ಒಂದು ರಾಶಿಗೆ ಮಾಡಿದ ಕೆಲಸಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ : ನಿಮ್ಮ ರಾಶಿಯ ಅನುಕೂಲವೇನು? 

ಮೇಷ
ಇಡೀ ದಿನ ಮನಸ್ಸು ಶಾಂತವಾಗಿ ಇರಲಿದೆ.
ಸಂಬಂಧಿಕರ ಕಾರ್ಯಕ್ರಮಗಲ್ಲಿ
ಭಾಗಿಯಾಗಲಿದ್ದೀರಿ. ಗೆಲುವು ಸಿಗಲಿದೆ.

ವೃಷಭ
ಕಷ್ಟದಲ್ಲಿ ಇರುವ ಸ್ನೇಹಿತನ ನೆರವಿಗೆ
ನಿಲ್ಲಲಿದ್ದೀರಿ. ಯಾವುದೇ ಕೆಲಸವನ್ನು
ಉಚಿತವಾಗಿ ಮಾಡಲು ಹೋಗದಿರಿ.

ಮಿಥುನ
ಸಹಾಯ ಮಾಡಿದ ವ್ಯಕ್ತಿಗಳನ್ನು
ಅಭಿಮಾನದಿಂದ ನೆನೆದುಕೊಳ್ಳಲಿದ್ದೀರಿ. ಸ್ವಂತ
ಬಲದ ಮೇಲೆ ವ್ಯವಹಾರ ನಡೆಸಿರಿ.

ಕಟಕ
ನಿಮ್ಮ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕಿ
ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ
ಮಾಡದಿರಿ. ಹೊಸ ವ್ಯಕ್ತಿಗಳ ಪರಿಚಯ.

ಸಿಂಹ
ವಿದ್ಯುತ್ ಉಪಕರಣಗಳಿಂದ ದೂರ ಇದ್ದಷ್ಟೂ
ನಿಮಗೇ ಒಳಿತು. ವಸ್ತುಗಳನ್ನು ಕೊಳ್ಳುವಾಗ
ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿರಿ.

ಕನ್ಯಾ
ಯಾವುದೇ ಸಮಸ್ಯೆಯನ್ನಾದರೂ ಪ್ರಾರಂಭ
ದಲ್ಲಿಯೇ ಬಗೆ ಹರಿಸಿಕೊಳ್ಳಿ. ಬೆಳೆಯಲು ಬಿಟ್ಟರೆ
ಮುಂದೆ ನಿಮಗೇ ತೊಂದರೆಯಾಗಲಿದೆ.

ತುಲಾ 
ಭಕ್ತಿ ಮತ್ತು ಶ್ರದ್ಧೆಯಿಂದ ಮಾಡಿದ ಕೆಲಸಗಳು
ಎಂದಿಗಾದರೂ ಫಲ ನೀಡಿಯೇ ನೀಡುತ್ತವೆ.
ಹಿರಿಯರು ಹೇಳಿದ ಮಾತಿಗೆ ಬದ್ಧವಾಗಿರಿ.

ವೃಶ್ಚಿಕ
ನಿಮ್ಮ ಮನಸ್ಸಿನ ನೋವನ್ನು ಆತ್ಮೀಯರ ಬಳಿ
ಹೇಳಿಕೊಂಡು ಹಗುರಾಗಲಿದ್ದೀರಿ. ಹೊಸ
ಜಾಗ, ಹೊಸ ಜನರ ಬಳಿಗೆ ಹೋಗುವಿರಿ. 

ಧನುಸ್ಸು
ನಿಯತ್ತಿನ ಮನುಷ್ಯರ ಪರಿಚಯವಾಗಲಿದೆ.
ಮತ್ತೊಬ್ಬರ ಬಗ್ಗೆ ಟೀಕೆಯನ್ನೇ ಮಾಡುತ್ತಾ
ಕುಳಿತುಕೊಂಡರೆ ಏನೂ ಪ್ರಯೋಜನವಿಲ್ಲ.

ಮಕರ
ತಂದೆಯ ಮಾತಿನಂತೆಯೇ ಎಲ್ಲವೂ
ನಡೆದರೂ ನಿಮ್ಮ ಮಾತಿಗೂ ಬೆಲೆ ಸಿಗಲಿದೆ.
ಕುಟುಂಬದಲ್ಲಿ ಸಾಮರಸ್ಯ ನೆಲೆಯಾಗಲಿದೆ.

ಕುಂಭ
ಗೆಲುವು ಎಂಬುದು ತುಂಬಾ ಕಷ್ಟಪಟ್ಟು
ಪಡೆಯಬೇಕಾದ ಸಂಗತಿ. ಸುಲಭಕ್ಕೆ ಅದು
ನಿಮ್ಮ ಕೈಗೆ ದಕ್ಕುವುದಿಲ್ಲ. ಧೈರ್ಯ ಇರಲಿ.

ಮೀನ 
ಅನುಕರಣೆ ಮಾಡಿದರೂ ನಿಮ್ಮ ಸ್ವಂತಿಕೆಯನ್ನು
ಕೊಂದುಕೊಳ್ಳಬೇಡಿ. ಹೆಚ್ಚು ಓದಿ, ಕಡಿಮೆ
ಮಾತನಾಡಿ. ಶುಭ ಫಲ ದೊರೆಯಲಿದೆ.