಾಗಲಿದೆ

ಅಕ್ಟೋಬರ್ 17, ಗುರುವಾರ ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ?

Daily Bhavishya 17 October 2019
Author
Bengaluru, First Published Oct 17, 2019, 7:01 AM IST

ಮೇಷ: ಪ್ರೀತಿಸುವವರ ಸಂಖ್ಯೆಗಿಂತ ದ್ವೇಷಿಸುವವರ ಸಂಖ್ಯೆ ಹೆಚ್ಚಾಗಲಿದೆ. ಧೈರ್ಯದಿಂದ ಮುಂದೆ ಸಾಗಿದರೆ ಯಶಸ್ಸು. ನೆಮ್ಮದಿ ಹೆಚ್ಚಾಗಲಿದೆ.

ವೃಷಭ: ಮಾತನಾಡುವಾಗ ಎಚ್ಚರ ಇರಲಿ. ಸ್ವಲ್ಪ ತಪ್ಪಾದರೂ ದೊಡ್ಡ ಮಟ್ಟದ ತೊಂದರೆಗೆ ಸಿಲುಕುವ ಅಪಾಯ ಇರುತ್ತದೆ. ಶುಭಫಲ. 

ಮಿಥುನ: ಹೊಸ ಕೆಲಸಗಳಿಗೆ ಮುಂದಾಗಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮಗೆ ಸರಿ ಎನ್ನಿಸಿದ ದಾರಿಯಲ್ಲಿ ಸಾಗಿ.

ಕಟಕ: ಅಪರಿಚಿತರ ಸಹಾಯದಿಂದ ಅಪಾಯದಿಂದ ಪಾರಾಗಲಿದ್ದೀರಿ. ಹೊಸ ಸ್ಥಳಕ್ಕೆ ಭೇಟಿ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

ಸಿಂಹ: ಸುಳ್ಳನ್ನು ಹೇಳುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಆದಾಯದಲ್ಲಿ ಏರಿಕೆ, ಖರ್ಚಿನಲ್ಲಿಯೂ ಏರಿಕೆ ಕಂಡುಬರಲಿದೆ.

ಕನ್ಯಾ: ಯಾರೋ ಮಾಡಿದ ಕಾರ್ಯಕ್ಕೆ ನೀವು ನಿಮ್ಮ ಹೆಸರು ಹೇಳಿಕೊಳ್ಳುವುದು ಬೇಡ. ಸಾಧ್ಯವಾದರೆ ಒಳಿತು ಮಾಡಿ, ಇಲ್ಲ ಸುಮ್ಮನೆ ಇರಿ.

ತುಲಾ: ಆತ್ಮ ವಿಶ್ವಾಸವನ್ನು ಕುಗ್ಗಿಸಿಕೊಳ್ಳದೇ ಮುಂದೆ ಸಾಗಿ. ಎಲ್ಲರಿಗೂ ನೀವು ಸರಿಯಾಗಿ ಇರಬೇಕು ಎಂದೇನೂ ಇಲ್ಲ. ನಿಮಗೆ ನೀವು ಸರಿಯಾಗಿರಿ.

ವೃಶ್ಚಿಕ: ಕೆಟ್ಟ ವಿಚಾರಗಳು ಬೇಗನೇ ಹಬ್ಬುತ್ತವೆ. ಇವುಗಳ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯ ಪ್ರತಿಫಲ ಸಿಕ್ಕುತ್ತದೆ.

ಧನಸ್ಸು: ನಿಮ್ಮ ಆಸಕ್ತಿಯ ವಿಚಾರಗಳ ಕುರಿತು ಇಂದು ಹೆಚ್ಚು ಸಮಯವನ್ನು ವ್ಯಯ ಮಾಡಲಿದ್ದೀರಿ. ಬಂಧುಗಳೊಂದಿಗೆ ವ್ಯವಹಾರ ಮಾಡದಿರಿ.

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ

ಮಕರ: ಆದಾಯದಲ್ಲಿ ಏರಿಕೆಯಾಗಲಿದೆ. ಸುಳ್ಳು ಸುದ್ದಿಗಳಿಗೆ ಮರುಳಾಗದಿರಿ. ಯಾರದೋ ಮಾತಿಗೆ ನಿಮ್ಮ ಉತ್ಸಾಹ ಕುಗ್ಗದಿರಲಿ.

ಕುಂಭ: ಕೆಲಸದಲ್ಲಿ ಬದಲಾವಣೆಯ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ. ಧೈರ್ಯವಾಗಿ ಮುಂದೆ ಸಾಗಿದರೆ ಒಳಿತಾಗುವುದು.

ಮೀನ: ನಿಮ್ಮ ತಪ್ಪುಗಳನ್ನು ನೀವೇ ಗುರುತು ಮಾಡಿಕೊಂಡು ಅವುಗಳನ್ನು ಸರಿ ಮಾಡಿಕೊಳ್ಳಲು ಪ್ರಯತ್ನ ಮಾಡಲಿದ್ದೀರಿ.

Follow Us:
Download App:
  • android
  • ios