ಈ ರಾಶಿಗೆ ಶುಭ ಫಲ : ಎಚ್ಚರಿಕೆಯಿಂದ ನಡೆಯಿರಿ

ಮೇಷ : ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಬದಿಗೆ ತಳ್ಳಿ ಸಾಗಿ, ಕೆಲಸದ ಒತ್ತಡ ಅಧಿಕ

ವೃಷಭ : ನಿಮ್ಮ ಪಾಲಿನ ಜವಾಬ್ದಾರಿಯನ್ನು  ಮತ್ತೊಬ್ಬರ ಹೆಗಲಿಗೆ ಏರಿಸುವುದು ಬೇಡ. ಮನೆಯಲ್ಲಿ ಗೊಂದಲ ನಿವಾರಣೆ

ಮಿಥುನ : ನಿತ್ಯ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಬದಲಾವಣೆಯಾಗಲಿವೆ. ದೂರದ ಪ್ರವಾಸ ಮುಂದೂಡುವುದು ಒಳಿತು. 

ಕಟಕ : ಬುದ್ಧಿವಂತರ ಸಂಪರ್ಕ ದೊರೆಯಲಿದೆ. ಹಿರಿಯ ಅಧಿಕಾರಿಗಳಿಂದ ಕಿರಕಿರಿ ಅನುಭವಿಸಲಿದ್ದೀರಿ. ಹಣಕಾಸಿನಲ್ಲಿ ತೊಂದರೆ. 

ಸಿಂಹ : ಸ್ನೇಹಿತರ ಬಳಿ ನಿಮ್ಮದೇ ಸಮಸ್ಯೆಗಳನ್ನು ಹೇಳುತ್ತಾ ಕೂರುವುದು ಬೇಡ, ಅವರ ಸಮಸ್ಯೆಗೂ ನೀವು ಸ್ಪಂದನೆ ನೀಡಿ, ಶುಭ ಫಲ

ಕನ್ಯಾ : ಮನೆಯ ಹಿರಿಯರಿಂದ ದೊರೆತ ಬೆಂಬಲದಿಂದಾಗಿ ಮಹ್ತರವಾದ ಕಾರ್ಯ ಕೈಗೆತ್ತಿಕೊಳ್ಳಲಿದ್ದೀರಿ, ದೇವಸ್ಥಾನಗ ಭೇಟಿ ಸಾಧ್ಯತೆ

ತುಲಾ: ಇತರರ ಸಂತೋಷಕ್ಕೆ ನೀವು ಕಾರಣವಾಗಲಿದ್ದೀರಿ. ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಗಟ್ಟಿಗೊಳಿಸಲಿವೆ. ಎಚ್ಚರಿಕೆಯಿಂದ ನಡೆಯಿರಿ

ವೃಶ್ಚಿಕ : ಮತ್ತೊಬ್ಬರಿಗೆ ತೊಂದರೆಯಾಗದ  ಕಾರ್ಯ ಕೈಗೆತ್ತಿಕೊಳ್ಳಲಿದ್ದೀರಿ.   ನಿಮ್ಮ ಸಾಧನೆಯಿಂದ ತಂದೆ ತಾಯಿಗೆ ಸಂತೋಷ

ಧನಸ್ಸು : ಮನೆಯಲ್ಲಿ ಗೊಂದಲಕ್ಕೆ ತೆರೆ ಬೀಳಲಿದೆ. ಆದಾಯದಲ್ಲಿ ಕುಸಿತ.  ಸಣ್ಣ ವ್ಯಾಪಾರಿಗಳಿಗೆ ಈ ದಿನ ತುಸು ಸವಾಲಿನ ದಿನ

ಮಕರ : ಸ್ನೇಹಿತರಿಗೆ ನೀಡಬೇಕಾದ ಸಾಲವನ್ನು ವಾಪಸ್ ಮಾಡಲಿದ್ದೀರಿ. ಸುಮ್ಮನೆ ಇಡೀದ ದಿನ ಕಾಲಾಹರಣವಾಗಲಿದೆ. ನೆಮ್ಮದಿ ಹೆಚ್ಚಲಿದೆ. 

ಕುಂಭ : ಆರೋಗ್ಯ ಸಮಸ್ಯೆಗಳು ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರಲಿದೆ. ಕೆಲಸದ ಸ್ಥಳದಲ್ಲಿ ಸಂತೋಷ ಉಂಟಾಗಲಿದೆ. ಶುಭ ದಿನ 

ಮೀನ : ನಿಮ್ಮ ಗುರುವನ್ನೇ ಮೀರಿಸುವಂತ ಕಾರ್ಯ ಸಾಧನೆ  ನಿಮ್ಮಿಂದ ಆಗಲಿದೆ. ಹಿಂದೆ ಮಾಡಿದ ಕಾರ್ಯಕ್ಕೆ ಇಂದು ಪ್ರತಿಫಲವಿದೆ.