ಈ ರಾಶಿಯವರ ಆದಾಯದಲ್ಲಿ ಭರ್ಜರಿ ಏರಿಕೆ

ಮೇಷ
ಸಿನಿಮಾ, ಸುತ್ತಾಟಗಳು ಹೆಚ್ಚಾಗಲಿದೆ.
ಆದಾಯದಲ್ಲಿ ಏರಿಕೆ. ಆಪ್ತರೊಂದಿಗೆ
ಮಾತನಾಡುವಾಗ ಎಚ್ಚರಿಕೆ ಇರಲಿ.

ವೃಷಭ
ದೂರದ ಬೆಟ್ಟ ಯಾವಾಗಲೂ ನುಣ್ಣಗೇ
ಕಾಣುವುದು. ಸೂಕ್ತವಾಗಿ ಪರೀಕ್ಷೆ ಮಾಡದೇ
ಯಾವುದನ್ನೂ ಸುಲಭಕ್ಕೆ ಒಪ್ಪಿಕೊಳ್ಳದಿರಿ.

ಮಿಥುನ
ಹಿರಿಯರ ಸಲಹೆ ಪಡದು ಹಣಕಾಸಿನ ವ್ಯವ
ಹಾರ ಮುಂದುವರೆಸಿ. ಗೆಳೆಯನ ಸಂಭ್ರಮ
ದಲ್ಲಿ ಭಾಗಿಯಾಗುವಿರಿ. ಶ್ರಮ ಹೆಚ್ಚಾಗಲಿದೆ.

ಕಟಕ
ಮತ್ತೊಬ್ಬರ ತಪ್ಪುಗಳನ್ನು ನೋಡಿ ನೀವು ಪಾಠ
ಕಲಿತುಕೊಳ್ಳಿ. ಇದರಿಂದ ಆಗುವ ತೊಂದರೆಗಳ
ಪ್ರಮಾಣ ಕಡಿಮೆಯಾಗುತ್ತದೆ.

ಸಿಂಹ
ಮುಂದಿನ ಒಂದು ವಾರದ ಕಾರ್ಯಪಟ್ಟಿ
ಯನ್ನು ಸಿದ್ಧ ಮಾಡಿಕೊಂಡು ಆ ನಿಟ್ಟಿನಲ್ಲಿ
ಸಾಗಲಿದ್ದೀರಿ. ಹೆದರಿಕೆ ಕಡಿಮೆಯಾಗಲಿದೆ.

ಕನ್ಯಾ
ಬಂಧುಗಳ ಕಷ್ಟಗಳಿಗೆ ನೆರವಾಗಿ ನಿಲ್ಲುವಿರಿ.
ಮನೆಯಲ್ಲಿನ ಉತ್ಸಾಹದ ವಾತಾವರಣದಿಂದ
ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ.

ತುಲಾ 
ಕಣ್ಣಾರೆ ಕಂಡದ್ದೆಲ್ಲವೂ ಸತ್ಯವಲ್ಲ. ಸರಿಯಾಗಿ
ಪೂರ್ವಾಪರ ವಿಚಾರ ಮಾಡಿ ನಿರ್ಧಾರ
ತೆಗೆದುಕೊಳ್ಳಿ. ಮನಸ್ಸಿನ ಶಾಂತಿ ಹೆಚ್ಚಾಗಲಿದೆ.

ವೃಶ್ಚಿಕ
ದಿನ ಪೂರ್ತಿ ಕಾರ್ಯಮಗ್ನರಾಗಿರುವಿರಿ.
ಬಂಧುಗಳ ಆಗಮನವಾಗಲಿದೆ. ಮನೆಯ
ಕೆಲಸಗಳ ಕಡೆಗೂ ಹೆಚ್ಚು ಗಮನ ನೀಡುವಿರಿ. 

ಧನುಸ್ಸು
ಹಣದ ಹಿಂದೆ ಓಡುವುದು ಬೇಡ. ಇಂದು
ಆಡಳಿತಾತ್ಮಕ ಕೆಲಸಗಳು ಪೂರ್ಣವಾಗಲಿವೆ.
ಎಲ್ಲರಿಗೂ ಒಳ್ಳೆಯದ್ದನ್ನೇ ಬಯಸುವಿರಿ.

ಮಕರ
ನಕಾರಾತ್ಮಕ ಗುಣಗಳು ಮನಸ್ಸಿನ ಒಳಗೆ
ಪ್ರವೇಶ ಪಡೆಯದಂತೆ ಎಚ್ಚರ ವಹಿಸಿ. ಗಟ್ಟಿ
ಮನಸ್ಸು ಮಾಡಿ ಹಿಡಿದ ಕೆಲಸ ಮುಗಿಸುವಿರಿ.

ಕುಂಭ
ದಿನಾರಂಭದಲ್ಲಿ ಹೆಚ್ಚು ಒತ್ತಡ ಏರ್ಪಟ್ಟರೂ
ದಿನಾಂತ್ಯಕ್ಕೆ ಶುಭಫಲ ದೊರೆಯಲಿದೆ.
ಒಳ್ಳೆಯ ಮನಸ್ಸಿನಿಂದ ಕೆಲಸ ಆರಂಭಿಸಿ.

ಮೀನ 
ಸ್ನೇಹಿತರಿಂದ ಸಹಾಯ ಪಡೆಯಲೇಬೇಕಾದ
ಅನಿವಾರ್ಯ ಸೃಷ್ಟಿಯಾಗಲಿದೆ. ಅಂಜಿಕೆ
ಇಲ್ಲದೇ ಹಿಡಿದ ಕೆಲಸವನ್ನು ಮಾಡಿ ಮುಗಿಸಿ.