ಮೇಷ
ನಂಬಿಕೆ ಒಳ್ಳೆಯದ್ದು. ಆದರೆ ಅತಿಯಾದ
ನಂಬಿಕೆ ನಿರಾಶೆಯನ್ನು ಉಂಟು ಮಾಡುವ
ಸಾಧ್ಯತೆ ಇದೆ. ಶಾಂತ ಮನಸ್ಸಿನಿಂದಿರಿ.

ವೃಷಭ
ಸಾಲಕ್ಕೆ ಕೈ ಹಾಕಬೇಕಾದ ಸಾಧ್ಯತೆ ಇದೆ.
ಮನೆಯಲ್ಲಿ ನೆಮ್ಮದಿ ನೆಲೆಯಾಗುವುದು.
ಸಹಾಯಕ್ಕೆ ಸಂಬಂಧಿಗಳ ಬಳಿ ಹೋಗದಿರಿ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ...

ಮಿಥುನ
ಅಗತ್ಯಕ್ಕಿಂತ ಹೆಚ್ಚು ಊಟ ಮತ್ತು ಖರ್ಚು
ಮಾಡದಿರಿ. ಅತಿಯಾದ ಆತ್ಮವಿಶ್ವಾಸ ಬೇಡ.
ಕೌಟುಂಬಿಕವಾಗಿ ನೆಮ್ಮದಿ ನೆಲೆಯಾಗಲಿದೆ.

ಕಟಕ
ಪರ ನಿಂದೆಗೆ ತಲೆ ಕೆಡಿಸಿಕೊಳ್ಳುತ್ತಾ
ಕೂರುವುದು ಬೇಡ. ನಿಮ್ಮ ಪಾಡಿಗೆ ನೀವು
ಇರುವುದು ಸಂತೋಷಕ್ಕೆ ಕಾರಣವಾಗುವುದು.

ಸಿಂಹ
ಸೌಮ್ಯ ಸ್ವಭಾವದ ವ್ಯಕ್ತಿಗಳ ಭೇಟಿ
ಮಾಡಲಿದ್ದೀರಿ. ಆದಾಯದಲ್ಲಿ ಏರಿಕೆ.
ಖರ್ಚಿನ ಮೇಲೆ ಹಿಡಿದ ಸಾಧಿಸಲಿದ್ದೀರಿ.

ಕನ್ಯಾ
ಆಗುವುದೆಲ್ಲಾ ಒಳ್ಳೆಯದ್ದಕ್ಕೇ ಆಗಿದೆ
ಎಂದುಕೊಂಡು ಮುಂದೆ ಸಾಗುತ್ತಿರಿ. ಕೆಲಸದ
ಒತ್ತಡ ನಿಮ್ಮ ಮೇಲೆ ಹೆಚ್ಚು ಬೀಳಲಿದೆ.

ತುಲಾ
ಹಿಡಿದ ಕಾರ್ಯ ಪ್ರಾರಂಭದಲ್ಲಿ ಹಿನ್ನಡೆ
ಕಂಡರೂ ಸತತ ಪ್ರಯತ್ನದಿಂದ ಗೆಲುವಾಗ
ಲಿದೆ. ಶತ್ರುಗಳನ್ನೂ ಗೌರವದಿಂದ ಕಾಣಿರಿ.

ವೃಶ್ಚಿಕ
ದಿನಾಂತ್ಯಕ್ಕೆ ಶುಭ ಸುದ್ದಿ ಕೇಳಲಿದ್ದೀರಿ. ಹಿಂದೆ
ಮಾಡಿ ಕಾರ್ಯಗಳಿಗೆ ಇಂದು ಪ್ರತಿಫಲ
ದೊರೆಯಲಿದೆ. ಎಲ್ಲರೊಂದಿಗೂ ಒಂದಾಗಿ. 

ಧನುಸ್ಸು
ಮನಸ್ಸಿನ ನೋವಿಗೆ ನೀವೇ ಮದ್ದು
ಕಂಡುಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು
ನೀವು ಪ್ರಯತ್ನ ಮಾಡುವುದು ಬೇಡ.

ಮಕರ
ಹಳೆಯ ನೆನಪುಗಳು ಇಂದು ಹೆಚ್ಚಾಗಿ
ಕಾಡಲಿವೆ. ತಾಳ್ಮೆಯಿಂದ ವರ್ತನೆ ಮಾಡಿದರೆ
ಯಾರೊಂದಿಗೂ ಮನಸ್ಥಾಪ ಇರುವುದಿಲ್ಲ.

ಅನರ್ಹರ ಭವಿಷ್ಯ: ನೋಡಿ ಲೈವ್ ಬ್ಲಾಗ್

ಕುಂಭ
ಮನಸ್ಸು ಸಂತೋಷದಿಂದ ಕೂಡಿರಲಿದೆ.
ಉಳಿತಾಯದ ಕಡೆಗೆ ಹೆಚ್ಚು ಗಮನ
ನೀಡುವಿರಿ. ಗಣೇಶನ ಪೂಜೆ ಮಾಡಿರಿ.

ಮೀನ
ನೀವು ಮಾಡಿದ ಪುಣ್ಯದ ಕಾರ್ಯಗಳು ನಿಮ್ಮ
ಕೈ ಹಿಡಿಯಲಿವೆ. ಹೊಸ ವಿಚಾರಗಳ ಬಗ್ಗೆ
ಸರಿಯಾಗಿ ತಿಳಿದುಕೊಂಡು ಹೆಜ್ಜೆ ಹಾಕಿರಿ.