Asianet Suvarna News Asianet Suvarna News

ಈ ರಾಶಿಗೆ ಹೆಚ್ಚಿನ ಹಣ ಕೈ ಸೇರಲಿದೆ : ಉಳಿದ ರಾಶಿ?

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ

Daily Bhavishya 09 August 2019
Author
Bengaluru, First Published Aug 9, 2019, 7:05 AM IST
  • Facebook
  • Twitter
  • Whatsapp

ಈ ರಾಶಿಗೆ ಹೆಚ್ಚಿನ ಹಣ ಕೈ ಸೇರಲಿದೆ : ಉಳಿದ ರಾಶಿ?

ಮೇಷ: ಸಂಜೆ ವೇಳೆಗೆ ನಿಮ್ಮ ಎಲ್ಲಾ ಆತಂಕಗಳಿಗೂ ತೆರೆ ಬೀಳಲಿದೆ. ಹಣದ ಮೂಲಕವೇ ಎಲ್ಲವನ್ನೂ ಅಳತೆ ಮಾಡಲು ಹೋಗಬೇಡಿ. ಶುಭ ಫಲ

ವೃಷಭ:ಅತಿಯಾದರೆ ಅಮೃತವೂ ವಿಷವಾಗುತ್ತದೆ. ಇದು ಇಂದು ನಿಮ್ಮ ಜೀವನಕ್ಕೂ ಅನ್ವಯವಾಗುತ್ತದೆ. ಮೌನವಾಗಿ ಇದ್ದು ಬಿಡಿ.

ಮಿಥುನ: ನೀವೇ ಪಂಡಿತರು ಎಂಬಂತೆ ಆಡುವುದು ಬೇಡ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಿ. ನೆಮ್ಮದಿಗಾಗಿ ಪರಿತಪಿಸುವಿರಿ.

ಕಟಕ: ನಿಮಗೆ ಸಂಬಂಧಪಡದ ವಿಚಾರ ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳುವುದಕ್ಕೆ ಹೋಗಬೇಡಿ. ನಯ ವಂಚಕರಿಂದ ದೂರವಿದ್ದರೆ ಒಳಿತು

ಸಿಂಹ: ಹೆಚ್ಚು ಆದಾಯ ನಿರೀಕ್ಷೆ ಮಾಡಿದರೂ ಅದು ಸಾಕಾರವಾಗುವುದಿಲ್ಲ. ಸ್ವಂತ ವ್ಯಾಪಾರ ಮಾಡುವವರಿಗೆ ಖರ್ಚು ಹೆಚ್ಚಾಗುವುದು.

ಕನ್ಯಾ: ನಿಮ್ಮ ಸ್ನೇಹಿತರ ಬಂಡವಾಳ ಏನು ಎನ್ನುವುದು ಇಂದು ನಿಮಗೆ ತಿಳಿಯಲಿದೆ. ಮತ್ತೊಬ್ಬರ ಸಂತೋಷಕ್ಕೆ ನಿಮ್ಮಿಂದ ಹಾನಿಯಾಗದಿರಲಿ.

ತುಲಾ: ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಹಣ ಕೈ ಸೇರಲಿದೆ

ವೃಶ್ಚಿಕ: ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹೊಸ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತೆ ಇಂದು ನಿಮಗೆ ಬಂಡವಾಳ.

ಮಕರ:ಮಿಥ್ಯಾರೋಪಗಳಿಂದ ದೂರವಾಗಲಿದ್ದೀರಿ. ನಿಮ್ಮ ಕೆಲಸಕ್ಕೆ ದೊಡ್ಡ ಮಟ್ಟದ ಮೆಚ್ಚುಗೆಯೂ ದೊರೆಯಲಿದೆ. ಆರೋಗ್ಯದಲ್ಲಿ ಸ್ಥಿರ

ಧನುಸ್ಸು: ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆಯ ತುಂಬಾ ಸಂತೋಷದ ವಾತಾವರಣ ಏರ್ಪಡಲಿದೆ. ಹೊಸ ಕಾರ್ಯಕ್ಕೆ ಕೈ ಹಾಕುವಿರಿ.

ಕುಂಭ: ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಇಂದು ಒಳ್ಳೆಯ ಲಾಭ ದೊರೆಯಲಿದೆ. ಇಷ್ಟವಾದ ವ್ಯಕ್ತಿಗಳೊಂದಿಗೆ ಇಡೀ ದಿನ ಕಳೆಯಲಿದ್ದೀರಿ

ಮೀನ: ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚಿಸಿ. ನಿಮ್ಮ ಮನೋಬಲವೇ ನಿಮ್ಮನ್ನು ಮುನ್ನಡೆಸಲಿದೆ.

Follow Us:
Download App:
  • android
  • ios