Asianet Suvarna News Asianet Suvarna News

ಈ ರಾಶಿಗೆ ಹೆಚ್ಚು ಆದಾಯ- ಭಾರಿ ಲಾಭ : ಉಳಿದ ರಾಶಿ ಹೇಗಿದೆ?

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ ಬುಧವಾರ ಡಿಸೆಂಬರ್ 11

Daily Bhavishya 11 December 2019
Author
Bengaluru, First Published Dec 11, 2019, 7:16 AM IST
  • Facebook
  • Twitter
  • Whatsapp

ಈ ರಾಶಿಗೆ ಹೆಚ್ಚು ಆದಾಯ- ಭಾರಿ ಲಾಭ : ಉಳಿದ ರಾಶಿ ಹೇಗಿದೆ?

ಮೇಷ
ಸಣ್ಣ-ಪುಟ್ಟ ಕರಕುಶಲ ಕೆಲಸ ಮಾಡುವ
ವರಿಗೂ ದೊಡ್ಡ ಹೆಸರು ಬರುವ ದಿನವಿದು.
ನಿಮ್ಮ ಕಾರ್ಯದಕ್ಷತೆಯೇ ನಿಮಗೆ ಶ್ರೀರಕ್ಷೆ.

ವೃಷಭ
ಪ್ರಯಾಣವಿದೆ. ಹೊಸ ಸ್ಥಳಗಳಿಗೆ ಭೇಟಿ.
ಪ್ರಮುಖರೊಡನೆ ಮಾತುಕತೆ ನಡೆಸಲಿದ್ದೀರಿ.
ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನವಿದು.

ಮಿಥುನ
ಪುಟ್ಟ ಹೊಟೇಲ್ ವ್ಯಾಪಾರಿಗಳಿಗೆ ಈ ಕಾಲ
ಉತ್ತಮವಾಗಿವೆ. ಉದ್ದಿಮೆಯಲ್ಲಿ ಹೆಚ್ಚಿನ
ಲಾಭ ಸಿಗಲಿದೆ. ರೈತರಿಗೂ ಆದಾಯವಿದೆ.

ಕಟಕ
ನಿಮ್ಮ ಪತ್ನಿಯ ಸಹಕಾರದಿಂದ ಕಷ್ಟ ಕಾಲಕ್ಕೆ
ಎಂದು ಕೂಡಿಟ್ಟ ಹಣವು ಈಗ ಉಪಯೋಗಕ್ಕೆ
ಬರಲಿದೆ. ವೃಥಾ ಖರ್ಚು ಒಳ್ಳೆಯದಲ್ಲ.

ಸಿಂಹ
ಸುಖವೆಂದರೇನೆಂದು ತಿಳಿಯುವ ದಿನಗಳಿವು.
ನಿಮಗೇ ಗೊತ್ತಿಲ್ಲದೆಯೇ ನಿಮಗಾಗಿ ಎಲ್ಲಾ
ದಾರಿಗಳು ತಂತಾನೆ ತೆರೆದುಕೊಳ್ಳುವ ದಿನ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ...

ಕನ್ಯಾ
ಪ್ರೀತಿಪಾತ್ರರ ಜೊತೆ ವಿವಾದಗಳಿಗೆ ಅವಕಾಶ
ನೀಡದಿರಿ. ಅವರನ್ನು ಗೌರವದಿಂದ ಕಾಣಿರಿ.
ಚಿಕ್ಕವರೊಂದಿಗೂ ಪ್ರೀತಿ-ಪ್ರೇಮಗಳಿದಿಂದಿರಿ.

ತುಲಾ
ಸ್ವಉದ್ಯೋಗದವರಿಗೆ ಉತ್ತಮ ಆದಾಯ.
ವಾಹನಗಳ ವ್ಯಾಪಾರಿಗಳಿಗೂ ಒಳ್ಳೆಯ ಲಾಭ.
ಸರ್ಕಾರಿ ಹಣವು ನಿಮ್ಮ ಖಾತೆಗೆ ಸೇರಲಿದೆ.

ವೃಶ್ಚಿಕ
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ.
ಅದರಿಂದ ನಿಮ್ಮ ಮನಃಶಾಂತಿಗೆ ಧಕ್ಕೆಯೂ
ಬರಬಹುದು. ಹಾಗಾಗಿ ಧ್ಯಾನಾಸಕ್ತರಾಗಿ. 

ಧನುಸ್ಸು
ಇಂದಿನ ಸಮಯ ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ಮಕರ
ಗೆಳೆಯನ ಒಂದು ಸಣ್ಣ ಮಾತು ನಿಮ್ಮ
ಜೀವನದಲ್ಲಿ ಹೊಸ ಹುರುಪನ್ನು ತರಲಿದೆ.
ಸುಳ್ಳು ಆರೋಪಗಳಿಗೂ ಒಳಗಾಗುವಿರಿ.

ಕುಂಭ
ಕೃಷಿಕರು ಯೋಚಿಸಿ ನಿರ್ಧಾರಗಳನ್ನು ತೆಗೆದು
ಕೊಂಡರೆ ಒಳಿತು. ಒಳ್ಳೆಯ ದಿನಗಳು ಆದಷ್ಟು
ಬೇಗ ಬರಲಿವೆ. ತಾಳ್ಮೆಯಿಂದ ಕಾಯಬೇಕಷ್ಟೆ.

ಮೀನ 
ವಾಸ್ತು ದೋಷದ ಬಗ್ಗೆ ಹೆಚ್ಚು ಚಿಂತೆ ಬೇಡ.
ಸುಖಾಸುಮ್ಮನೆ ಖರ್ಚು ಮಾಡಬೇಡಿ. ಸಾಧ್ಯ
ವಾದಲ್ಲಿ ಒಂದಿಷ್ಟು ಜನರಿಗೆ ಒಳಿತು ಮಾಡಿರಿ.

Follow Us:
Download App:
  • android
  • ios