ಮೇಷ
ಟೀಕೆಗಳಿಗೆ ಉತ್ತರ ನೀಡುವುದರಲ್ಲಿಯೇ
ಇಡೀ ದಿನ ಕಳೆದುಹೋಗಲಿದೆ. ಕೆಲಸದ
ಹೊರೆ ಹೆಚ್ಚಾಗಲಿದೆ. ಲಾಭದ ನಿರೀಕ್ಷೆ ಇದೆ.

ವೃಷಭ
ಇಬ್ಬರ ನಡುವಿನ ಜಗಳದಲ್ಲಿ ಸಿಲುಕಿ ನೀವು
ಬಡಪಾಯಿಯಾಗುವಿರಿ. ನಿಮ್ಮ ತಾಳ್ಮೆಗೆ ಜಯ
ಸಿಗಲಿದೆ. ಸತ್ಯ ಮಾರ್ಗದಲ್ಲಿ ಮುಂದೆ ಸಾಗಿ.

ಮಿಥುನ
ಸುಲಭಕ್ಕೆ ದೊರೆಯುವ ವಸ್ತುಗಳ ಬಗ್ಗೆ ಆಸೆ
ಪಡುವುದು ಬೇಡ. ಕಠಿಣ ಶ್ರಮಕ್ಕೆ ತಕ್ಕ
ಪ್ರತಿಫಲ ಇದ್ದೇ ಇದೆ. ನೆಮ್ಮದಿ ಹೆಚ್ಚಲಿದೆ.

ಕಟಕ
ನಿಮ್ಮ ಮೇಲಿನ ಆರೋಪಗಳಿಗೆಲ್ಲಾ ತೆರೆ
ಬೀಳಲಿದೆ. ಪ್ರಬಲರೊಂದಿಗೆ ಸ್ಫರ್ಧೆ
ಮಾಡಬೇಕಾದ ಅನಿವಾರ್ಯತೆ ಇದೆ.

ಸಿಂಹ
ಮಾಡಬೇಕಾದ ಕೆಲಸ ರಾಶಿ ಇದ್ದರೂ
ಸೋಮಾರಿತನ ಮುಂದುವರೆಯಲಿದೆ. ನಾಳೆ
ಎನ್ನುವುದು ಹಾಳು. ಮುಂದೆ ಸಾಗಿದರೆ ಜಯ.

ಕನ್ಯಾ
ಗಾಯದ ಮೇಲೆ ಬರೆ ಎಳೆದಂತೆ ಮತ್ತಷ್ಟು
ನೋವು ಉಂಟಾಗಲಿದೆ. ಆರ್ಥಿಕವಾಗಿ ಸ್ವಲ್ಪ
ಚೇತರಿಕೆ ಕಂಡುಬರಲಿದೆ. ತಾಳ್ಮೆ ವಹಿಸಿ.

ತುಲಾ 
ಬಂಧುಗಳು ಮನೆಗೆ ಆಗಮಿಸಲಿದ್ದಾರೆ. ಶುಭ
ಕಾರ್ಯಗಳಿಗೆ ಕಾಯುವುದು ಒಳ್ಳೆಯದು.
ನೀವು ಅಂದುಕೊಂಡಂತೆಯೇ ಎಲ್ಲವೂ ಆಗದು.

ವೃಶ್ಚಿಕ
ನಿಮ್ಮ ಧೈರ್ಯವೇ ನಿಮಗೆ ಆಯುಧ.
ಮಾತನಾಡಿ ಕಾಲ ತಳ್ಳುವುದಕ್ಕಿಂತ ಏನಾದರೂ
ಕೆಲಸ ಮಾಡುವುದು ಲೇಸು. ಶುಭ ಫಲ. 

ಧನುಸ್ಸು
ಕಾಣದ ಕೈಗಳು ಇಂದು ನಿಮ್ಮ ಸಹಾಯಕ್ಕೆ
ನಿಲ್ಲಲಿವೆ. ಇರುವ ಭಾಗ್ಯವನ್ನು ನೆನೆದು
ಬಾರನೆಂಬುದನ್ನು ಬಿಟ್ಟು ಮುಂದೆ ಸಾಗಿ.

ಮಕರ
ಹಂಚುವುದಿದ್ದರೆ ಒಳ್ಳೆಯ ವಿಚಾರಗಳನ್ನು
ಹಂಚಿ. ಮನೆ ಮಂದಿಗೆ ನಿಮ್ಮಿಂದ ಧೈರ್ಯ
ಬರಲಿದೆ. ಆರ್ಥಿಕವಾಗಿ ಲಾಭವಾಗಲಿದೆ.

ಕುಂಭ
ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಬೇಡ. ಅಪಾ
ಯಗಳು ನಿವಾರಣೆಯಾಗಲಿವೆ. ಸಮಯಕ್ಕೆ
ಸರಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿ.

ಮೀನ 
ಎಲ್ಲಾ ಕೆಲಸವನ್ನೂ ಸರಿಯಾಗಿ ಮಾಡಿ
ಕಡೆಯಲ್ಲಿ ಆದ ಸಣ್ಣ ತಪ್ಪಿನಿಂದ ಎಲ್ಲವೂ
ಕೆಡಲಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ.