ಈ ವಾರ ಈ ರಾಶಿಗೆ ಸಿಹಿ ಸುದ್ದಿ ಕಾದಿದೆ


ಮೇಷ
ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣ ಅದನ್ನು
ಅನಾವಶ್ಯಕವಾಗಿ ಪೋಲು ಮಾಡದಿರಿ.
ನಿಮ್ಮಿಚ್ಛೆಯಂತೆ ಈ ವಾರ ನೀವಂದುಕೊಂಡ
ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸಕಲರನ್ನೂ
ಪ್ರೀತಿಸಿ, ಎಲ್ಲ ಜೀವಿಯನ್ನೂ ಗೌರವಿಸುವ ಸ್ವಭಾವ
ನಿಮ್ಮದಾಗಿರುವುದರಿಂದ ಎಲ್ಲರ ಪ್ರೀತಿ ಪಾತ್ರರಾಗಲಿದ್ದೀರಿ.

ವೃಷಭ
ಹೆದರಿ ಹಿಂಜರಿದರೆ ಮುನ್ನಡೆಯಲು
ಸಾಧ್ಯವಿಲ್ಲ. ಹಾಗೆಯೇ ನಿಮ್ಮ ಏಳಿಗೆಯನ್ನು
ಸಹಿಸದೆ ಕಿತಾಪತಿ ಮಾಡುವವರಿಗೆ ನೀವೆ
ಇನ್ನಷ್ಟು ದಾರಿ ಮಾಡಿಕೊಟ್ಟಂತಾಗುತ್ತದೆ. ಯಶಸ್ಸಿನ ಪ್ರತಿ
ಹಾದಿಯಲ್ಲೂ ಕಲ್ಲು ಮುಳ್ಳುಗಳಿರುತ್ತದೆ. ಅದನ್ನು ದಾಟಿ
ಮುನ್ನಡೆಯುವ ಸಾಮರ್ಥ್ಯ ನಿಮ್ಮಲ್ಲಿದೆ. 

ಮಿಥುನ 
ಸಭೆ ಸಮಾರಂಭಗಳಿಗೆ ಓಡಾಟ ಈ ವಾರ ಜಾಸ್ತಿ
ಇರಲಿದ್ದು, ಆರೋಗ್ಯದ ಕಡೆ ಗಮನವಿರಲಿ.
ನಿಮ್ಮ ಪ್ರೀತಿ ಪಾತ್ರರ ನೋವು ನಲಿವಿಗೆ
ಜೊತೆಯಗಿ ನಿಲ್ಲುವ ನೀವು ಇನ್ನಷ್ಟು ಹತ್ತಿರವಾಗಲಿದ್ದೀರಿ.
ಹಣದ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯ ನಡೆ ಅಗತ್ಯ.
ವಾರಾಂತ್ಯದಲ್ಲಿ ಸಿಹಿ ಸುದ್ದಿ ಕೇಳಲಿದ್ದೀರಿ. 

ಕಟಕ
ಕ್ರಿಯಾಶೀಲತೆಗೆ ಹೆಚ್ಚು ಆಸಕ್ತಿ ಇರುವ ಮಕ್ಕಳಿಗೆ
ಈ ವಾರ ಕುಟುಂಬದಿಂದ ಒಳ್ಳೆಯ ಸಹಕಾರ,
ಪ್ರೋತ್ಸಾಹ ಸಿಗಲಿದೆ. ನಿಮ್ಮ ಕನಸಿನ ಹಾದಿಗೆ
ಇನ್ನಷ್ಟು ಮುಂದೆ ಸಾಗಲು ಇದು ಅನುಕೂಲವಾಗಲಿದೆ.
ಪುರುಷರಿಗೆ ಈ ವಾರ ಹೆಚ್ಚಿನ ಕೆಲಸ ಇರಲಿದ್ದು, ಒತ್ತಡ
ನಿವಾರಣೆಗೆ ಆದಷ್ಟು ಧ್ಯಾನ ಮಾಡಿ ನೆಮ್ಮದಿ ಕಾಣಿ.

ಸಿಂಹ
ಮುಂಗೋಪ, ಸಣ್ಣ ಪುಟ್ಟ ವಿಚಾರಗಳಿಗೆ ಸಿಟ್ಟು
ಒಳಿತಲ್ಲ. ಆಗುವ ಕೆಲಸ ಈಗಲೇ ಆಗಬೇಕು
ಎನ್ನುವ ನಿಮಗೆ ಕೆಲ ಕೆಲಸಗಳಿಗೆ ಸಮಯ
ಬೇಕಾಗುತ್ತದೆ ಎಂಬುದು ನೆನಪಿರಲಿ. ನೀವಂದುಕೊಂಡಿ
ದ್ದು ನೆರವೇರಲಿದೆ. ಅದಕ್ಕೆ ಪ್ರಮುಖವಾಗಿ ಸಮಾಧಾನ,
ಶಾಂತ ಸ್ವಭಾವ ಬೇಕು, ಅದನ್ನು ರೂಢಿಸಿಕೊಳ್ಳಿ.

ಕನ್ಯಾ
ಕೂಡಿಟ್ಟ ಕನಸ್ಸು ಕಾದಿದ್ದಕ್ಕೂ ಸಾರ್ಥಕವಾಯಿ
ತು. ಹೊಸ ಕಟ್ಟಡ ಖರೀದಿ ಸಾಧ್ಯತೆ. ಹೊಸ
ಕಾರ್ಯಗಳತ್ತೆ ಮತ್ತೆ ಕಾರ್ಯೋನ್ಮುಖರಾಗಲಿ
ದ್ದೀರಿ. ಹಳೇ ಸ್ನೇಹಿತರ ಭೇಟಿ ಸಾಧ್ಯತೆ. ಮಹಿಳೆಯರ
ಪಾಲಿಗೆ ಈ ವಾರ ಹೆಚ್ಚಿನ ಜವಾಬ್ದಾರಿ ಸಾಧ್ಯತೆ. ಮಕ್ಕಳ
ಜೊತೆ ದೂರ ಪ್ರಯಾಣ. ವಾರಾಂತ್ಯದಲ್ಲಿ ಸಿಹಿ ಸುದ್ದಿ.

ತುಲಾ
ಯಾರನ್ನೋ ರೋಲ್ ಮಾಡೆಲ್ ಆಗಿ ಕಾಣದೆ,
ನಿಮ್ಮ ಜೀವನದ ಒಂದು ಘಟನೆ ನೆನೆದು ನಿಮಗೆ
ನೀವೇ ರೋಲ್ ಮಾಡೆಲ್ ಆಗಿ ಕಾಣಿ. ಇತರರಿಗೆ
ನಿಮ್ಮನ್ನು ನೀವು ಹೋಲಿಸಿಕೊಂಡಷ್ಟು ಆತ್ಮವಿಶ್ವಾಸ
ಕುಗ್ಗುವುದು ಹೆಚ್ಚು. ಯಾವುದೇ ಕೆಲಸದಲ್ಲೂ ಸಕಾರಾತ್ಮಕ
ಆಲೋಚನೆಯೊಂದಿಗೆ ಮುನ್ನಡೆಯುವುದು ಸೂಕ್ತ.

ವೃಶ್ಚಿಕ
ಈ ವಾರ ಅಧ್ಯಾತ್ಮದಲ್ಲಿ ಹೆಚ್ಚು ತೊಡಗಿಕೊಳ್ಳಲಿ
ದ್ದೀರಿ. ಕೈಲಾದ ಸೇವೆಯನ್ನು ಸೂಕ್ತರಿಗೆ
ನೀಡುವುದರಿಂದ ನಿಮ್ಮಲ್ಲಿ ನೆಮ್ಮದಿ, ಶಾಂತ
ಯುತ ವಾತಾವರಣ ನೆಲೆಸಲಿದೆ. ಎಲ್ಲರನ್ನೂ ಆದಷ್ಟು
ಆತ್ಮೀಯವಾಗಿ, ಪ್ರೀತಿಯಿಂದ ಕಾಣಿ. ಮಾಡುವ ಕೆಲಸ
ಗಳಲ್ಲಿ ಶ್ರದ್ಧೆ, ಧೈರ್ಯ ಹಾಗೂ ವಿಶ್ವಾಸದಿಂದ ಮಾಡಿ.

ಧನಸ್ಸು
ಹೊಸ ವರ್ಷಕ್ಕೆ ಹೊಸ ಹುರುಪಿನಲ್ಲಿ ಕೈಗೊಂಡ
ಕೆಲಸ ತಿಂಗಳಾಂತ್ಯದಲ್ಲಿ ಯಶಸ್ಸನ್ನು ಕಾಣುವಿರಿ.
ಮಕ್ಕಳ ವಿಚಾರದಲ್ಲಿ ಯಾವುದೇ ನಕಾರಾತ್ಮಕ
ಆಲೋಚನೆಗಳು ಬೇಡ. ಕುಟುಂಬದಲ್ಲಿ ಸಂತೋಷ
ನೆಲೆಸಲಿದ್ದು, ನೆಮ್ಮದಿಯ ವಾರ ಇದಾಗಲಿದೆ.

ಮಕರ
ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಿದಷ್ಟು
ನಮ್ಮಲ್ಲಿ ಒಳ್ಳೆಯ ಗುಣ ಎರಡರಷ್ಟು
ತುಂಬುತ್ತದೆ. ಹಾಗಂತ ಎಲ್ಲಾ ವಿಚಾರದಲ್ಲೂ
ಒಳ್ಳೆಯತ ರೂಢಿಸಿಕೊಂಡರೆ ಅಪಾಯ ಖಂಡಿತ.
ಒಂದೊಳ್ಳೆ ಆಲೋಚನೆ ನಿಮ್ಮ ಜೀವನ ಬದಲಿಸಬಹುದು.

ಕುಂಭ
ನಿಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು
ತರವಲ್ಲ. ಕೆಲಸದಲ್ಲಿ ನೀವಿಡುವ ಹೆಜ್ಜೆ ಸರಿಯೋ
ತಪ್ಪೋ ಎಂದು ಪೂರ್ವ ನಿರ್ಧಾರ ಕೈಗೊಳ್ಳಿ.
ಒಂದೊಳ್ಳೆ ಕೆಲಸ ಮಾಡುವಾಗ ಅಡೆ ತಡೆಗಳು ಬರುವುದು
ಸಹಜ. ಎಲ್ಲದಕ್ಕೂ ತಯಾರಾಗಿಯೇ ಹೆಜ್ಜಿ ಇಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ ಕಾಣಲಿ

ಮೀನ
ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದಕ್ಕಿಂದ ಈ
ಕ್ಷಣ ಏನಾಗುತ್ತದೆ ಎನ್ನುವುದು ಮುಖ್ಯವಾಗು
ತ್ತದೆ. ವಿದ್ಯಾಭ್ಯಾಸದ ಬಗ್ಗೆ ನೀವು ಈ ಕ್ಷಣ
ಕೈಗೊಳ್ಳುವ ಉತ್ತಮ ನಿರ್ಧಾರ ಭವಿಷ್ಯದ ದಾರಿ ಸುಖ
ವಾಗಿರಿಸುತ್ತದೆ. ವಾರಂತ್ಯದಲ್ಲಿ ಕಹಿ ಸುದ್ದಿ ಕೇಳುವಿರಿ.