ಈ ರಾಶಿಗೆ ದೊಡ್ಡ ಮೊತ್ತದ ವ್ಯವಹಾರ ಸಾಧ್ಯವಾಗಲಿದೆ

ಮೇಷ
ನಿಮ್ಮ ಕೆಟ್ಟ ಚಟಗಳಿಂದಲೇ ನೀವಿಂದು ಬುದ್ಧಿ
ಕಲಿಯಲಿದ್ದೀರಿ. ಹಿರಿಯರ, ಹಿತೈಷಿಗಳ
ಮಾರ್ಗದರ್ಶನದಲ್ಲಿ ಮುಂದೆ ಸಾಗಿ.

ವೃಷಭ
ಬಂಧ ಮುಕ್ತವಾಗಲು ನಾನಾ ಪ್ರಯತ್ನ
ಮಾಡುವಿರಿ. ಸ್ನೇಹ, ಪ್ರೀತಿಯ ವಿಚಾರದಲ್ಲಿ
ದುಡುಕುವುದು ಬೇಡ. ತಾಳ್ಮೆಯಿರಲಿ.

ಮಿಥುನ
ಒಂದೇ ಮನಸ್ಸಿನಿಂದ ಹಿಡಿದ ಕೆಲಸವನ್ನು
ಇಂದೇ ಮುಗಿಸಿಬಿಡಿ. ನಾಳೆ ಎಂದು
ಮುಂದೂಡುವುದು ಬೇಡ. ಛಲ ಹೆಚ್ಚಲಿದೆ.

ಕಟಕ
ಸತ್ ಚಿಂತನೆಗಳು ಹೆಚ್ಚಾಗಲಿವೆ. ದೊಡ್ಡ
ಮೊತ್ತದ ವ್ಯವಹಾರ ಇಂದು ಸಾಧ್ಯವಾಗಲಿದೆ.
ಮಕ್ಕಳ ಪಾಲಿಗೆ ಇದು ಶುಭ ದಿನ.

ಸಿಂಹ
ನಿಮ್ಮ ಆತ್ಮಾಭಿಮಾನವೇ ನಿಮ್ಮ ಶಕ್ತಿ. ಬೇರೆ
ಯವರ ಬಗ್ಗೆ ಚಿಂತೆ ಮಾಡುವುದು ಬೇಡ.
ಬೇಕರಿ ಉದ್ಯಮಿಗಳಿಗೆ ಒಳ್ಳೆಯ ಲಾಭ

ಕನ್ಯಾ
ಪ್ರತಿಭೆಗೆ ತಕ್ಕ ಕೆಲಸ ಸಿಗಲಿಲ್ಲವೆಂದು ಚಿಂತೆ
ಮಾಡುವುದು ಬೇಡ. ಸಿಕ್ಕ ಕೆಲಸದಲ್ಲಿಯೇ
ನಿಮ್ಮ ಪ್ರತಿಭೆ ತೋರಿಸಿ ಮುಂದೆ ಸಾಗಿ.

ತುಲಾ 
ಅತೃಪ್ತಿ ಎಲ್ಲರಿಗೂ ಇದ್ದದ್ದೇ. ನಿಮ್ಮ ಬಳಿ
ಇರುವ ಸಂಪನ್ಮೂಲಗಳನ್ನು ಸರಿಯಾಗಿ
ಬಳಸಿಕೊಂಡರೆ ಮಾತ್ರ ಗೆಲುವು ಸಾಧ್ಯ.

ವೃಶ್ಚಿಕ
ಏಕಾಂತ ಹೆಚ್ಚಾಗಲಿದೆ. ದೂರದ ಊರಿಗೆ
ಹೋಗಿ ಬರಬೇಕಾಗುತ್ತದೆ. ಸಿಕ್ಕ
ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ. 

ಧನುಸ್ಸು
ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ
ಊರೆಲ್ಲಾ ಸುತ್ತುವುದು ಬೇಡ. ಮನೆ
ಯಲ್ಲಿಯೇ ಹೆಚ್ಚು ಸಮಯ ಕಳೆಯುವಿರಿ.

ಮಕರ
ಸಂಬಂಧಗಳ ವಿಚಾರದಲ್ಲಿ ದುಡುಕುವುದು
ಬೇಡ. ಅಕ್ಕನಿಂದ ಆರ್ಥಿಕ ಸಹಕಾರ
ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ.

ಕುಂಭ
ಬೆಳಿಗ್ಗೆ ಬೆಳಿಗ್ಗೆಯೇ ಶುಭ ವಾರ್ತೆ
ಕೇಳಲಿದ್ದೀರಿ. ರಕ್ತದೊತ್ತಡ ಕಡಿಮೆಯಾಗಲಿದೆ.
ಹೆಂಡತಿಯೊಂದಿಗಿನ ಜಗಳಕ್ಕೆ ತೆರೆ ಬೀಳಲಿದೆ.

ಮೀನ 
ನಿತ್ಯದ ಕೆಲಸಗಳ ಜೊತೆಗೆ ಬೇರೆ ಕೆಲಸಗಳೂ
ನಿಮ್ಮ ಹೆಗಲೇರಲಿವೆ. ಮನೆಯಲ್ಲಿ ಗೊಂದಲ
ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ.