ಈ ರಾಶಿಗೆ ಅತ್ಯಂತ ಶುಭದಾಯಕ : ನೀವೊಂದು ವರವಾಗಲಿದ್ದೀರಿ


ಮೇಷ
ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.
ಬಂಧುಗಳ ಪಾಲಿಗೆ ಸಹಾಯ ನೀಡುವ
ವರವಾಗಿ ಪರಿಣಮಿಸಲಿದ್ದೀರಿ. ಶುಭ ಫಲ.

ವೃಷಭ
ನಿಮ್ಮ ಸುತ್ತಲೂ ಇರುವ ಸುಂದರ ವಾತಾ
ವರಣವನ್ನು ಕಂಡು ಸಂತೋಷ ಪಡುವಿರಿ.
ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳಿತು.

ಮಿಥುನ
ನಿಮ್ಮಿಂದ ಆದ ತಪ್ಪಿಗೆ ಮತ್ತೊಬ್ಬರು ಶಿಕ್ಷೆ
ಅನುಭವಿಸಬೇಕಾಗುತ್ತದೆ. ಎಚ್ಚರಿಕೆಯಿಂದ
ಹೆಜ್ಜೆ ಇಡಿ. ಆತುರ ಬೀಳದೆ ಮುಂದೆ ಸಾಗಿ.

ಕಟಕ
ಮತ್ತೊಬ್ಬರನ್ನು ತೆಗಳಿ ನೀವು ಸಾಧಿಸುವುದು
ಏನೂ ಇಲ್ಲ. ಮಾಡುವ ಕೆಲಸದಲ್ಲಿ ಬದ್ಧತೆ
ಮತ್ತು ಪ್ರಾಮಾಣಿಕತೆ ಇರಲಿ. ನೆಮ್ಮದಿ ಇದೆ.

ಸಿಂಹ
ನಿಮ್ಮ ಅತಿಯಾದ ಆಸೆಯಿಂದ ಪ್ರೀತಿಪಾತ್ರ
ರಿಗೆ ನೋವಾಗಲಿದೆ. ಕೆಲಸದಲ್ಲಿ ಶ್ರದ್ಧೆ
ಹೆಚ್ಚಾಗಲಿದೆ. ಅಂಧಾಭಿಮಾನ ಬೇಡ.

ಕನ್ಯಾ
ಬೇಡದ ವಿಚಾರಕ್ಕೆ ತಲೆ ಹಾಕಿ ಮನಸ್ಸು
ಕೆಡಿಸಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಕೊಂಚ
ಏರುಪೇರು. ನಿಧಾನವೇ ಪ್ರಧಾನ.

ತುಲಾ 
ಅಂದುಕೊಂಡ ಕಾರ್ಯವನ್ನು ಸಾಧ್ಯವಾದಷ್ಟು
ಬೇಗ ಮಾಡಿ ಮುಗಿಸಲಿದ್ದೀರಿ. ನಾಳಿನ ಚಿಂತೆ
ಬೇಡ. ಯಾರಿಗೂ ನೋವು ನೀಡದಿರಿ.

ವೃಶ್ಚಿಕ
ನಿಮ್ಮ ಸ್ವಂತ ಬಲದಿಂದ ಹಿಡಿದ ಕೆಲಸವನ್ನು
ಮಾಡಿ ಮುಗಿಸಲಿದ್ದೀರಿ. ಧಾರ್ಮಿಕ ಕ್ಷೇತ್ರಗಳ
ಭೇಟಿ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಚೇತರಿಕೆ. 

ಧನುಸ್ಸು
ಹೊಸ ವಿಚಾರಗಳನ್ನು ತಿಳಿದುಕೊಳ್ಳಲಿದ್ದೀರಿ.
ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ.
ಹೆಚ್ಚು ಸುತ್ತಾಟ ಮಾಡಬೇಕಾದೀತು.

ಮಕರ
ಸಹೋದ್ಯೋಗಿಯ ನೆರವಿನಿಂದ ನಿಮ್ಮ
ಸಮಸ್ಯೆಗಳು ಕಡಿಮೆಯಾಗಲಿವೆ. ಕೆಲಸದಲ್ಲಿ
ಪ್ರಗತಿ. ಹೊಸ ಜವಾಬ್ದಾರಿ ಹೆಗಲೇರಲಿದೆ.

ಕುಂಭ
ಮತ್ತೊಬ್ಬರು ಮಾಡಿದ ತಪ್ಪಿಗೆ ಇಂದು ನೀವು
ಶಿಕ್ಷೆ ಅನುಭವಿಸಲಿದ್ದೀರಿ. ಅತಿಯಾದ ಆಸೆ
ಬೇಡ. ಹಣದ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮೀನ
ಸ್ನೇಹದ ವಿಚಾರದಲ್ಲಿ ದುಡುಕುವುದು
ಮಾಡಬೇಡಿ. ಮುಂಗೋಪ ಒಳ್ಳೆಯದಲ್ಲ.
 ಆರ್ಥಿಕವಾಗಿ ಇಂದು ನಿಮಗೆ ಒಳ್ಳೆಯ ದಿನ.