ವೃಶ್ಚಿಕ ರಾಶಿಗೆ ಅತ್ಯಂತ ಶುಭ,ಲಾಭದಾಯಕ : ಉಳಿದ ರಾಶಿ?

ಮೇಷ
ಗೆಲುವು ಪಡೆಯಲು ಅಡ್ಡ ದಾರಿ
ಹಿಡಿಯುವುದು ತರವಲ್ಲ. ನಿಮ್ಮ ವ್ಯಕ್ತಿತ್ವವೇ
ನಿಮ್ಮನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲಿದೆ.

ವೃಷಭ
ಅಸೂಯೆಪಡುತ್ತಲೇ ಕೂತರೆ ಏನೂ
ಮಾಡುವುದಕ್ಕೆ ಸಾಧ್ಯವಿಲ್ಲ. ಕಠಿಣ ಶ್ರಮಕ್ಕೆ
ಮುಂದಾಗಿ. ಹೊಸ ಚಿಂತನೆ ಹುಟ್ಟಲಿದೆ.

ಮಿಥುನ
ಬೇರೆಯವರ ಕೆಲಸ ಮಾಡಿಕೊಡುವುದರಲ್ಲೇ
ಇಡೀ ದಿನ ಕಳೆದುಹೋಗಲಿದೆ. ದೊಡ್ಡ
ಮಟ್ಟದ ಹೂಡಿಕೆ ಬಗ್ಗೆ ಸರಿಯಾಲಿ ಆಲೋಚಿಸಿ.

ಕಟಕ
ಸ್ನೇಹಿತರಿಂದ ಗೇಲಿಗೆ ಒಳಗಾಗಲಿದ್ದೀರಿ.
ಅದನ್ನು ತಮಾಷೆಯಾಗಿಯೇ ತೆಗೆದುಕೊಂಡು
ಮುಂದೆ ಸಾಗುವುದು ಒಳಿತು. ಶುಭ ಫಲ.

ಸಿಂಹ
ಅವರಿವರ ಮೇಲೆ ದೂರುತ್ತಾ ಕೂರುವುದರ
ಬದಲು ನಿಮ್ಮಿಂದ ಆಗುವ ಕೆಲಸವನ್ನು ಮಾಡಿ
ಮುಗಿಸಿ. ಅನಗತ್ಯ ಖರ್ಚುಗಳು ಹೆಚ್ಚಲಿವೆ.

ಕನ್ಯಾ
ಅರ್ಥವಿಲ್ಲದ ಪ್ರಶ್ನೆಗಳಿಗೆ ಸುಮ್ಮನೆ
ಇದ್ದುಬಿಡುವುದೇ ಒಳ್ಳೆಯದ್ದು. ಪ್ರವಾಸಿ
ಸ್ಥಳಕ್ಕೆ ಕಾರ್ಯ ನಿಮಿತ್ತ ಭೇಟಿ ನೀಡಲಿದ್ದೀರಿ.

ತುಲಾ 
ಅಧಿಕಾರಿ ವರ್ಗಕ್ಕೆ ಇದು ಸುದಿನ. ಮತ್ತೊ
ಬ್ಬರಿಗೆ ಬುದ್ಧಿ ಹೇಳುವ ಮೊದಲು ನೀವು ನಿಮ್ಮ
ತಪ್ಪುಗಳನ್ನು ತಿದ್ದಿಕೊಳ್ಳುವುದು ಸೂಕ್ತ.

ವೃಶ್ಚಿಕ
ಇತರರು ಸಂತೋಷಗೊಳ್ಳಲು ನೀವು
ಕಾರಣವಾಗಲಿದ್ದೀರಿ. ಹಿಂದಿನ ನೋವುಗಳೆಲ್ಲಾ
ಮಾಯವಾಗಲಿವೆ. ಧೈರ್ಯ ಹೆಚ್ಚಾಗಲಿದೆ. 

ಧನುಸ್ಸು
ನಾಳೆಯ ಬಗ್ಗೆ ಚಿಂತೆ ಮಾಡುತ್ತಾ, ಇಂದಿನ
ದಿನವನ್ನು ಹಾಳು ಮಾಡಿಕೊಳ್ಳಬೇಡು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ.

ಮಕರ
ಏಕಾಂತವಾಗಿ ಇದ್ದು ಬಿಡಲಿದ್ದೀರಿ. ಕೆಟ್ಟ
ಆಲೋಚನೆಗಳಿಗೆ ಕಡಿವಾಣ ಬೀಳಲಿದೆ.
ಕೀಟು ಮಟ್ಟದ ರಾಜಕೀಯದಿಂದ ದೂರವಿರಿ.

ಕುಂಭ
ಒಂದೇ ವಿಚಾರದ ಬಗ್ಗೆ ಇಡೀ ದಿನ ಯೋಚನೆ
ಮಾಡುತ್ತಾ ಕೂತು, ಮನಸ್ಸು ಗೊಂದಲದ
ಗೂಡಾಗಲಿದೆ. ಹಿರಿಯರ ಸಲಹೆ ಪಡೆಯಿರಿ.

ಮೀನ 
ದೂರದ ಬೆಟ್ಟ ಯಾವಾಗಲೂ ನುಣ್ಣಗೆ
ಕಾಣಿಸುವುದು. ಯಾವ ವಿಷಯವೇ ಆದರೂ
ಹತ್ತಿರದಿಂದ ಗಮನಿಸಿ ನಿರ್ಧಾರ ಕೈಗೊಳ್ಳಿ