ವೃಷಭ ರಾಶಿಯವರಿಗಿಂದು ಲಾಭ ಸಿಗುವುದು : ಇನ್ನುಳಿದವರಿಗೆ?

ಮೇಷ
ಸಂತಸದ ಕ್ಷಣಗಳು ಅಧಿಕವಾಗಲಿವೆ. ಇಡೀ
ಮನೆ ಮಂದಿ ಸಂತೋಷ ಪಡುವಂತಹ
ಕಾರ್ಯ ಮಾಡಲಿದ್ದೀರಿ. ಶ್ರೇಯಸ್ಸು ಹೆಚ್ಚಲಿದೆ.

ವೃಷಭ
ಉದ್ಯೋಗಂ ಪುರುಷ ಲಕ್ಷಣಂ. ಇಡೀ ದಿನ
ಮಾಡುವ ಕೆಲಸದಲ್ಲಿಯೇ ಮುಳುಗಲಿದ್ದೀರಿ.
ಸಣ್ಣ ವ್ಯಾಪಾರಿಗಳಿಗೆ ಲಾಭದಾಯಕ ದಿನ.

ಮಿಥುನ
ಪಾಲಿಗೆ ಬಂದದ್ದು ಪಂಚಾಮೃತ. ನೀವು
ಅಂದುಕೊಂಡಿದ್ದೆಲ್ಲವೂ ಆಗುವುದಿಲ್ಲ. ಸಂಜೆ
ವೇಳೆಗೆ ಒತ್ತಡಗಳು ಕಡಿಮೆಯಾಗಲಿವೆ.

ಕಟಕ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ
ಎನ್ನುವ ಹಾಗೆ ಆರಾಮವಾಗಿ ಇಡೀ ದಿನ
ಇರುವಿರಿ. ಮನಸ್ಸು ಹಿಡಿತದಲ್ಲಿ ಇರಲಿ.

ಸಿಂಹ
ಸ್ವಾರ್ಥಿಗಳ ನಡುವಲ್ಲಿ ಎಚ್ಚರಿಕೆಯಿಂದ ಇರಿ.
ಅನುಮಾನ ಒಳ್ಳೆಯದ್ದಲ್ಲ. ಮತ್ತೊಬ್ಬರ ಬಗ್ಗೆ
ಅಪಾರ್ಥ ಕಲ್ಪಿಸಿ ಮಾತನಾಡದಿರಿ.

ಕನ್ಯಾ
ನಿಮ್ಮ ಸದ್ಗುಣಗಳೇ ನಿಮಗೆ ವರವಾಗಿ
ಪರಿಣಮಿಸಲಿವೆ. ಬಂಧುಗಳು ದೂರಾಗುವ
ಸಾಧ್ಯತೆ. ಮಿತವ್ಯಯಕ್ಕೆ ಆದ್ಯತೆ ನೀಡಿ.

ತುಲಾ 
ಅಸಲಿ ಮತ್ತು ನಕಲಿಗಳ ಬಗ್ಗೆ ಎಚ್ಚರಿಕೆ ಇರಲಿ.
ನಿಮ್ಮದೇ ತಪ್ಪಿನಿಂದ ಮತ್ತೊಬ್ಬರಿಗೆ ತೊಂದರೆ
ಯಾಗುತ್ತದೆ. ನಿಮ್ಮ ಬುದ್ಧಿ ನಿಮ್ಮ ಕೈಲಿರಲಿ.

ವೃಶ್ಚಿಕ
ನಡೆಯುವ ದಾರಿಯಲ್ಲಿ ಕಲ್ಲು, ಮುಳ್ಳು
ಸಾಮಾನ್ಯ. ಅದಕ್ಕೆ ಹೆದರಿ ಹೆಜ್ಜೆ ಹಿಂದೆ ಇಡು
ವುದು ಬೇಡ. ಧೈರ್ಯದಿಂದ ಮುಂದೆ ಸಾಗಿ. 

ಧನುಸ್ಸು
ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯ ಎಂದು ನಂಬಿ
ಕೂರುವುದು ಬೇಡ. ಪರಿಶ್ರಮ ಪಟ್ಟರೆ ಮಾತ್ರ
ಇಂದು ಆದಾಯ. ಆಲಸ್ಯ ಹೆಚ್ಚಾಗಲಿದೆ.

ಮಕರ
ಅಪ್ರಯೋಜಕರ ಮುಂದೆ ನಿಂತು ವಾದ
ಮಾಡುವುದು ಸರಿಯಲ್ಲ. ತಲೆ ನೋವು
ನಿಮ್ಮನ್ನು ಇಡೀ ದಿನ ಕಾಡಲಿದೆ. ಶುಭ ಫಲ.

ಕುಂಭ
ಮತ್ತೊಬ್ಬರಿಗೆ ಹೇಳುವುದಕ್ಕಿಂತ ನೀವೇ ಕೆಲಸ
ಮಾಡಿದರೆ ಒಳ್ಳೆಯದ್ದು. ಕಾದು ಹೊಡೆದರೆ
ಒಳ್ಳೆಯ ಫಲ ಸಿಕ್ಕೀತು. ನೆಮ್ಮದಿ ಹೆಚ್ಚಲಿದೆ.

ಮೀನ 
ನಿಮ್ಮ ಕ್ರಿಯೆಗೆ ಟೀಕೆ ಬಂದರೂ ಕಡೆಗೆ ನೀವೇ
ಗೆಲ್ಲುವುದು. ಶಾಂತಿಯಿಂದ ವರ್ತಿಸಿ. ಅಧಿಕ
ಪ್ರಸಂಗಿಗಳ ಮುಂದೆ ವಾದ ಮಾಡಬೇಡಿ.