ಮೇಷ
ಒಳ್ಳೆಯ ಕೆಲಸಕ್ಕೆ ತುಸು ಹೆಚ್ಚು ಪ್ರಯತ್ನ
ಮಾಡಲೇಬೇಕಾಗುತ್ತದೆ. ನಿಮ್ಮವರೇ ಇಂದು
ನಿಮ್ಮ ವಿರುದ್ಧ ನಿಲ್ಲಲಿದ್ದಾರೆ. ತಾಳ್ಮೆ ಇರಲಿ.

ವೃಷಭ
ಯಾರನ್ನೂ ಹೆಚ್ಚಾಗಿ ನಂಬುವುದು ಬೇಡ.
ಸ್ವಾರ್ಥಿಗಳಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ
ಒಳ್ಳೆಯತನದಿಂದ ಒಳ್ಳೆಯದ್ದೇ ಆಗಲಿದೆ.

ಮಿಥುನ
ಗೆಳೆಯನ ಕಷ್ಟಕ್ಕೆ ಬೇಗನೇ ಸ್ಪಂದನೆ ನೀಡುವಿರಿ.
ದಿನ ಪೂರ್ತಿ ಯಾವುದೇ ಮಹತ್ವದ ಕೆಲಸಗಳು
ಆಗುವುದಿಲ್ಲ. ಆರೋಗ್ಯದಲ್ಲಿ ಚೇತರಿಕೆ.

ಕಟಕ
ನಿಮ್ಮ ಮೇಲಿನ ಪ್ರೀತಿಯಿಂದ ಸ್ನೇಹಿತರು
ನಿಮ್ಮನ್ನು ಹುಡುಕಿಕೊಂಡು ಬರಲಿದ್ದಾರೆ.
ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡದಿರಿ.

ಸಿಂಹ
ತಂದೆಯ ಮಾತಿನಂತೆ ಹೊಸ ಉದ್ಯಮದ
ಆರಂಭಕ್ಕೆ ಅಗತ್ಯವಾದ ತಯಾರಿಗಳನ್ನು
ನಡೆಸಲಿದ್ದೀರಿ. ಆದಾಯದಲ್ಲಿ ಏರಿಕೆ.

ಕನ್ಯಾ
ಸೂಕ್ತವಾದ ವ್ಯಕ್ತಿಗಳೊಂದಿಗೆ ವ್ಯವಹಾರ
ಮಾಡಿ. ಆಸೆಗೆ ಮಿತಿ ಇಲ್ಲ. ನಿಮ್ಮದಲ್ಲದ
ವಸ್ತುವಿಗೆ ಹೆಚ್ಚು ಚಿಂತಿಸುವುದು ಬೇಡ.

ತುಲಾ 
ಇಡೀ ದಿನ ನೆಮ್ಮದಿಯಿಂದ ಕಳೆಯಲಿದ್ದೀರಿ.
ಬಂಧುಗಳ ಆಗಮನ ಸಾಧ್ಯತೆ. ವೃತ್ತಿಯಲ್ಲಿ
ಪದೋನ್ನತಿ ದೊರೆಯುವ ಅವಕಾಶವಿದೆ.

ವೃಶ್ಚಿಕ
ನಿಮ್ಮ ಮಾತಿನಿಂದ ಮತ್ತೊಬ್ಬರ ಸಂತೋಷಕ್ಕೆ
ಹಾನಿಯಾಗದಂತೆ ಎಚ್ಚರಿಕೆ ವಹಿಸಿ. ಪೂರ್ಣ
ತೃಪ್ತಿ ಎಂದಿಗೂ ಸಾಧ್ಯವಿಲ್ಲ. ಎಚ್ಚರ ಇರಲಿ. 

ಧನುಸ್ಸು
ಕಾರ್ಯ ಕಾರಣ ಸಂಬಂಧಗಳನ್ನು ತಿಳಿದು
ಕೊಂಡು ಮುಂದಡಿ ಇಡಿ. ಎಲ್ಲಾ
ಸಮಯವೂ ಒಂದೇ ರೀತಿ ಇರದು.

ಮಕರ
ಹಣಕಾಸಿ ವಿಚಾರಕ್ಕೆ ಸಂಬಂಧಸಿದಂತೆ ಸ್ವಲ್ಪ
ವ್ಯಾಜ್ಯಗಳು ನಡೆಯಲಿವೆ. ತಾಯಿಯ
ಆರೋಗ್ಯದಲ್ಲಿ ಚೇತರಿಕೆ. ಖರ್ಚು ಹೆಚ್ಚು.

ಕುಂಭ
ನೀವು ಅಂದುಕೊಂಡದ್ದೇ ಸತ್ಯ ಎಂದು
ವಾದಿಸುವುದು ಬೇಡ. ನಿಮ್ಮ ಜವಾಬ್ದಾರಿ
ಗಳನ್ನು ಮತ್ತೊಬ್ಬರ ಮೇಲೆ ಹೇರದಿರಿ.

ಮೀನ 
ತಾಳ್ಮೆಯಿಂದ ಮುನ್ನಡೆದರೆ ಶುಭ ಫಲ
ಸಿಕ್ಕುತ್ತದೆ. ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಸ್ನೇಹಿತರ ಮೇಲೆ ಅನುಮಾನ ಪಡದಿರಿ.