ಮೇಷ
ಮುಂದಿನ ಕಾರ್ಯಗಳಿಗೆ ಅಗತ್ಯ ತಯಾರಿ
ಗಳನ್ನು ಮಾಡಿಕೊಳ್ಳಲಿದ್ದೀರಿ. ಸಣ್ಣ ವಿಚಾರಕ್ಕೆ
ಮನಸ್ತಾಪ ಮಾಡಿಕೊಳ್ಳುವುದು ಬೇಡ.

ವೃಷಭ
ಎಲ್ಲರೂ ನಿಮ್ಮಂತೆಯೇ ಇರಬೇಕು
ಎನ್ನುವುದನ್ನು ಬಿಡಿ. ವಹಿಸಿದ ಕಾರ್ಯ
ಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ.

ಮಿಥುನ
ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ನೆರವು
ನೀಡಲಿದ್ದೀರಿ. ದೊಡ್ಡ ನಿರ್ಧಾರಗಳನ್ನು
ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ.

ಕಟಕ
ಎಲ್ಲವನ್ನೂ ಹಣದಿಂದಲೇ ಅಳೆತೆ
ಮಾಡುವುದಕ್ಕೆ ಹೋಗಬೇಡಿ. ಖರ್ಚಿನಲ್ಲಿ
ಇಳಿಕೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ.

ಸಿಂಹ
ಮಾಡುವ ಕಾರ್ಯಗಳನ್ನೇ ಭಿನ್ನವಾಗಿ.
ಒಂದು ಸೋಲಿಗೆ ಆತ್ಮಸ್ಥೈರ್ಯ ಕಳೆದು
ಕೊಳ್ಳುವುದು ಬೇಡ. ಚಿಂತೆ ಕಳೆಯಲಿದೆ

ಕನ್ಯಾ
ಒಳ್ಳೆಯ ಕೆಲಸಗಳಲ್ಲಿ ಇಡೀ ದಿನ
ತೊಡಗಿಸಿಕೊಳ್ಳಲಿದ್ದೀರಿ. ಆತ್ಮಾಭಿಮಾನಕ್ಕೆ
ಹೆಚ್ಚು ಒತ್ತು ಕೊಡಲಿದ್ದೀರಿ. ಶುಭ ಫಲ.

ತುಲಾ 
ಅನ್ಯರ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ
ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು
ಸಾಗುತ್ತಿರಿ. ಒಳ್ಳೆಯ ಫಲ ಸಿಗಲಿದೆ.

ವೃಶ್ಚಿಕ
ಸೌಂದರ್ಯ ಶಾಶ್ವತವಲ್ಲ, ಗುಣವೇ ಶಾಶ್ವತ.
ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ
ತಯಾರಿ ನಡೆಸಿ. ಚಿಂತೆಗಳು ದೂರಾಗಲಿವೆ. 

ಧನುಸ್ಸು
ಆಹಾರದ ವಿಚಾರದಲ್ಲಿ ಮಿತಿ ಮೀರುವುದು
ಬೇಡ. ಮಾಡುವ ಕೆಲಸವನ್ನು ಶ್ರದ್ಧೆಯಿಂದ
ಮಾಡಿ ಮುಗಿಸಿ. ಮತ್ತೊಬ್ಬರನ್ನು ಗೌರವಿಸಿ.

ಮಕರ
ಸಂಬಂಧಿಗಳು ಇಂದು ನಿಮ್ಮ ನೆರವಿಗೆ
ಬರಲಿದ್ದಾರೆ. ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ
ತರುವಂತಹ ಕೆಲಸ ಮಾಡುವುದು ಬೇಡ.

ಕುಂಭ
ಕ್ಷುಲ್ಲಕ ಕಾರಣಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ.
ನಿಮ್ಮ ಪಾಡಿಗೆ ನೀವು ಇದ್ದರೆ ಎಲ್ಲಾ
ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ.

ಮೀನ 
ತಂದೆಯ ಮಾತಿಗೆ ಬೆಲೆ ಕೊಡಲಿದ್ದೀರಿ. ಹಣ
ಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿ.
ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುವಿರಿ.