Asianet Suvarna News Asianet Suvarna News

ಇಂದು ಈ ರಾಶಿಯವರಿಗೆ ದೊಡ್ಡ ವ್ಯಕ್ತಿಗಳಿಂದ ಗೌರವ ದೊರೆಯಲಿದೆ

ಸೋಮವಾರ ಡಿಸೆಂಬರ್ 30, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ.

Daily Astrology in Kannada 30 Dec 2019 Horoscope
Author
Bengaluru, First Published Dec 30, 2019, 7:14 AM IST
  • Facebook
  • Twitter
  • Whatsapp

ಮೇಷ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಣ್ಣ ವಿಚಾರಕ್ಕೆ ಆಪ್ತರೊಂದಿಗೆ ಮನಸ್ತಾಪ ಉಂಟಾಗಲಿದೆ. ಕುಗ್ಗದೇ ಮುಂದೆ ಸಾಗಿ.

ವೃಷಭ: ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಚರ್ಚೆ ಏರ್ಪಡಲಿದೆ. ಎಲ್ಲರ ಪಾಲಿಗೂ ನೀವು ಒಳ್ಳೆಯವರಾಗಲು ಸಾಧ್ಯವಿಲ್ಲ.

ಮಿಥುನ: ಪರಮಾಪ್ತರ ಸಂಕಷ್ಟಕ್ಕೆ ನೀವು ನೆರವಾಗಿ ನಿಲ್ಲಲಿದ್ದೀರಿ. ವ್ಯಾಪಾರದಲ್ಲಿ ಲಾಭ. ದೂರದ ಪ್ರವಾಸ ಮಾಡುವ ಅನಿವಾರ್ಯ ಬರಲಿದೆ.

ಕಟಕ: ಮೈ ತುಂಬಾ ಕೆಲಸವಿದೆ ಎಂದು ಚಿಂತೆ ಮಾಡದೇ, ಸ್ವಲ್ಪ ಸ್ವಲ್ಪವಾಗಿ ಮಾಡಿ ಮುಗಿಸಿ. ಎಲ್ಲವೂ ಒಳ್ಳೆಯದೇ ಆಗಲಿದೆ. ಶುಭ ಫಲ.

ಸಿಂಹ: ಬೇಡದ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವುದು ಬೇಡ. ಮತ್ತೊಬ್ಬರನ್ನು ಮೆಚ್ಚಿಸಲು ಹೋಗಬೇಡಿ.

ಕನ್ಯಾ: ಅತಿಯಾದ ನಿದ್ದೆ, ಅತಿಯಾದ ಊಟ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತವೆ. ಆಸೆಗೆ ಬಿದ್ದು ಮೋಸ ಹೋಗದಿರಿ.

ಹೊಸ ವರ್ಷ ಆರಂಭವಾಗುವ ಈ ವಾರ ನಿಮ್ಮ ರಾಶಿಯ ಫಲವೇನು?

ತುಲಾ: ದೊಡ್ಡ ವ್ಯಕ್ತಿಗಳಿಂದ ನಿಮಗೆ ಒಳ್ಳೆಯ ಗೌರವ ದೊರೆಯಲಿದೆ. ಅನಗತ್ಯ ವಿಚಾರಗಳ ಬಗ್ಗೆ  ಹೆಚ್ಚು ಚಿಂತೆ ಮಾಡುವುದು ಬೇಡ.

ವೃಶ್ಚಿಕ: ನೀವು ಮತ್ತೊಬ್ಬರಿಗೆ ನೀತಿ ಹೇಳುವ ಬದಲಿಗೆ ನೀವು ನೀತಿ ಮಾರ್ಗದಲ್ಲಿ ಮುಂದೆ ಸಾಗಿ. ಮಾಡಿದ ತಪ್ಪನ್ನು ಒಪ್ಪಿಕೊಂಡು ಬಿಡಿ.

ಧನಸ್ಸು: ಆದಾಯದಲ್ಲಿ ಏರಿಕೆ. ಅದೇ ರೀತಿ ಖರ್ಚು ಹೆಚ್ಚಾಗಲಿದೆ. ಕೋರ್ಟ್ ವ್ಯಾಜ್ಯಗಳು ಮತ್ತಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆ.

ಮಕರ: ಮತ್ತೊಬ್ಬರ ತಪ್ಪುಗಳನ್ನು ಹುಡುಕುವುದೇ ನಿಮ್ಮ ಕೆಲಸವಾಗಬಾರದು. ಕೋಪದಿಂದ ಮೊದಲು ಕೆಡುವುದು ನಿಮ್ಮ ಮನಸ್ಸು.

ಕುಂಭ: ಯಾರೋ ಹೇಳಿದ ಮಾತಿಗೆ ನೀವು ಸಾಕ್ಷಿಯಾಗಿ ನಿಲ್ಲಬೇಕಾದೀತು. ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಉಂಟಾಗಲಿದೆ. ಶುಭಫಲ.

ಮೀನ: ಗೊಂದಲಗಳ ನಡುವಲ್ಲಿ ಶುಭ ಕಾರ್ಯ ಮಾಡುವುದು ಬೇಡ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಗಣೇಶನ ಸ್ತುತಿ ಮಾಡಿ.

Follow Us:
Download App:
  • android
  • ios