Asianet Suvarna News Asianet Suvarna News

ಇಂದು ಈ ರಾಶಿಯವರ ಜೀವನ ಶೈಲಿಯಲ್ಲಿ ಬದಲಾವಣೆಯಾಗಲಿದೆ

ಶನಿವಾರ ಡಿಸೆಂಬರ್ 28, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ.
 

Daily Astrology in Kannada 28 Dec 2019 Horoscope
Author
Bengaluru, First Published Dec 28, 2019, 7:23 AM IST
  • Facebook
  • Twitter
  • Whatsapp

ಮೇಷ: ನೀವು ಸಂತೋಷಗೊಂಡು ನಿಮ್ಮವರನ್ನೂ ಸಂತೋಷಗೊಳಿಸುವಿರಿ. ನಾಳಿನ ಕೆಲಸವನ್ನು ಇಂದೇ ಮಾಡಿ ಮುಗಿಸಲಿದ್ದೀರಿ. ಶುಭಫಲ.

ವೃಷಭ: ಶುಭ ಕಾರ್ಯಗಳನ್ನು ಸ್ವಲ್ಪ ಅವಧಿಗೆ ಮುಂದೂಡುವುದು ಸೂಕ್ತ. ಮನೆಯ ವಾಸ್ತುವಿನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ.

ಮಿಥುನ: ಕೂಡಿಟ್ಟ ಹಣ, ಗಳಿಸಿದ ಗೌರವ ಇಂದು ನಿಮ್ಮ ಉಪಯೋಗಕ್ಕೆ ಬರಲಿವೆ. ಏನೇ ಕೆಲಸ ಮಾಡುವುದಿದ್ದರೂ ಆಲೋಚನೆ ಮಾಡಿ.

ಕಟಕ: ಗೆಲುವು ಪಡೆಯಬೇಕು ಎಂದು ಮುಂದೆ ಸಾಗುವಾಗ ಸೋಲುವುದಕ್ಕೂ ಸಿದ್ಧವಾಗಿರಬೇಕು. ಆದಾಯದಲ್ಲಿ ಇಳಿಕೆಯಾಗಲಿದೆ.

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..?

ಸಿಂಹ: ನಿಮ್ಮ ಹಳದಿ ಕಣ್ಣಿನಿಂದ ಕಂಡಿದ್ದೆಲ್ಲವೂ ಸತ್ಯ ಎಂದು ತಿಳಿಯುವುದು ಬೇಡ. ಶಾಂತ ಮನಸ್ಸಿನಿಂದ ಪರಾಮರ್ಶೆ ಮಾಡಿ. ಶುಭಫಲ.

ಕನ್ಯಾ: ಸಣ್ಣ ತಪ್ಪು ನಿಮ್ಮ ಇಡೀ ದಿನವನ್ನು ಕಾಡಲಿದೆ. ಸುಂದರ ನಾಳೆಗಾಗಿ ಇಂದಿನಿಂದಲೇ ತಯಾರು ಮಾಡಿಕೊಳ್ಳಿ. ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ.

ತುಲಾ: ಸಂಸಾರದಲ್ಲಿ ಇದ್ದ ಗೊಂದಲಗಳು ಕೊನೆಯಾಗಲಿವೆ. ಯಾರ ಬಗ್ಗೆಯೂ ವ್ಯಂಗ್ಯವಾಗಿ ಮಾತನಾಡುವುದು ಬೇಡ.

ವೃಶ್ಚಿಕ: ಕೆಲವರು ನಿಮ್ಮನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಬಹುದು. ಧೈರ್ಯವಾಗಿ ನಿಂತು ಹೋರಾಟ ಮಾಡಿ. ಆತ್ಮಸ್ಥೈರ್ಯ ಇರಲಿ.

ಧನಸ್ಸು: ನಗು ನಗುತ್ತಲೇ ಇಡೀ ದಿನವನ್ನು ಕಳೆಯಲಿದ್ದೀರಿ. ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಿ. ಹಿಡಿದ ಕಾರ್ಯವನ್ನು ಮಾಡಿರಿ.

ಮಕರ: ಜೀವನ ಶೈಲಿಯಲ್ಲಿ ಬದಲಾವಣೆಯಾಗಲಿದೆ. ಹಿಂದೆ ಮಾಡಿದ್ದ ತಪ್ಪನ್ನು ಮತ್ತೆ ಪುನರಾವರ್ತನೆ ಮಾಡುವುದು ಬೇಡ. ಶುಭಫಲ.

ಕುಂಭ: ನನಗೇ ಎಲ್ಲವೂ ತಿಳಿದಿದೆ ಎನ್ನುವ ಅಹಂಕಾರಿಗಳಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಒಳ್ಳೆಯತನವೇ ನಿಮ್ಮನ್ನು ಕಾಯಲಿದೆ.

ಮೀನ: ಸೂಕ್ತ ಸಂದರ್ಭದಲ್ಲಿ ಕೈಗೊಂಡ ನಿರ್ಣಯ ನಿಮಗೆ ಇಂದು ವರದಾನವಾಗಲಿದೆ. ಸ್ವಾರ್ಥಿಗಳ ಎದುರು ವಾದ ಮಾಡದಿರುವುದು ಲೇಸು.

Follow Us:
Download App:
  • android
  • ios