ಈ ರಾಶಿಗೆ ನಿಮ್ಮ ಕೆಲಸದಿಂದ ಲಾಭ ಒಲಿಯಲಿದೆ : ಉಳಿದ ರಾಶಿ ಹೇಗಿದೆ?

ಮೇಷ
ಸಕಾಲದಲ್ಲಿ ಸ್ನೇಹಿತರು ನೆರವಾಗಲಿದ್ದಾರೆ.
ಕಣ್ಣಿಗೆ ಕಂಡದ್ದಕ್ಕೆಲ್ಲಾ ಆಸೆ ಪಡುವುದು ಬೇಡ.
ನಿಮ್ಮ ಶಕ್ತಿಯೇ ಇಂದು ನಿಮಗೆ ವರವಾಗಲಿದೆ.

ವೃಷಭ
ಹೆಚ್ಚು ಮಾತು ಏನೂ ಪ್ರಯೋಜನಕ್ಕೆ
ಬರುವುದಿಲ್ಲ. ಅದಕ್ಕೆ ಬದಲಾಗಿ ಕಾಯಕ
ದಿಂದಲೇ ಲಾಭ ಎನ್ನುವುದು ತಿಳಿಯಲಿದೆ.

ಮಿಥುನ
ಆತ್ಮೀಯರು ಎಂದು ಸೂಕ್ಷ್ಮ ವಿಚಾರಗಳನ್ನು
ಎಲ್ಲರ ಮುಂದೆಯೂ ಹೇಳಿಕೊಳ್ಳುವುದು
ಬೇಡ. ಸಮಾಧಾನದಿಂದ ಮುಂದೆ ಸಾಗಿ.

ಕಟಕ
ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ.
ಹೊಸ ಜವಾಬ್ದಾರಿಗಳು ನಿಮ್ಮ ಮೇಲೆ
ಬೀಳಲಿವೆ. ದಿನವಿಡೀ ಸಂತೋಷ ಇರಲಿದೆ.

ಸಿಂಹ
ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು
ಬರಲಿದೆ. ಮತ್ತೊಬ್ಬರ ಬಗ್ಗೆ ಟೀಕೆ ಮಾಡು
ವುದು ನಿಲ್ಲಿಸಿ. ಗೆಲುವು ನಿಮ್ಮದಾಗಲಿ

ಕನ್ಯಾ
ಚಿಕ್ಕ ತಪ್ಪು ಇಂದು ನಿಮ್ಮ ಸಂತೋಷವನ್ನೇ
ಕಸಿಯುವ ಸಾಧ್ಯತೆ ಇದೆ. ಯಾರೊಂದಿಗೂ
ವಿನಾಕಾರಣ ಮುನಿಸು ಬೇಡ. ಶುಭ ಫಲ.

ತುಲಾ 
ಮನೆಯಲ್ಲಿ ಸಂತೋಷದ ವಾತಾವರಣ
ನಿರ್ಮಾಣವಾಗಲಿದೆ. ಹಣಕಾಸಿನ
ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.

ವೃಶ್ಚಿಕ
ನಿಮ್ಮದಲ್ಲದ ವಿಚಾರಕ್ಕೆ ನೀವು ತಲೆ ಹಾಕದೇ
ಇದ್ದರೆ ಇಡೀ ದಿನ ಸಂತೋಷದಿಂದ ಕೂಡಿರ
ಲಿದೆ. ಎಲ್ಲ ಬಲ್ಲೆ ಎನ್ನುವ ಹಮ್ಮು ಬೇಡ. 

ಧನುಸ್ಸು
ನಂಬಿಕೆ ಇಟ್ಟು ಮಾಡಿದ ಕೆಲಸ ಇಂದು
ಕೈಗೂಡಲಿದೆ. ನಿಮ್ಮ ಪಾಡಿಗೆ ನೀವು ಇದ್ದು
ಬಿಡುವುದು ಒಳಿತು. ಆರೋಗ್ಯದಲ್ಲಿ ವ್ಯತ್ಯಯ.

ಮಕರ
ಮಾಡುವ ಕೆಲಸವನ್ನು ಬುದ್ಧಿವಂತಿಕೆಯಿಂದ
ಮಾಡಿ ಮುಗಿಸಿ. ಮತ್ತೊಬ್ಬರ ಬೆಳವಣಿಗೆ
ನಿಮ್ಮಲ್ಲಿ ಛಲ ತುಂಬಲಿದೆ. ಶುಭ ಫಲ.

ಕುಂಭ
ಅಸಮರ್ಥರ ಬಗ್ಗೆ ಚಿಂತೆ ಮಾಡುವುದು ಬೇಡ.
ಮನಸ್ಸಿನ ಶಾಂತಿಗಾಗಿ ದೂರದ ಪ್ರಯಾಣ
ಕೈಗೊಳ್ಳಲಿದ್ದೀರಿ. ಗೆಲುವು ನಿಮ್ಮದೇ.

ಮೀನ 
ಮತ್ತೊಬ್ಬರಿಗೆ ನೆರವು ನೀಡಲು ಹೋಗಿ ನೀವು
ತೊಂದರೆಗೆ ಸಿಲುಕುವ ಅಪಾಯವಿದೆ.
ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.