ಒಂದು ರಾಶಿಗೆ ಶುಭಫಲವಿದೆ : ಹಣಕಾಸಲ್ಲಿ ಎಚ್ಚರ ಅಗತ್ಯ : ಉಳಿದ ರಾಶಿ? 

ಮೇಷ
ಕ್ಷುಲ್ಲಕ ಕಾರಣಕ್ಕೆ ಮನ ಕೆಡಿಸಿಕೊಳ್ಳುವುದು
ಬೇಡ. ಮತ್ತೊಬ್ಬರ ಸಹಾಯದಿಂದ ಕಾರ್ಯ
ಸಿದ್ಧಿ. ನಿಮ್ಮ ಪಾಡಿಗೆ ನೀವಿದ್ದರೆ ಒಳಿತು.

ವೃಷಭ
ಒಳ್ಳೆಯ ಸಂಗೀತ ಕೇಳುವಿರಿ. ಮನಸ್ಸಿಗೆ
ನೆಮ್ಮದಿ ದೊರೆಯಲಿದೆ. ಮತ್ತು ಪ್ರೀತಿ
ಪಾತ್ರರ ಜೊತೆ ನಾಲ್ಕು ಒಳ್ಳೆಯ ಮಾತನಾಡಿ.

ಮಿಥುನ
ನಿಮ್ಮ ಉಡುಪು ನಿಮ್ಮ ಆತ್ಮವಿಶ್ವಾಸ
ಹೆಚ್ಚಿಸಲಿದೆ. ಮತ್ತೊಬ್ಬರ ಶಕ್ತಿಯನ್ನು
ಪರಿಗಣಿಸಿ ಅವರಿಗೆ ಸಹಾಯ ಮಾಡುವಿರಿ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ...

ಕಟಕ
ಇಡುಗಂಟು ಇಂದು ನಿಮಗೆ ನೆರವಾಗಲಿದೆ.
ಮಂದಿ ಹೇಳಿದ ಬುದ್ಧಿ ಮಾತು ಕೇಳಿ. ನಿಮಗೆ
ಸರಿ ಎನ್ನಿಸಿದ್ದನ್ನು ಮಾಡಿ. ಶುಭ ಫಲವಿದೆ.

ಸಿಂಹ
ಮಕ್ಕಳ ಆರೋಗ್ಯದ ಕಡೆಗೆ ಸೂಕ್ತ ಗಮನ
ಹರಿಸುವುದು ಒಳಿತು. ಕಿರು ಪ್ರವಾಸ
ಮಾಡಲಿದ್ದೀರಿ. ಗಣ್ಯ ವ್ಯಕ್ತಿಗಳ ಭೇಟಿ

ಕನ್ಯಾ
ಮನಸ್ಸು ಏಕಾಂತ ಬಯಸುತ್ತದೆ. ಸುಮ್ಮನೆ
ಮೌನಕ್ಕೆ ಶರಣಾಗಿ. ಯಾರ ಬಗ್ಗೆಯೂ
ಕೆಟ್ಟದಾಗಿ ಮಾತನಾಡುವುದು ಬೇಡ.

ತುಲಾ 
ನೀವು ಹೆಚ್ಚಾಗಿ ನಂಬಿದ ವ್ಯಕ್ತಿಗಳಿಂದ
ಸಹಾಯವಾಗಲಿದೆ. ಹಣಕಾಸಿನ ವ್ಯವಹಾರ
ದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ವೃಶ್ಚಿಕ
ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು
ಸಂಜೆಯ ವೇಳೆಗೆ ತುಸು ಪ್ರಗತಿ ಕಾಣಲಿದೆ.
ಹಿಡಿದ ಕಾರ್ಯದಲ್ಲಿ ಮುನ್ನಡೆ ಸಿಗಲಿದೆ. 

ಧನುಸ್ಸು
ಮನಸ್ಸನ್ನು ಕೆಡಿಸಿಕೊಳ್ಳದೇ ಆನಂದದಿಂದ
ಇದ್ದರೆ ಎಲ್ಲವೂ ಸುಂದರ. ಯಾರದ್ದೋ
ಮಾತಿಗೆ ಕಟ್ಟುಬಿದ್ದು ಸಂಕಷ್ಟಕ್ಕೆ ಸಿಲುಕದಿರಿ.

ಮಕರ
ನೀವು ಮಾಡುತ್ತಿರುವ ಕಾರ್ಯ ಸರಿಯಾಗಿ
ಇದೆಯೇ ಎಂದು ಮತ್ತೆ ಮತ್ತೆ ಪರಿಶೀಲನೆ
ಮಾಡಿಕೊಳ್ಳಿ. ನೆಮ್ಮದಿ ನೆಲೆಯಾಗಲಿದೆ.

ಕುಂಭ
ಸಿಡುಕಿನಿಂದ ಏನೂ ಮಾಡಲು ಸಾಧ್ಯವಿಲ್ಲ.
ಮಕ್ಕಳು ನಿಮ್ಮನ್ನು ಕಂಡರೆ ಭಯಪಡುವುದು
ಬೇಡ. ಎಲ್ಲರೊಡನೆ ಪ್ರೀತಿಯಿಂದ ವರ್ತಿಸಿ.

ಮೀನ 
ಅತಿಯಾದ ಆತ್ಮವಿಶ್ವಾಸ ನಿಮ್ಮ ನೋವಿಗೆ
ಕಾರಣವಾಗುತ್ತದೆ. ಕಾಯಕದಲ್ಲಿ ನಿಷ್ಠೆ ಇರಲಿ.
ಮನಸ್ಸಿನ ಗೊಂದಲಕ್ಕೆ ತೆರೆ ಬೀಳಲಿ