ಈ ರಾಶಿಗೆ ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದೆ

ಮೇಷ
ಸತತ ಪ್ರಯತ್ನದಿಂದ ಖಂಡಿತವಾಗಿಯೂ
ಫಲ ಸಿಕ್ಕೇ ಸಿಕ್ಕುತ್ತದೆ ಎನ್ನುವ ಮಾತಿನ ಮೇಲೆ
ನಂಬಿಕೆ ಇರಲಿ. ಕಾಯಕದಲ್ಲಿ ನಿರತರಾಗಿ.

ವೃಷಭ
ದೊಡ್ಡವರ ಮೇಲಿನ ವಿಶ್ವಾಸ ಮತ್ತಷ್ಟು
ಹೆಚ್ಚಾಗಲಿದೆ. ಯಾರದೋ ತಪ್ಪಿಗೆ ನೀವು ಬೆಲೆ
ತೆರಬೇಕಾದ ಸಂದರ್ಭ ಬರಬಹುದು.

ಮಿಥುನ
ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು
ನಂತರ ಕಾರ್ಯ ಆರಂಭಿಸಿ. ವಿದ್ಯುತ್
ಉಪಕರಣಗಳಿಂದ ಸಾಧ್ಯವಾದಷ್ಟು ದೂರವಿರಿ

ಕಟಕ
ಮಾಡಿದ ತಪ್ಪಿಗೆ ತಕ್ಕ ಪ್ರತಿಫಲವನ್ನು
ಪಡೆಯಲೇಬೇಕು. ನಕಾರಾತ್ಮಕ ಚಿಂತನೆ
ಗಳಿಂದ ಹೊರ ಬನ್ನಿ. ನಂಬಿ ಕೆಟ್ಟವರಿಲ್ಲ.

ಸಿಂಹ
ಕೆಲಸದ ಹೊರೆ ಹೆಚ್ಚಾಗಲಿದೆ. ಹೊಸ
ಜವಾಬ್ದಾರಿಗಳಿಗೆ ತೆರೆದುಕೊಳ್ಳಲಿದ್ದೀರಿ.
ಮಕ್ಕಳ ಪಾಲಿಗೆ ಒಳ್ಳೆಯ ಅವಕಾಶಗಳಿವೆ. 

ಕನ್ಯಾ
ನಿಮ್ಮಷ್ಟದಂತೆಯೇ ಎಲ್ಲವೂ ನಡೆಯುವುದಿಲ್ಲ.
ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ.
ಆರಂಭ ಶೂರತ್ವದಿಂದ ಹೊರಬರುವಿರಿ.

ತುಲಾ 
ಕೆಲಸ ಮಾಡುವ ಸ್ಥಳದಲ್ಲಿ ಆತ್ಮೀಯತೆ
ಹೆಚ್ಚಾಗಲಿದೆ. ನಿಧಾನವೇ ಪ್ರದಾನ ಎನ್ನುವ
ಮಾತಿನ ಮೇಲೆ ನಂಬಿಕೆ ಇರಲಿ. ಶಾಂತಿ ಇರಲಿ

ವೃಶ್ಚಿಕ
ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ
ಮಾಡಿಕೊಳ್ಳಲಿದ್ದೀರಿ. ಕೆಲಸದಲ್ಲಿ ಪದೋನ್ನತಿ
ಸಾಧ್ಯತೆ. ಟೀಕೆಗಳಿಗೆ ಕುಗ್ಗದಿರಿ. 

ಧನುಸ್ಸು
ನಿಮ್ಮ ಆತ್ಮಶಕ್ತಿ ಹೆಚ್ಚಾಗಲಿದೆ. ಆಪ್ತರಿಂದ
ಆರ್ಥಿಕ ಸಹಕಾರ ದೊರೆಯಲಿದೆ.
ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ.

ಮಕರ
ಸಂಕಟ ಬಂದಾಗ ವೆಂಕಟರಮಣ ಎನ್ನುವುದಕ್ಕೆ
ಬದಲಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಸಂಬಂಧಗಳಲ್ಲಿ ಬಂಧ ಹೆಚ್ಚಾಗಲಿದೆ.

ಕುಂಭ
ನಿಮ್ಮ ಮಾತಿಗೆ ಮನೆಯಲ್ಲಿ ಮಾನ್ಯತೆ
ದೊರೆಯಲಿದೆ. ಮತ್ತೊಬ್ಬರ ದೌರ್ಬಲ್ಯವನ್ನು
ಎತ್ತಿ ತೋರಿಸುವುದು ಬೇಡ. ನಿಮ್ಮಂತೆ ನೀವಿರಿ

ಮೀನ 
ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದೆ.
ಆದರೂ ಬೆಳಿಗ್ಗೆಯಿಂದಲೇ ಸಾಕಷ್ಟು
ಸುತ್ತಾಟವೂ ಇರಲಿದೆ. ತಾಳ್ಮೆ ಇರಲಿ.