ತುಲಾ ರಾಶಿಗೆ ಚಿನ್ನಾಭರಣಗಳು ಸಿಗಲಿವೆ : ಉಳಿದ ರಾಶಿ?

ಮೇಷ
ಕಳೆದುಕೊಂಡ ವಸ್ತುವನ್ನು ಕಳೆದುಕೊಂಡ
ಜಾಗದಲ್ಲಿಯೇ ಹುಡುಕಬೇಕು. ಮತ್ತೆಲ್ಲೋ
ಹುಡುಕಿದರೆ ಪ್ರಯೋಜನವಿಲ್ಲ. ಶುಭಫಲ.

ವೃಷಭ
ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು
ಮುಂದೆ ಸಾಗಿ. ಸಿಗದ ವಸ್ತುವಿನ ಬಗ್ಗೆ
ಚಿಂತಿಸುತ್ತಾ ಕೂತರೆ ಫಲ ಸಿಕ್ಕುವುದಿಲ್ಲ.

ಮಿಥುನ
ಅಧಿಕಾರಸ್ಥರ ಸಹಕಾರದಿಂದ ಅನುಕೂಲ
ಮಾಡಿಕೊಳ್ಳಲಿದ್ದೀರಿ. ಹಳೆ ಸಾಲಗಳು ವಾಪಸ್
ಆಗುವ ಸಾಧ್ಯತೆ ಇದೆ. ಮೌನದಿಂದ ಇರುವಿರಿ.

ಕಟಕ
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ
ನಿಮ್ಮ ಪರಿಸ್ಥಿತಿ ಆಗಲಿದೆ. ಒಲ್ಲದ ಗಂಡನಿಗೆ
ಮೊಸರಲ್ಲೂ ಕಲ್ಲು. ಚಿಂತೆಗಳ ನಿವಾರಣೆ.

ಸಿಂಹ
ಅಂತೆ ಕಂತೆಗಳ ಬಗ್ಗೆ ಗಮನ ನೀಡಬೇಡಿ.
ನಿಮ್ಮ ಪಾಲಿಗೆ ಸಿಕ್ಕಷ್ಟು ಮಾತ್ರವೇ ನಿಮ್ಮದು.
ಮತ್ತೊಬ್ಬರ ಬಗ್ಗೆ ಕೀಳಾಗಿ ಮಾತನಾಡದಿರಿ

ಕನ್ಯಾ
ನಿಮ್ಮ ದಾರಿ ನೀವೇ ನಡೆದು ಗುರಿ ಸೇರಬೇಕು.
ಮತ್ತೊಬ್ಬರ ಸಹಾಯದ ನಿರೀಕ್ಷೆ ಇಟ್ಟು ಕೊಳ್ಳ
ಬೇಡಿ. ಪಾಲಿಗೆ ಬಂದದ್ದು ಪಂಚಾಮೃತ.

ತುಲಾ 
ಅತಿಯಾದ ಕೋಪ ಒಳ್ಳೆಯದಲ್ಲ. ಚಿನ್ನಾ
ಭರಣ ಕೊಳ್ಳುವ ಸಾಧ್ಯತೆ ಇದೆ. ಎಲ್ಲರನ್ನೂ
ಪ್ರೀತಿಯಿಂದ ಕಾಣುವಿರಿ. ಶುಭಫಲ.

ವೃಶ್ಚಿಕ
ಹಣದಿಂದಲೇ ಎಲ್ಲಾ ಕಾರ್ಯಗಳೂ
ಆಗುವುದಿಲ್ಲ ಎನ್ನುವ ಸತ್ಯ ಇಂದು ನಿಮ್ಮ
ಅರಿವಿಗೆ ಬರಲಿದೆ. ಬದ್ಧತೆ ಹೆಚ್ಚಾಗಲಿದೆ. 

ಧನುಸ್ಸು
ಅತಿಯಾದ ಆಸೆ ಅತಿಯಾದ ನೋವಿಗೆ
ಕಾರಣವಾಗುತ್ತದೆ. ಯಾವುದರ ಮೇಲೂ
ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ.

ಮಕರ
ನಿಮ್ಮ ಕಾರಣದಿಂದಾಗಿ ದೊಡ್ಡ ಅನಾಹುತ
ತಪ್ಪಲಿದೆ. ಹಣಕಾಸಿನ ವಿಚಾರದಲ್ಲಿ ಸಣ್ಣ
ವ್ಯತ್ಯಯ ಉಂಟಾಗಲಿದೆ. ಧೈರ್ಯ ಇರಲಿ.

ಕುಂಭ
ಮತ್ತೊಬ್ಬರ ವೈಯಕ್ತಿಕ ವಿಚಾರಗಳಲ್ಲಿ ತಲೆ
ಹಾಕುವುದು ಬೇಡ. ಬೆಂಕಿಯಿಂದ ಅಂತರ
ಕಾಯ್ದುಕೊಳ್ಳಿ. ಪ್ರೀತಿ ಹಂಚಲಿದ್ದೀರಿ.

ಮೀನ 
ನಿಮಗೇ ಎಲ್ಲವೂ ತಿಳಿದಿದೆ ಎಂದು ವರ್ತಿಸು
ವುದು ಬೇಡ. ಅಧಿಕ ಪ್ರಸಂಗಿಗಳ ದೆಸೆಯಿಂದ
ಮನಸ್ಸಿಗೆ ಕಿರಿಕಿರಿ. ಆದಾಯ ಹೆಚ್ಚಾಗಲಿದೆ.