ಮೇಷ: ಮತ್ತೊಬ್ಬರಿಗೆ ಆದೇಶ ಮಾಡುವ ಮೊದಲಿಗೆ ನಿಮ್ಮ ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ಹಿಡಿದ ಕಾರ್ಯವನ್ನು ಮುಗಿಸುವಿರಿ.

ವೃಷಭ: ಆದಾಯದಲ್ಲಿ ಏರಿಕೆ ಕಂಡರೂ ಖರ್ಚು ಕೂಡ ಅಧಿಕವಾಗಲಿದೆ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗರೂಕವಾಗಿ ಇದ್ದರೆ ಒಳಿತು.

ಮಿಥುನ: ಹಿಂದೆ ಮಾಡಿದ ಧರ್ಮ ಕಾರ್ಯಗಳು ಇಂದು ನಿಮ್ಮ ನೆರವಿಗೆ ಬರಲಿವೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ.

ಕಟಕ: ದೊಡ್ಡವರು ಹೇಳಿದ ಮಾತನ್ನು ಕೇಳಿ. ನಿತ್ಯವೂ ಕಾಡುತ್ತಿದ್ದ ಚಿಂತೆ ಇಂದು ಶಮನವಾಗಲಿದೆ. ಒಳ್ಳೆಯ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ಸಿಂಹ: ಆತ್ಮೀಯರಿಂದ ಸಹಾಯ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ವ್ಯಾಪಾರಿಗಳಿಗೆ ಇದು ಒಳ್ಳೆಯ ದಿನ.

ಕನ್ಯಾ: ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಹಾಗೆಯೇ ಸಂಪಾದನೆಗೆ ತಕ್ಕಂತೆ ಖರ್ಚು ಮಾಡಬೇಕು. ಒಳ್ಳೆಯ ಸುದ್ದಿ ಕೇಳಲಿದ್ದೀರಿ.

ತುಲಾ: ಮಾತು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಸಮತೋಲನ ಕಾಯ್ದುಕೊಳ್ಳಿ. ಕೋಪ ಮಾಡಿಕೊಳ್ಳುವುದರಿಂದ ಏನೂ ಆಗದು.

ವೃಶ್ಚಿಕ: ನಿಮ್ಮ ಲಾಭಕ್ಕಾಗಿ ಮತ್ತೊಬ್ಬರ ಹಿತಾಸಕ್ತಿಯನ್ನು ಬಲಿ ಕೊಡುವ ಕೆಲಸ ಮಾಡದಿರಿ.ಉಳಿತಾಯದ ಕಡೆಗೆ ಹೆಚ್ಚು ಗಮನ ನೀಡಿ.

ಧನಸ್ಸು: ಮನೆಯಲ್ಲಿ ಶುಭ ಕಾರ್ಯ ನಡೆಯುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದೀರಿ. ಶುಭ ಫಲ.

ಈ ರಾಶಿಯವರಿಗೆ ಕಷ್ಟ ಮುಗಿದು ಸುಖದ ದಿನಗಳು ಬರಲಿವೆ: ವಾರ ಭವಿಷ್ಯ

ಮಕರ: ನೀವು ನಂಬಿದ ವ್ಯಕ್ತಿಗಳಿಂದ ಇಂದು ನಿಮಗೆ ದೊಡ್ಡ ಮಟ್ಟದ ಸಹಾಯವಾಗಲಿದೆ. ಕಲೆ, ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಉಂಟಾಗಲಿದೆ.

ಕುಂಭ: ನೀವು ಮಾಡಿದ ತಪ್ಪಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದು. ಸಂದರ್ಭಕ್ಕೆ ತಕ್ಕ ಹಾಗೆ ಯೋಚಿಸಿ ಮುಂದೆ ಸಾಗಿ.

ಮೀನ: ನಡೆಯಬೇಕಾದ ದಾರಿ ತುಂಬಾ ದೂರ ಇದೆ ಎಂದು ಸುಮ್ಮನೆ ಕೂರದಿರಿ. ನಿಮ್ಮಿಂದ ಸಾಧ್ಯವಾದಷ್ಟು ದೂರ ನಡೆಯಲು ಆರಂಭಿಸಿ.