ಈ ರಾಶಿಗೆ ಅಧಿಕ ಲಾಭ : ಚಿನ್ನಾಭರಣ ಕೈ ಸೇರಲಿದೆ: ಉಳಿದ ರಾಶಿ? 

ಮೇಷ
ಸೋತ ಸ್ನೇಹಿತನಿಗೆ ಆಸರೆಯಾಗಿ ನಿಲ್ಲಲಿದ್ದೀರಿ.
ದುರಹಂಕಾರವೇ ನಿಮ್ಮ ಮೊದಲ ಶತ್ರು.
ಮಾತನಾಡುವಾಗ ಆಲೋಚನೆ ಮಾಡಿ.

ವೃಷಭ
ಕೆಲಸದ ನಿಮಿತ್ತ ಪರ ಊರಿಗೆ ಪ್ರಯಾಣ
ಮಾಡಲಿದ್ದೀರಿ. ನಿಮ್ಮ ಮಿತಿಯನ್ನು
ತಿಳಿದುಕೊಂಡು ಮುಂದಿನ ಹೆಜ್ಜೆ ಇಡಿ.

ಮಿಥುನ
ನಿಮ್ಮ ಬಗ್ಗೆ ತಾತ್ಸಾರ ಮಾಡುವವರ ಕುರಿತು
ಹೆಚ್ಚು ಚಿಂತೆ ಮಾಡುವುದು ಬೇಡ. ಎಲ್ಲವೂ
ಒಳ್ಳೆಯದ್ದೇ ಆಗಲಿದೆ. ಸುಲಭ ಜಯ.

ಕಟಕ
ಆತುರಕ್ಕೆ ಬಿದ್ದು ಸಣ್ಣ ಯಡವಟ್ಟು ಮಾಡಿ
ಕೊಳ್ಳುವ ಸಾಧ್ಯತೆ ಇದೆ. ಬೆವರು ಸುರಿಸಿ
ಸಂಪಾದಿಸಿದ ವಸ್ತು ನಿಮ್ಮ ಕೈ ಸೇರಲಿದೆ.

ಸಿಂಹ
ವ್ಯಕ್ತಿಯನ್ನು ಹಣಕ್ಕೆ ಬದಲಾಗಿ ಗುಣದಿಂದ
ಅಳೆಯಿರಿ. ಸೂಕ್ತವಾದ ನಿರ್ಧಾರಕ್ಕೆ ನೀವು
ಪ್ರತಿಫಲ ಪಡೆಯಲಿದ್ದೀರಿ. ಶುಭ ಫಲ.

ಕನ್ಯಾ
ಹಿಡಿದ ಎಲ್ಲಾ ಕೆಲಸದಲ್ಲಿಯೂ ಯಶಸ್ಸು
ಸಿಗಲೇಬೇಕು ಎನ್ನುವ ಆಸೆ ಬೇಡ. ಇಂದಿನ
ಸೋಲು ನಾಳೆಯ ಗೆಲುವಿಗೆ ಸಹಕಾರಿ.

ತುಲಾ 
ಕಷ್ಟವಾದರೂ ಸರಿಯೇ ಅನ್ಯಾಯದ ದಾರಿ
ಹಿಡಿಯದಿರಿ. ನೆಮ್ಮದಿ ಇರುವುದು ನಿಮ್ಮ
ಆಂತರ್ಯದಲ್ಲಿಯೇ ಹೊರತು ಹೊರಗಲ್ಲ.

ವೃಶ್ಚಿಕ
ಚಿನ್ನಾಭರಣ ಕೊಳ್ಳುವ ಸಾಧ್ಯತೆ ಇದೆ. ಕಡಿಮೆ
ಖರ್ಚಿನಲ್ಲಿ ಅಧಿಕ ಲಾಭ ಪಡೆಯಲಿದ್ದೀರಿ.
ಮಾತಿಗೆ ಮರುಳಾಗಿ ಮೋಸ ಹೋಗದಿರಿ. 

ಧನುಸ್ಸು
ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುವಾಗ
ನಿಧಾನ ಮಾಡುವುದು ಬೇಡ. ವಾಹನ
ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ.

ಮಕರ
ಕೇವಲ ಭರವಸೆಗಳನ್ನು ನೀಡುತ್ತಾ ಇದ್ದರೆ
ಪ್ರಯೋಜನವಿಲ್ಲ. ಇಟ್ಟ ಹೆಜ್ಜೆಯನ್ನು ಹಿಂದೆ
ಇಡದೇ ಮುಂದೆ ಸಾಗಿ. ನೋವು ಸಹಜ.

ಕುಂಭ
ಗೆಲುವನ್ನು ಸಂಭ್ರಮಿಸುವ ಹಾಗೆ ಸೋಲನ್ನೂ
ತಡೆದುಕೊಳ್ಳುವ ಶಕ್ತಿ ಇರಲಿ. ಅಮ್ಮನ
ಮಾತಿನಿಂದ ಆತ್ಮ ಸ್ಥೈರ್ಯ ಹೆಚ್ಚಾಗಲಿದೆ.

ಮೀನ 
ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಬಲ್ಲವರ ಮಾತಿಗೆ ಬೆಲೆ ನೀಡಿ. ಸರಕಾರಿ ಕೆಲಸ
ಕಾರ್ಯಗಳು ಪೂರ್ಣಗೊಳ್ಳಲಿವೆ. ಶುಭಫಲ.