ಶುಭದಾಯಕವು ನಿಮಗೆ : ನಿಮ್ಮ ರಾಶಿಗೂ ಅನುಕೂಲವಿದೆಯೇ? 


ಮೇಷ
ನಿಮ್ಮ ಏಳಿಗೆಗಾಗಿ ಶ್ರಮಿಸುವ ಜೀವಗಳಿಗೆ
ಸೂಕ್ತ ಗೌರವ ನೀಡಿ. ಹಣಕಾಸಿನ ವ್ಯವಹಾರ
ದಲ್ಲಿ ಹೆಚ್ಚು ನಿಗಾ ಇಟ್ಟುಕೊಂಡರೆ ಒಳಿತು.

ವೃಷಭ
ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳ
ಬೇಡಿ. ನಿಧಾನಕ್ಕೆ, ಆಲೋಚನೆ ಮಾಡಿ
ಯಾವುದೇ ಕಾರ್ಯವನ್ನಾದರೂ ಕೈಗೊಳ್ಳಿ.

ಮಿಥುನ
ಪಕ್ಕಾ ಲೆಕ್ಕಾಚಾರ ಇಟ್ಟುಕೊಂಡು ಹೊಸ
ಉದ್ಯಮವನ್ನು ಶುರು ಮಾಡಿ. ಸಮಯಕ್ಕೆ
ಬೆಲೆ ನೀಡಿದರೆ ಬದುಕು ಸುಂದರವಾಗುತ್ತದೆ.

ಕಟಕ
ಹಳೆಯ ಗೆಳೆಯರು ಇಂದು ತುಂಬಾ
ಹತ್ತಿರವಾಗಲಿದ್ದಾರೆ. ಆರೋಗ್ಯದ ಕಡೆಗೆ
ಗಮನ ನೀಡಿ. ನೆಮ್ಮದಿ ಹೆಚ್ಚಾಗಲಿದೆ.

ಸಿಂಹ
ಒಳಗೆ ನೋವು ಇಟ್ಟುಕೊಂಡು ಹೊರಗೆ ನಗು
ನಗುತ್ತಾ ಇಡೀ ದಿನ ಕಳೆಯಲಿದ್ದೀರಿ. ನಿಮ್ಮ
ಬೆನ್ನಿಗೆ ನಿಂತವರ ಋಣವನ್ನು ಮರೆಯದಿರಿ

ಕನ್ಯಾ
ಎಲ್ಲರೂ ತಪ್ಪು ಮಾಡುತ್ತಾರೆ. ಹಾಗಾಗಿ ನೀವು
ತಪ್ಪುಗಳನ್ನು ಖಂಡಿಸಿ, ತಪ್ಪು ಮಾಡಿದ
ವ್ಯಕ್ತಿಯನ್ನಲ್ಲ. ಮುಂದಾಲೋಚನೆ ಇರಲಿ.

ತುಲಾ 
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ನಿಮ್ಮ ಅನುಕೂಲಕ್ಕಾಗಿ ಮತ್ತೊಬ್ಬರ
ಜೀವನದಲ್ಲಿ ಆಟ ಆಡುವುದು ಬೇಡ.

ವೃಶ್ಚಿಕ
ಗಾಯ ವಾಸಿಯಾದರೂ ಕಲೆ ಹಾಗೆಯೇ
ಉಳಿಯುವಂತೆ ಹಳೆಯ ನೆನಪುಗಳು ಇಂದು
ನಿಮ್ಮನ್ನು ಕಾಡಲಿವೆ. ಶುಭ ಸುದ್ದಿಯೂ ಇದೆ. 

ಧನುಸ್ಸು
ಎಲ್ಲರ ಭಾವನೆಗಳಿಗೂ ನೀವು ಬೆಲೆ ನೀಡಲು
ಸಾಧ್ಯವಾಗದೇ ಇದ್ದರೂ ಮತ್ತೊಬ್ಬರ
ಭಾವನೆಗಳಿಗೆ ನಿಮ್ಮಿಂದ ಘಾಸಿಯಾಗದಿರಲಿ.

ಮಕರ
ಭವಿಷ್ಯದ ಬಗ್ಗೆ ಸೂಕ್ತ ಆಲೋಚನೆ ಮಾಡಿ
ಅದಕ್ಕೆ ತಕ್ಕಂತೆ ಇಂದಿನಿಂದ ಕಾರ್ಯ
ಆರಂಭಿಸಿ. ಸಂಬಂಧಿಗಳು ನೆರವಾಗಲಿದ್ದಾರೆ.

ಕುಂಭ
ಬದುಕು ನಿಮ್ಮ ಇಷ್ಟದಂತೆಯೇ ಇರುವುದಿಲ್ಲ.
ಅಪರಿಚಿತರಿಂದ ಬದುಕಿಗೆ ಹೊಸ ತಿರುವು
ದೊರೆಯಲಿದೆ. ಆತ್ಮವಿಶ್ವಾಸ ಇರಲಿ.

ಮೀನ 
ಮುಂದೆ ಸಾಗುವಾಗ ಹಿಂದೆ ನಡೆದು ಬಂದ
ದಾರಿಯನ್ನು ಮರೆಯಬೇಡಿ. ನಿಮ್ಮ ಮೇಲೆ
ಆರೋಪ ಬಂದಾಗ ಮೌನವಾಗಿ ಎದುರಿಸಿ.